ಡಿಕೆಶಿ ನಿವಾಸದ ಮೇಲೆ ಸಿಬಿಐ ದಾಳಿ: ರಾಜಕೀಯ ಪ್ರೇರಿತ ಎಂದ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮನೆಯ ಮೇಲೆ ಸಿಬಿಐ ನಡೆಸಿರುವ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಮನೆಯ ಮೇಲೆ ಸಿಬಿಐ ನಡೆಸಿರುವ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. 

ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ. ಉಪಚುನಾವಣೆಗೂ ದಾಳಿಗೂ ಯಾವುದೇ ಸಂಬಂಧವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿಎನ್.ಅಶ್ವತ್ಥ್ ನಾರಾಯಣ್ ಅವರು ಹೇಳಿದ್ದಾರೆ. 

ಚುನಾವಣೆಗೂ ಸಿಬಿಐ ದಾಳಿಗೂ ಯುವೇದ ಸಂಬಂಧವಿಲ್ಲ. ಈಗಾಗಲೇ ಐಟಿ, ಇಡಿ ದಾಳಿ ನಡೆದಿತ್ತು. ಇದು ಮುಂದುವರೆದ ಭಾಗವಿರಬಹುದು. ಪ್ರಾಮಾಣಿಕತೆ ಸಾಬೀತಿಗೆ ಡಿಕೆಶಿಗೆ ಇದು ಒಳ್ಳೆಯ ಅವಕಾಶ ಎಂದು ಹೇಳಿದ್ದಾರೆ. 

ದಾಳಿ ರಾಜಕೀಯ ಪ್ರೇರಿತವಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಅಮಿತ್ ಶಾ ಮೇಲೆ ದಾಳಿ ಮಾಡಿತ್ತು. ಜಗನ್ಮೋಹನ್ ರೆಡ್ಡಿಯವರನ್ನು ಜೈಲಿಗೆ ಹಾಕಲಾಗಿತ್ತು. ಆದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತವಾಗಿ ಮಾಡಿತು ಅಂದುಕೊಳ್ಳಬಹುದಾ? ಸಿದ್ದುಗಿಂತ ದೊಡ್ಡ ನಾಯಕ ಡಿಕೆಶಿ ಅಲ್ಲ. ರಾಜಕೀಯ ಪ್ರೇರಿತವಾಗಿದ್ದರೇ ಸಿದ್ದುರನ್ನ ಟಾರ್ಗೆಟ್ ಮಾಡಬೇಕಿತ್ತಲ್ವಾ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ. 

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸಾಕ್ಷ್ಯ ಸಂಗ್ರಹಿದ ಬಳಿಕವೇ ಸಿಬಿಐ ದಾಳಿ ಮಾಡುತ್ತದೆ ಎಂದು 70 ವರ್ಷ ಆಳಿದ ಕಾಂಗ್ರೆಸ್ಸಿಗೆ ಗೊತ್ತಿಲ್ಲ ಎಂದರೆ, ಇಷ್ಟು ವರ್ಷ ಆ ಪಕ್ಷವೇ ಸಿಬಿಐ ಅನ್ನು ವಿರೋಧಿಗಳ ಹಣಿಯಲು ಬಳಸುತ್ತಿತ್ತು ಎಂದು ಅವರೇ ಒಪ್ಪಿದಂತಾಗಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com