ಡಿ.ಕೆ.ಶಿವಕುಮಾರ್ ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಬರಲಿ: ಸಚಿವ ಕೆ.ಎಸ್.ಈಶ್ವರಪ್ಪ

ಡಿ.ಕೆ.ಶಿವಕುಮಾರ್ ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಬರಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕೆ.ಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ

ಬೆಂಗಳೂರು: ಡಿ.ಕೆ.ಶಿವಕುಮಾರ್ ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಬರಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಈ ಹಿಂದೆ ಕೂಡ ಇಂತಹ ದಾಳಿಯಾಗಿದೆ.ಇದೇನು ಹೊಸದಲ್ಲ. ದಾಳಿ ವೇಳೆ ಅವರ ದೆಹಲಿ ಮತ್ತು ಬೆಂಗಳೂರು ನಿವಾಸದಲ್ಲಿ ಹವಾಲ ಹಣ ಸಿಕ್ಕಿರುವ ಬಗ್ಗೆ ತಿಳಿದಿತ್ತು. ಈ ಬಗ್ಗೆ ಇಡಿ ಮತ್ತು ಐಡಿ  ಇಲಾಖೆಗಳು ತನಿಖೆ ನಡೆಸುತ್ತಿವೆ. ಸಿಬಿಐ ದಾಳಿಯು ರಾಜಕೀಯ ಪ್ರೇರಿತವಾಗಿಲ್ಲ ಎಂದು  ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆದಿರುವುದನ್ನು ಕಾಂಗ್ರೆಸ್ ನಾಯಕರು ರಾಜ ಕೀಯ ಪ್ರೇರಿತ,ಉಪ ಚುನಾವಣೆಯ ವೇಳೆ ದಾಳಿ ನಡೆಸುವ ಮೂಲಕ ರಾಜಕೀಯವಾಗಿ ಕಟ್ಟಿಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿರುವುದನ್ನು  ನೋಡಿ ಆಶ್ವರ್ಯವಾಗುತ್ತಿದೆ. ಈ ಹಿಂದೆ ಯಡಿಯೂರಪ್ಪ ಮೇಲೂ ಸಹ ದಾಳಿ ಆಗಿತ್ತು.ಆಗ ಕಾಂಗ್ರೆಸ್ ನಾಯಕರು ಎನಂತ ಹೇಳಿಕೆ ಕೊಟ್ಟಿದ್ದರು. ಉಪ್ಪು ತಿಂದೋನೋ ನೀರು ಕುಡಿಯಲೇಬೇಕು ಅಂತ ಹೇಳಿದ್ದರು. ಈಗ ಕಾಂಗ್ರೆಸ್ ಗೊಂದು ಕಾನೂನು ಬೇರೆ ಇದೆಯಾ..? ಎಂದು ಪ್ರಶ್ನಿಸಿರುವ ಅವರು ತಪ್ಪು ಮಾಡಿಲ್ಲ  ಎನ್ನುವುದಾದರೆ ಡಿಕೆ.ಶಿವಕುಮಾರ್ ತನಿಖೆಗೆ ಒಳಗಾಗಲಿ.ತನಿಖೆ ಎದುರಿಸಿ ಸೀತೆಯಂತೆ ಪವಿತ್ರವಾಗಿ ಹೊರಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com