ಸಿಬಿಐ, ಐಟಿ, ಇಡಿ ಬಿಜೆಪಿ ಬಾಗಿಲು ಕಾಯುವ ಬೀದಿ ನಾಯಿಗಳು: ದಿನೇಶ್ ಗುಂಡೂರಾವ್

ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸಂವಿಧಾನದ ಕಾವಲು ನಾಯಿಗಳೆಂದು ಸಂವಿಧಾನದಲ್ಲಿಯೇ ತಿಳಿಸಲಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಅವು ಸಂವಿಧಾನದ ಕಾವಲುನಾಯಿಗಳಾಗಿ...
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್

ಬೆಂಗಳೂರು: ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸಂವಿಧಾನದ ಕಾವಲು ನಾಯಿಗಳೆಂದು ಸಂವಿಧಾನದಲ್ಲಿಯೇ ತಿಳಿಸಲಾಗಿದೆ. ಆದರೆ ಬಿಜೆಪಿ ಸರ್ಕಾರದಲ್ಲಿ ಅವು ಸಂವಿಧಾನದ ಕಾವಲುನಾಯಿಗಳಾಗಿ ಉಳಿಯದೇ ಬಿಜೆಪಿ ಬಾಗಿಲು ಕಾಯುವ ಬೀದಿ ನಾಯಿಗಳಾಗಿವೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಬಾರಿಯೂ ಎದುರಾಳಿ ಪಕ್ಷದವರ ಮೇಲೆ ಏಕೆ ಇಂತಹ ದಾಳಿಯಾಗುತ್ತವೆ ಎನ್ನುವುದನ್ನು ಜನರು ತಿಳಿಯಬೇಕು. ಈ ರೀತಿ ದಾಳಿಮಾಡುವಂತೆ ಈ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರಗಳಿಂದ ತರಬೇತಿ ನೀಡಲಾಗಿದೆ. ಈ ಕೆಲಸವನ್ನು ಈ ಸಂಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಬಿಜೆಪಿಗೆ ತಮ್ಮ ನಿಯತ್ತು ತೋರಿಸುತ್ತಿವೆ ಎಂದು ಐಟಿ,ಇಡಿ,ಸಿಬಿಐ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಕುಟುಂಬದವರ ಮೇಲೆ ದಾಳಿ ನಡೆದಿದೆ. ಒಟ್ಟು 14 ಕಡೆ ಸಿಬಿಐ ರೈಡ್ ಆಗಿದೆ. ಇದು ರಾಜಕೀಯ ಪ್ರೇರಿತವಾದ ದಾಳಿ. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಸಿಬಿಐಗೆ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ಸದಸ್ಯರು ಆರ್ ಟಿ ಜಿ ಎಸ್ ಮೂಲಕ ಹವಾಲಾ ಹಣ ತೆಗೆದುಕೊಳ್ಳುತ್ತಿದ್ದು, ಸರ್ಕಾರದ ಈ ಭ್ರಷ್ಟಾಚಾರ ಸಿಬಿಐ, ಐಟಿ, ಇಡಿಗೆ ಗೊತ್ತಿಲ್ಲವೇ? ಏಕೆ ಅವರೆಲ್ಲ ದೂರು ದಾಖಲಿಸಿಕೊಂಡಿಲ್ಲ? ಎಂದು ಪ್ರಶ್ನಿಸಿದ ಕೃಷ್ಣಬೈರೇಗೌಡ ಅವರು. ಯಡಿಯೂರಪ್ಪ ಕುಟುಂಬದ ವಿರುದ್ಧ ಕೂಡಲೇ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com