ನನ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ: ಸಿಬಿಐ ಅಧಿಕಾರಿಗಳ ಮೇಲೆ ಡಿಕೆ.ಶಿವಕುಮಾರ್ ಆರೋಪ

ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿಗೆ ಹೊಡೆದಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. 
ನಂಜಾವದೂತ ಸ್ವಾಮೀಜಿಗಳ ಜೊತೆ ಡಿ.ಕೆ.ಶಿವಕುಮಾರ್
ನಂಜಾವದೂತ ಸ್ವಾಮೀಜಿಗಳ ಜೊತೆ ಡಿ.ಕೆ.ಶಿವಕುಮಾರ್

ಬೆಂಗಳೂರು: ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ನನ್ನ ಆಪ್ತ ಕಾರ್ಯದರ್ಶಿಗೆ ಹೊಡೆದಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. 

ತಮ್ಮನ್ನು ಭೇಟಿಯಾದ ನಂಜಾವದೂತ ಸ್ವಾಮೀಜಿಗಳ ಜೊತೆ ಮಾತನಾಡಿರುವ ಅವರು, ಈ ಆರೋಪವನ್ನು ಮಾಡಿದ್ದಾರೆಂದು ಹೇಳಲಾಗುತ್ತಿದೆ. 

ಸಿಬಿಐ ದಾಳಿ ನಡೆಸಿರುವುದು ನನಗೆ ಬೇಸರವಾಗಿಲ್ಲ. ಇದೆಲ್ಲವೂ ರಾಜಕೀ ಷಡ್ಯಂತ್ರ. ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನಾನು ತುಂಬಾ ಸಕ್ರಿಯವಾಗಿದ್ದು, ಬಿಜೆಪಿ ನಾಯಕರ ಕಣ್ಣು ಕುಕ್ಕಿದಂತಾಗಿದೆ. ಈಗ ಉಪಚುನಾವಣೆ ಬಂದಿರುವುದರಿಂದ ಸಿಬಿಐ ದಾಳಿ ನಡೆಯುವಂತೆ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ. 

ಈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್ ಅವರು, ಸಿಬಿಐ ಅಧಿಕಾರಿಗಳು ತಮ್ಮೊಂದಿಗೆ ಕಠಿಣವಾಗಿ ನಡೆದುಕೊಂಡರು ಎಂದು ನನ್ನ ಸಿಬ್ಬಂದಿಗಳು ಹೇಳಿದ್ದರು. ಆದರೆ, ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇನೆಂದು ಹೇಳಿದ್ದಾರೆ. 

ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದವರು ಸಿಬಿಐ ಅಧಿಕಾರಿಗಳೇ ಅಥವಾ ಬೆಂಗಳೂರು ಪೊಲೀಸರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಸಾರ್ವಜನಿಕವಾಗಿ ಯಾವುದೇ ಹೇಳಿಕೆಯನ್ನೂ ನೀಡುವುದಿಲ್ಲ. ಜಿ.ಪರಮೇಶ್ವರ ಸಿಬ್ಬಂದಿಗಳಾದ ಪರಿಸ್ಥಿತಿ ನನ್ನ ಸಿಬ್ಬಂದಿಗಳಿಗಾಗುವುದು ನನಗಿಷ್ಟವಿಲ್ಲ. ದಾಳಿ ವೇಳೆ ಏನೇನಾಯಿತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇನೆಂದು ತಿಳಿಸಿದ್ದಾರೆ. 

2019ರಲ್ಲಿ ಕಾಂಗ್ರೆಸ್ ನಾಯಕ ಪರಮೇಶ್ವರ ಅವರ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ಬಳಿಕ ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com