ಡಿಕೆ ರವಿಯನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದೇನೆ, ಅದನ್ನು ಯಾರು ಬದಲಿಸಲಾರರು: ಮಹಿಳೆ ಸ್ವತಂತ್ರವಾಗಿ ಗುರುತಿಸಿಕೊಳ್ಳಬಾರದೇಕೆ? 

ಕಳೆದ ವಾರವಷ್ಟೇ ಕಾಂಗ್ರೆಸ್ ಪಕ್ಷ ಸೇರಿದ ದಿವಂಗತ ಐಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸಮಾ ಸದ್ಯ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಸಿದ್ದರಾಮಯ್ಯ ಮತ್ತು ಕುಸುಮಾ
ಸಿದ್ದರಾಮಯ್ಯ ಮತ್ತು ಕುಸುಮಾ

ಬೆಂಗಳೂರು: ಕಳೆದ ವಾರವಷ್ಟೇ ಕಾಂಗ್ರೆಸ್ ಪಕ್ಷ ಸೇರಿದ ದಿವಂಗತ ಐಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸಮಾ ಸದ್ಯ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.  ಮೊದಲ ರಾಜಕೀಯ ಪರೀಕ್ಷೆ ಎದುರಿಸುತ್ತಿರುವ ಕುಸುಮಾ ಅವರಿಗೆ ಉಪ ಚುನಾವಣೆ ತಮ್ಮ ಸ್ವಂತ ಐಡೆಂಟಿಟಿ ಗುರುತಿಸಿಕೊಳ್ಳಲು ಸಹಾಯ ಮಾಡುವುದೇ ಕಾದು ನೋಡಬೇಕು. ನಾನು ಡಿಕೆ ರವಿ ಅವರ ಕಾನೂನುಬದ್ಧ ಪತ್ನಿಯಾಗಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಕುಸುಮಾ ತಿಳಿಸಿದ್ದಾರೆ.

ಪ್ರ: ನೀವು ರಾಜಕೀಯವನ್ನು ಏಕೆ ಆರಿಸಿಕೊಂಡಿರಿ, ಅದರಲ್ಲೂ ಕಾಂಗ್ರೆಸ್ ಪಕ್ಷವೇ ಏಕೆ?
ನಾನು ಖಾಸಗಿ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾದ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೇನೆ,  ನಾನು ಯಾವಾಗಲು ನನ್ನ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮಾರ್ಗ ದರ್ಶನ ನೀಡಲು ಬಯಸುತ್ತೇನೆ, ಜನರಿಗೆ ಸಹಾಯ ಮಾಡುವುದರಲ್ಲಿ ನನಗೆ ಖುಷಿ ಸಿಗುತ್ತದೆ. ಸಮಾಜದ ದೊಡ್ಡ ವರ್ಗಕ್ಕೆ ಸಹಾಯ ಮಾಡಲು ರಾಜಕೀಯದಿಂದ ಸಾಧ್ಯ, ಕಾಂಗ್ರೆಸ್ ನನಗೆ ಈ ಅವಕಾಶ ನೀಡಿದೆ, ಜನರು ತಮ್ಮ ಅಭಿಪ್ರಾಯ ತಿಳಿಸಲು ಕಾಂಗ್ರೆಸ್ ನಲ್ಲಿ ಅವಕಾಶವಿದೆ, ಇದು ಪ್ರಜಾಪ್ರಭುತ್ವ ಇಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ.

ಪ್ರ: ಕಳೆದ ವಾರವಷ್ಟೆ ನೀವು ಕಾಂಗ್ರೆಸ್ ಸೇರ್ಪಡೆಯಾದಿರಿ, ಸ್ಥಳೀಯ ಕಾಂಗ್ರೆಸ್ ಕೇಡರ್ ನಿಮ್ಮನ್ನು ಒಪ್ಪಿಕೊಳ್ಳುವುದೇ?

ರಾಜಕೀಯಕ್ಕೆ ನಾನು ಹೊಸಬಳಲ್ಲ, ನಾನು ನನ್ನ ತಂದೆಯ ಜೊತೆ ಪ್ರಚಾರದಲ್ಲಿ ಭಾಗವಹಿಸಿದ್ದೇನೆ, ಹಲವು ವರ್ಷಗಳ ಕಾಲ ನನ್ನ ತಂದೆ ಜನರ ಕೆಲಸ ಮಾಡುವುದನ್ನು ನೋಡಿದ್ದೇನೆ, ನನ್ನ ತಂದೆ ಬಳಿ ಸಮಸ್ಯೆ ಹೇಳಿಕೊಳ್ಳಲು ಜನರು ಬರುತ್ತಿದ್ದರು, ನನಗೆ ಜನರ ನಾಡಿಮಿಡಿತ ಗೊತ್ತಿದೆ, ಸ್ಥಳೀಯ ಕೇಡರ್ ಮತ್ತು ಜನ ನನ್ನನ್ನು ಬೆಂಬಲಿಸಲಿದ್ದಾರೆ.

ಪ್ರ: ಚುನಾವಣೆಯಲ್ಲಿ ನಿಮಗೆ ಸಹಾಯ ಮಾಡುವ ಅಂಶಗಳಾವುವು?
ವಿದ್ಯಾವಂತ ಜನ ಮನೆಯಲ್ಲಿ ಕುಳಿತು ಸಮಸ್ಯೆಗಳ ಬಗ್ಗೆ ಕೇವಲ ಮಾತನಾಡಬಾರದು, ಅವುಗಳನ್ನು ಬಗೆಹರಿಸಲು ದಾರಿ ಹುಡುಕಬೇಕು, ಆದರೆ ಯಾರು ಬದಲಾವಣೆ ತರಲು ಮುಂದೆ ಬರುವುದಿಲ್ಲ,  ನನ್ನ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆಯಿದೆ, ನಾನು ಜೀವನದಲ್ಲಿ ತುಂಬಾ ನೋಡಿದ್ದೇನೆ, ಹೀಗಾಗಿ ಸದ್ಯ ಯಾವುದನ್ನು ಬಿಟ್ಟುಕೊಡುವುದಿಲ್ಲ, ಬದಲಾವಣೆ ತರುವ ವ್ಯಕ್ತಿಗಳಲ್ಲಿ ನಾನು ಒಬ್ಬಳಾಗಬೇಕು. ಮತದಾರರು ನನ್ನನ್ನು ತಮ್ಮ ಮಗಳು ಸಹೋದರಿ ಎಂದು ತಿಳಿಯಬೇಕು. ಪ್ರತಿಯೊಬ್ಬ ಮಹಿಳೆಯರು ಹೊರಬಂದು ತಮ್ಮ ಸ್ವಂತ ಗುರುತಿಸುವಿಕೆಯನ್ನು ಹೊಂದಬೇಕು.

ಪ್ರ: ಬಿಜೆಪಿ ಅಭ್ಯರ್ಥಿಯನ್ನು ಎದುರಿಸಲು ನೀವು ಸರ್ವ ಸನ್ನದ್ದರಾಗಿದ್ದೀರಾ?

ನಾನು ವಿರೋಧಿಗಳ ಬಗ್ಗೆ ಚಿಂತಿಸುವುದಿಲ್ಲ, ಜನರ ಸಮಸ್ಯೆಗಳನ್ನು ಬಗೆಹರಿಸಲಷ್ಟೇ ನಾನು ನನ್ನ ಗಮನ ಕೇಂದ್ರೀಕರಿಸುತ್ತೇನೆ, ಸರ್ಕಾರದ ಎಲ್ಲಾ ಸವಲತ್ತು ಮತ್ತು ಅನುದಾನ ನನ್ನ ಕ್ಷೇತ್ರಕ್ಕೆ ತಲುಪಿಸಲು ನಾನು ಪ್ರಯತ್ನಿಸುತ್ತೇನೆ, ಈ ಚುನಾವಣೆಯ ಅವಶ್ಯಕತೆ ಏಕೆ ಇದೆ ಎಂಬುದನ್ನು ಜನರು ಮನಗಂಡಿದ್ದಾರೆ. ಮತದಾರರು ಹಾಗೂ ಪ್ರಬುದ್ಧ ಜನರು ಇದನ್ನು ಅರ್ಥ ಮಾಡಿಕೊಂಡಿದ್ದಾರೆ. 

ಪ್ರ: ನಿಮ್ಮ ಮುಂದೆ ಇರುವ ಸವಾಲುಗಳೇನು?

ನನ್ನ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ, ಹಾಗಾಗಿ ಕ್ಷೇತ್ರವನ್ನು ಪ್ರತಿನಿಧಿಸುವವರು ಯುವಕರು ಮತ್ತು ವಿದ್ಯಾವಂತರಾಗಿರಬೇಕು ಎಂಬುದನ್ನು ನಾನು ಮನವರಿಕೆ ಮಾಡಿಕೊಡುತ್ತೇನೆ, ನನ್ನ ಸಿದ್ದಾಂತಗಳನ್ನು ಸ್ಥಳೀಯ ಕೇಡರ್ ಗಳಿಗೆ ತಿಳಿಸಿ ಅವರ ಮನವೊಲಿಸುತ್ತೇನೆ, ಜೊತೆ ಜೊತೆಯಾಗಿ ಕೆಲಸ ಮಾಡಲು ಪ್ರೇರೇಪಿಸುತ್ತೇನೆ.

ಪ್ರ: ನೀವು ಡಿಕೆ ರವಿ ಅವರ ಪತ್ನಿ ಎಂಬುದು ಎಲ್ಲರಿಗೂ ಗೊತ್ತು, ಚುನಾವಣಾ ಪ್ರಚಾರದಲ್ಲಿ ರವಿ ಹೆಸರನ್ನು ಬಳಸಬಾರದೆಂದು ಅವರ ತಾಯಿ  ಬಯಸಿದ್ದಾರೆ, ನಿಮ್ಮ ನಿಲುವೇನು?

ನಾನು ಕಾನೂನು ಬದ್ದವಾಗಿ ರವಿ ಅವರನ್ನು ವಿವಾಹವಾಗಿದ್ದೇನೆ, ಅದನ್ನು ಯಾರು ಬದಲಿಸಲಾರರು, ಇದುವರೆಗೂ ನಾನು ಅವರ ಹೆಸರನ್ನು ಎಲ್ಲಿಯೂ ಬಳಸಿಲ್ಲ, ಮುಂದೆ ಭವಿಷ್ಯದಲ್ಲಿಯೂ ಬಳಸುವುದಿಲ್ಲ, ಅವರ ಹೆಸರು, ಗೌರವ ಮತ್ತು ಘನತೆಯನ್ನು ಬಳಸಿಕೊಂಡು ನಾನು ಯಾವುದೇ  ಕೆಲಸ ಮಾಡುವುದಿಲ್ಲ, ನಾನು ನನ್ನ ಸ್ವಂತ ಐಡೆಂಟಿಟಿ ಸೃಷ್ಟಿಸಿಕೊಳ್ಳುತ್ತೇನೆ, ಮಹಿಳೆಯೊಬ್ಬಳು ಏಕೆ ತನ್ನ ಗಂಡನ ಹೆಸರು ಮತ್ತು ಸ್ಥಾನದಿಂದ ತನ್ನನ್ನು ತಾನು ಗುರುತಿಸಿಕೊಳ್ಳಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com