ಶಿರಾದಲ್ಲಿ 'ಅನುಕಂಪ'ಕ್ಕೆ ಬೆಲೆಯಿಲ್ಲ, ಅಭಿವೃದ್ಧಿಗೆ ಆದ್ಯತೆ; ನನ್ನ ಸೋಲಿಸಿದ್ದಕ್ಕೆ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ: ಟಿಬಿ ಜಯಚಂದ್ರ

ಕಾಂಗ್ರೆಸ್ ಹಿರಿಯ ನಾಯಕ ಟಿಬಿ ಜಯಚಂದ್ರ ಶಿರಾ ವಿಧಾನಸಭೆ ಉಪ ಚುನಾವಣೆಗಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ, 10ನೇ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಅವರು ನಾಲ್ಕೂವರೆ ದಶಕಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಲಿದೆ.
ಟ.ಬಿ ಜಯಚಂದ್ರ
ಟ.ಬಿ ಜಯಚಂದ್ರ

ತುಮಕೂರು: ಕಾಂಗ್ರೆಸ್ ಹಿರಿಯ ನಾಯಕ ಟಿಬಿ ಜಯಚಂದ್ರ ಶಿರಾ ವಿಧಾನಸಭೆ ಉಪ ಚುನಾವಣೆಗಾಗಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ, 10ನೇ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಅವರು ನಾಲ್ಕೂವರೆ ದಶಕಗಳಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಪ್ರ: 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ನೀವು ಸೋಲನುಭವಿಸಿದ್ದೀರಿ, ಈ ಉಪ ಚುನಾವಣೆಯಲ್ಲಿ ನಿಮ್ಮ ಭವಿಷ್ಯವೇನು?

ಕಳೆದ ಎರಡೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಜನ ನನ್ನನ್ನು ಸೋಲಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿದ್ದಾರೆ, ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವನಾಗಿದ್ದಾಗ 5 ವರ್ಷದಲ್ಲಿ 3,500 ಕೋಟಿ ರು ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ, ನಮ್ಮ ಪಕ್ಷದ ಕಾರ್ಯಕರ್ತರ ಅತಿಯಾದ ಆತ್ಮವಿಶ್ವಾದಿಂದ ನಾನು ಸೋತಿದ್ದೇನೆ.

ಪ್ರ: ಜೆಡಿಎಸ್ ಅಭ್ಯರ್ಥಿ ಬಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಅನುಕಂಪ ವರವಾಗಲಿದೆಯೆ?
ಶಿರಾದಲ್ಲಿ ಅನುಕಂಪ ಕೆಲಸ ಮಾಡುವುದಿಲ್ಲ, ಕೇವಲ ಅಭಿವೃದ್ಧಿಗೆ ಮಾತ್ರವೇ ಇಲ್ಲಿ ಆದ್ಯತೆ.  ನನಗೆ ಇನ್ನು ಸ್ಪಷ್ಟತೆ ಇಲ್ಲ ಜೆಡಿಎಸ್ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸುತ್ತದೋ ಇಲ್ಲವೋ ಗೊತ್ತಿಲ್ಲ, ಏಕೆಂದರೆ ಜೆಡಿಎಸ್ ಅಭ್ಯರ್ಥಿ ಇನ್ನೂ ನಾಮ ಪತ್ರ ಸಲ್ಲಿಸಿಲ್ಲ, 2018 ರ ಚುನಾವಣೆಯಂತಿಲ್ಲ ಉಪ ಚುನಾವಣೆ ಶಿರಾದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ,

ಪ್ರ: ಒಂದು ವೇಳೆ ಬಿಜೆಪಿ ಕುಂಚಿಟಿಗ ವಕ್ಕಲಿಗ ಸಮುದಾಯದ ಡಾ.ರಾಜೇಶ್ ಗೌಡ ಅವರನ್ನು ಕಣಕ್ಕಿಳಿಸಿದರೇ ಸಮುದಾಯದ ಮತಗಳು ವಿಭಜಿಸುವುದಿಲ್ಲವೇ?

ಹಾಗೇನು ಆಗುವುದಿಲ್ಲ, ನನ್ನನ್ನು ಹೊರತುಪಡಿಸಿದರೇ ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುವ ಯಾವುದೇ ನಾಯಕ ಸಮುದಾದಲ್ಲಿಲ್ಲ,  ಬಿಜೆಪಿ ಸರ್ಕಾರದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ,  ಭ್ರಷ್ಟಾಚಾರ ಮತ್ತು ಕೊರೋನಾ ನಿಯಂತ್ರಣದಲ್ಲಿ ವಿಫಲವಾಗಿರುವುದಕ್ಕೆ ಸರ್ಕಾರದ ಮೇಲೆ ವಿಶ್ವಾಸವಿಲ್ಲ.

ಪ್ರ: ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ಮಂಡಳಿ ಸ್ಥಾಪಿಸಿದೆಯಲ್ಲ?
ಇದೊಂದು ಚುನಾವಣಾ ಗಿಮಿಕ್, ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಹಿಂದಿನ ದಿನ ಸಿಎಂ ಯಡಿಯೂರಪ್ಪ ಸುತ್ತೋಲೆ ಹೊರಡಿಸಿದ್ದಾರೆ. ಯಾರೋ ಒಬ್ಬರು ರಾತ್ರೋ ರಾತ್ರಿ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ, ಮಂಡಳಿಗೆ ಇನ್ನೂ ಆರ್ಥಿಕ ಅನುದಾನ ನೀಡಿಲ್ಲ.

ಪ್ರ: ನೀವು ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದೀರಿ ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಸುರೇಶ್ ಗೌಡ ಆರೋಪಿಸುತ್ತಿದ್ದಾರಲ್ಲ?
ನಾನೊಬ್ಬ ಜಾತ್ಯಾತೀತ ವ್ಯಕ್ತಿ, ಜನರು ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ, ಒಂದು ವೇಳೆ ಬಿಜೆಪಿ ನಾಯಕರು ಈ ತಂತ್ರ ಬಳಸಿದರೇ ಅದು ಉಪಯೋಗವಾಗುವುದಿಲ್ಲ.

ಪ್ರ: ಸಿದ್ದರಾಮಯ್ಯ ಪುತ್ರ ಯತೀಂದ್ರ ರಾಜೇಶ್ ಗೌಡ ಅವರ ವ್ಯವಹಾರದ ಪಾಲುದಾರ, ಇದು ನಿಮ್ಮ ಮೇಲೆ ಪರಿಣಾಮ ಬೀರಲಿದೆಯೇ?
ಉಪಚುನಾವಣೆಯ ಕೊನೆಯ ನಾಲ್ಕು ದಿನ ಸಿದ್ದರಾಮಯ್ಯ ನನ್ನ ಪರವಾಗಿ ಶಿರಾದಲ್ಲಿ ಪ್ರಚಾರ ಮಾಡಲಿದ್ದಾರೆ,  ರಾಜೇಶ್ ಅವರ ತಂದೆ ಮೂಡಲಗಿರಿಯಪ್ಪ 2 ಬಾರಿ ಸಂಸದ ಮತ್ತು ಒಮ್ಮೆ ಶಾಸಕರಾಗಿದ್ದವರು, ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ,

ಪ್ರ: ನಿಮ್ಮನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಹೈ ಕಮಾಂಡ್ ಬಯಸಿರಲಿಲ್ಲ ಎಂಬ ಹೇಳಿಕೆಗೆ ನಿಮ್ಮ ಉತ್ತರವೇನು?
ಇದರ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರು ನನ್ನ ಪರ ಪ್ರಚಾರ ಮಾಡಲಿದ್ದಾರೆ, ನಾನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದೇನೆ,ಅವರು ನನ್ನನ್ನು ಅಭಿನಂದಿಸಿದ್ದಾರೆ.

ಪ್ರ: ಬಿಜೆಪಿ ಸರ್ಕಾರದ ಇಬ್ಬರು ಡಿಸಿಎಂ ಮತ್ತು ಸಿಎಂ ಪುತ್ರ ವಿಜಯೇಂದ್ರ ನಿಮ್ಮನ್ನು ಸೋಲಿಸಲು ಹೊರಟಿದ್ದಾರಲ್ಲ?

ಇದು ಭವಿಷ್ಯದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲಿದೆ, ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಮಾತುಕತೆಗಳು ನಡೆಯುತ್ತಿವೆ, ಶೀಘ್ರದಲ್ಲೆ ಸರ್ಕಾರ ಪತನವಾಗಲಿದೆ

ಪ್ರ: ಒಂದು ವೇಳೆ ಗೆದ್ದರೇ ನಿಮ್ಮ ಆದ್ಯತೆ ಏನು?
ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಾನು ಹೋರಾಟ ಮಾಡುತ್ತೇನೆ, ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆ ಮಾಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com