ಕೇರಳ ಜೆಡಿಎಸ್ ಘಟಕ ವಿಸರ್ಜಿಸಿದ ದೇವೇಗೌಡ: ಹೊಸ ಅಧ್ಯಕ್ಷರ ನೇಮಕ

ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ ಹಿನ್ನಲೆ ಕೇರಳದ ಜೆಡಿಎಸ್​ ಘಟಕವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಸರ್ಜಿಸಿದ್ದಾರೆ

Published: 13th October 2020 07:59 AM  |   Last Updated: 13th October 2020 07:59 AM   |  A+A-


H.D devegowda

ಎಚ್.ಡಿ ದೇವೇಗೌಡ

Posted By : Shilpa D
Source : The New Indian Express

ಬೆಂಗಳೂರು: ಪಕ್ಷ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ ಹಿನ್ನಲೆ ಕೇರಳದ ಜೆಡಿಎಸ್​ ಘಟಕವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿಸರ್ಜಿಸಿದ್ದಾರೆ.

ಕೇರಳದ ಜೆಡಿಎಸ್​ ರಾಜ್ಯ ಘಟಕ ಅಧ್ಯಕ್ಪರಾಗಿರುವ ಸಿಕೆ ನಾನು,  ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಕುರಿತು ಕಾರಣಕೇಳಿ ನೋಟಿಸ್​ ಕೂಡ ಜಾರಿ ಮಾಡಲಾಗಿತ್ತು. ಆದರೆ, ಇದಕ್ಕೆ ಅವರಿಂದ ಉತ್ತರ ಬಂದಿಲ್ಲ. ಈ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಸಚಿವ ಮ್ಯಾಥ್ಯು ಟಿ ಥಾಮಸ್​ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆಡಿಎಸ್​ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿರುವ ಬಿಎಂ ಫಾರೂಖ್​​ ಸೆ.24ರಂದು ಕಾರಣ ಕೇಳಿ ಸಿಕೆ ನಾನು ಅವರಿಗೆ ನೋಟಿಸ್​ ಜಾರಿ ಮಾಡಿದ್ದರು. ಈ ನೋಟಿಸ್​ಗೆ ಉತ್ತರಿಸದ ಅವರು ಯಾವುದೇ ನಿರ್ದೇಶನಗಳನ್ನು ಅನುಸರಿಸುವಲ್ಲಿ ವಿಫಲರಾಗಿದ್ದರು. 

ಸಿಕೆ ನಾನು ರಾಜ್ಯ ಘಟಕವನ್ನು ಬಲಪಡಿಸುವ ಬದಲು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದು, ಪಕ್ಷ ರಚಿಸಿದ ಪ್ರಮುಖ ಸಮಿತಿಗಳನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp