ಶಿರಾ-ಆರ್ ಆರ್ ನಗರ ಉಪಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಯಕತ್ವಕ್ಕೆ ಬಹುದೊಡ್ಡ ಸವಾಲು!

2018ರ ವಿಧಾನಸಭೆ ಚುನಾವಣೆಯ ನಂತರದ ಸತತ ಸೋಲುಗಳ ನಂತರ ಕಾಂಗ್ರೆಸ್ ಪುನರುಜ್ಜೀವನದ ಹೊಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿದೆ.
ಡಿಕೆ ಶಿವಕುಮಾರ್ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷರು
ಡಿಕೆ ಶಿವಕುಮಾರ್ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷರು

ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯ ನಂತರದ ಸತತ ಸೋಲುಗಳ ನಂತರ ಕಾಂಗ್ರೆಸ್ ಪುನರುಜ್ಜೀವನದ ಹೊಣೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೇಲಿದೆ.

ನವೆಂಬರ್ 3 ರಂದು ನಡೆಯಲಿರುವ ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕರಿಸಿದ ನಂತರ ಎದುರಾಗುತ್ತಿರುವ ಮೊದಲ ಚುನವಾಣೆಯಾಗಿದ್ದು, ಡಿಕೆಶಿಗೆ ಬಹುದೊಡ್ಡ ಸವಾಲಾಗಿದೆ. ಎರಡು ಕ್ಷೇತ್ರಗಳು ಒಕ್ಕಲಿಗರ ಪ್ರಾಬಲ್ಯದಿಂದ ಕೂಡಿವೆ, 2018ರ ವಿಧಾನ ಸಭೆ ಚುನಾವಣೆಯಲ್ಲಿ ಮುನಿರತ್ನ ಕಾಂಗ್ರೆಸ್ ನಿಂದ ಜಯ ಸಾಧಿಸಿದ್ದರು. ಆರ್ ಆರ್ ನಗರ ಕ್ಷೇತ್ರ ಡಿಕೆ ಸುರೇಶ್ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ.

ಕಾಂಗ್ರೆಸ್ ಪಕ್ಷದೊಳಗೆ ಮತ್ತು ಒಕ್ಕಲಿಗ ಸಮುದಾಯದ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಶಿವಕುಮಾರ್ ಈ ಚುನಾವಣೆ ಮಹತ್ವ ಪಡೆದಿದೆ. ಗೆಲ್ಲುವ ಅಭ್ಯರ್ಥಿಯನ್ನೆ ಕಣಕ್ಕಿಳಿಸಬೇಕು ಎಂಬ ಹಿನ್ನೆಲೆಯಲ್ಲಿ ಶಿವಕುಮಾರ್ ಎಲ್ಲಾ ರೀತಿಯಲ್ಲಿಯೂ ಅಳೆದು ತೂಗಿ ಕುಸುಮಾ ಅವರನ್ನು ಆಯ್ಕೆ ಮಾಡಿದ್ದಾರೆ.

ಡಿಕೆ ಸುರೇಶ್ ಅವರಿಗೆ ಆರ್ ಆರ್ ನಗರ ಉಸ್ತುವಾರಿ ನೀಡಲಾಗಿದೆ,  2018ರ ಚುನಾವಣೆಯಲ್ಲಿ ಆರ್ ಆರ್ ನಗರದಲ್ಲಿ ಮುನಿರತ್ನ ಗೆಲುವಿಗೆ ಸುರೇಶ್ ಶ್ರಮಿಸಿದ್ದರು, ಈಗಲು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮುನಿರತ್ನ ಬಿಜೆಪಿ ತುಳಸಿ ಮುನಿರಾಜು ವಿರುದ್ಧ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಶಿರಾದಲ್ಲಿ ನಾವು ಗೆಲ್ಲುವ ಸಾಧ್ಯತೆಯಿದೆ, ಆದರೆ ಆರ್ ಆರ್ ನಗರದಲ್ಲಿ ಇಡೀ ಕಾಂಗ್ರೆಸ್ ಕೇಡರ್ ಮುನಿರತ್ನ ಅವರ ಪರವಾಗಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಸ್ಪರ್ದಿಗಳಾಗಿವೆ, ಶಿರಾ ಕ್ಷೇತ್ರ ಗೆಲ್ಲುವುದು ಇದರಷ್ಟೇ ಕಾಂಗ್ರೆಸ್ ಗೆ ಸವಾಲಾಗಿದೆ.

ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ವಿರುದ್ಧ ಜೆಡಿಎಸ್ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದೆ, ದಿವಂಗತ ಸತ್ಯನಾರಾಯಣ ಅವರ ಪತ್ನಿಯಾಗಿರುವ ಈಕೆ ಅನುಕಂಪದ ಮತ ಪಡೆಯಲು ಮುಂದಾಗಿದ್ದಾರೆ. ಬಿಜೆಪಿ ಕೂಡ ತನ್ನ ಅಭ್ಯರ್ಥಿ ಗೆಲ್ಲಿಸಲು ಮುಂದಾಗಿದೆ, ಹೀಗಾಗಿ ಗೋವಿಂದ ಕಾರಜೋಳ ಮತ್ತು ಅಶ್ವತ್ಥ ನಾರಾಯಣ ಅವರಿಗೆ ಉಸ್ತುವಾರಿ
ನೀಡಿದೆ. ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಶಿರಾದಲ್ಲಿ ಪ್ರಚಾರ ನಡೆಸಲಿದ್ದಾರೆ. 

ಶಿವಕುಮಾರ್  ಸಮುದಾಯದಲ್ಲಿ ತಮ್ಮ ಸ್ಥಾನ ಗಟ್ಟಿಗೊಳಿಸಲು ನೋಡುತ್ತಿದ್ದರೇ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹತಾಶೆಗೊಂಡಿದೆ, ಇದೇ ವೇಳೆ ಜೆಡಿಎಸ್ ಸ್ಥಳೀಯ ನಾಯಕರು ಶುಕ್ರವಾರ ಕಾಂಗ್ರೆಸ್ ಸೇರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com