ಡಿಕೆ ಶಿವಕುಮಾರ್ ಎಂದರೆ ಹಾಳೂರಿನಲ್ಲುಳಿದ ಗೌಡನಂತೆ: ಸಿ.ಟಿ ರವಿ ಲೇವಡಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್‌ ಹಾಳೂರಿನಲ್ಲಿ ಉಳಿದ ಏಕೈಕ ಗೌಡನಿದ್ದಂತೆ ಎಂದು ದಕ್ಷಿಣ ಭಾರತ ಬಿಜೆಪಿ ಉಸ್ತುವಾರಿ ಸಿಟಿ ರವಿ ಲೇವಡಿ ಮಾಡಿದ್ದಾರೆ.

Published: 18th October 2020 04:37 PM  |   Last Updated: 18th October 2020 04:37 PM   |  A+A-


Shivakumar-CT Ravi

ಡಿಕೆ ಶಿವಕುಮಾರ್-ಸಿಟಿ ರವಿ

Posted By : Vishwanath S
Source : UNI

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್‌ ಹಾಳೂರಿನಲ್ಲಿ ಉಳಿದ ಏಕೈಕ ಗೌಡನಿದ್ದಂತೆ ಎಂದು ದಕ್ಷಿಣ ಭಾರತ ಬಿಜೆಪಿ ಉಸ್ತುವಾರಿ ಸಿಟಿ ರವಿ ಲೇವಡಿ ಮಾಡಿದ್ದಾರೆ.

ಆರ್.ಆರ್. ನಗರ ಉಪ ಚುನಾವಣೆ ಹಿನ್ನಲೆಯಲ್ಲಿ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಯಾದರು. ನಗರದ ಖಾಸಗಿ ಹೊಟೇಲ್ ನಲ್ಲಿ ಮುಖಂಡರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕತ್ವ ಎನ್ನುವುದು ಜೊತೆಗೆ ಇರುವವರನ್ನು ಮುಗಿಸುವುದಲ್ಲ, ಜೊತೆಗಿರುವವರನ್ನು ಬೆಳೆಸುವುದು. ರಾಮನಗರದಲ್ಲಿ ಡಿಕೆ ಶಿವಕುಮಾರ್ ನೇತ್ರತ್ವದಲ್ಲಿ ಒಂದೇ ಕ್ಷೇತ್ರ ಗೆದ್ದಿದೆ‌. 

ಡಿಕೆಶಿ ಹಾಳೂರಿಗೆ ಉಳಿದವನೇ ಗೌಡನಿದ್ದಂತೆ. ಉಪಚುನಾವಣೆಯಲ್ಲಿ ಈ ಹಾಳು ಗೌಡ ಜಾತಿ ತರುತ್ತಿದ್ದಾರೆ ಅಶೋಕ್‌ ಅವರಂತೆ ನಾನು ಒಕ್ಕಲಿಗ ಎನ್ನುತ್ತಿದ್ದಾರೆ. ತಮ್ಮದೇ ಪಕ್ಷದ ದಲಿತ ನಾಯಕರ ಮನೆಗೆ ಬೆಂಕಿ ಹಾಕಿಸಿದವರು ಇದೀಗ ಜಾತಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.

Stay up to date on all the latest ರಾಜಕೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp