ಸರ್ಕಾರದ ವಿರುದ್ಧ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್

ನೆರೆ ವಿಷಯವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಮಾತನಾಡುವ ನೈತಿಕ ತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡರು.
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ

ಮೈಸೂರು: ನೆರೆ ವಿಷಯವನ್ನು ಇಟ್ಟುಕೊಂಡು ಸರ್ಕಾರದ ವಿರುದ್ಧ ಮಾತನಾಡುವ ನೈತಿಕ ತೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತರಾಟೆಗೆ ತೆಗೆದುಕೊಂಡರು.

ಚಾಮುಂಡಿ ಬೆಟ್ಟದಲ್ಲಿಂದು ಬೆಳಗ್ಗೆ ತಾಯಿ ಚಾಮುಂಡಿ ದರ್ಶನ ಪಡೆದ ನಂತರ ಸುದ್ದಿಗಾರರು ಮಾತನಾಡಿದ ಅವರು,ನೆರೆ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಸರಕಾರದ ರಾಜೀನಾ ಮೆ ಕೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ,ನೆರೆಯಲ್ಲೂ ರಾಜಕೀಯ ಮಾಡಬೇಕಾದ ಕರ್ಮ ಸಿದ್ದರಾಮಯ್ಯ ಅವರಿಗೆ ಬಂದಿದೆ ಎಂದು ಕುಟುಕಿದರು.ಎನ್‌ಡಿಆರ್‌ಎಫ್‌ ಮಾನದಂಡವನ್ನು ಎಲ್ಲ ರಾಜ್ಯ ಗಳು ಒಪ್ಪಿಕೊಂಡಿವೆ.ಅದರ ನಿಯಮಗಳಂತೆ ರಾಜ್ಯಕ್ಕೂ ಕೇಂದ್ರದಿಂದ ನೆರವು ಬಂದಿದೆ. ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲೇ ಹಣ ಬಂದಿ ದೆ.ಹತ್ತು ವರ್ಷ ಆಡಳಿತ ನಡೆಸಿದ್ದ ಯುಪಿಎ ಸರಕಾರ ರಾಜ್ಯದಲ್ಲಿ ನೆರೆ ಬಂದಾಗಲೆಲ್ಲ ಎಷ್ಟು ನೆರವು ನೀಡಿತ್ತು ಎಂಬುದನ್ನು ಕಾಂಗ್ರೆಸ್‌ ನಾಯಕರು ಮಾಹಿತಿ ಪಡೆಯಲಿ ಎಂದು ಅವರು ಹೇಳಿದರು.

ಕಾಲೇಜುಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರಕಾರ ಮತ್ತು ಯುಜಿಸಿಯಿಂದ ಈಗಾಗಲೇ ರಾಜ್ಯಕ್ಕೆ ಸ್ಪಷ್ಟ ವಾದ ಮಾರ್ಗಸೂಚಿ ಬಂದಿದೆ.ಆ ಹಿನ್ನೆಲೆಯಲ್ಲಿ ಎಲ್ಲ ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಆದ ಷ್ಟು ಬೇಗ ಕಾಲೇಜುಗಳನ್ನು ತೆರೆಯುವ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ.ಆಫ್‌ಲೈನ್‌ ತರಗತಿಗಳು ಆರಂಭವಾಗಬೇಕು ಎಂ ಬುದು ವಿದ್ಯಾರ್ಥಿಗಳು ಬಯಸುತ್ತಿದ್ದಾರೆ.ಹೀಗಾಗಿ ಸರಕಾರವು ಕಾಲೇಜುಗಳನ್ನು ತೆರೆಯಲು ನಿರ್ಧರಿಸಿದೆ.ಆದ ಷ್ಟು ಬೇಗ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲುತ್ತದೆ.ಇದರಲ್ಲಿ ಯಾವುದೇ ಅನುಮಾನ ಇಲ್ಲ.ಜನರಿಗೆ ಸ್ಥಿರ ಸರಕಾರ ಬೇಕಿದೆ.ಆ ನಿಟ್ಟಿನಲ್ಲಿ ಜನರು ಆಲೋಚನೆ ಮಾಡು ತ್ತಿದ್ದಾರೆ.ಹಿಂದೆ ಜನರು ಅನೇಕ ಸಲ ಅವಕಾಶ ಕೊಟ್ಟಿದ್ದರು.ಸಿಕ್ಕ ಅವಕಾಶಗಳನ್ನು ಕಾಂಗ್ರೆಸ್‌ ಮತ್ತಿ ಜೆಡಿ ಎಸ್‌ ಹಾಳು ಮಾಡಿ ಕೊಂಡರು.ಇನ್ನೂ ಅಂಥ ಪಕ್ಷಗಳಿಗೆ ಮತ ಹಾಕಿ ಪ್ರಯೋಜನವಿಲ್ಲ ಎಂಬ ಸತ್ಯ ಜನರಿಗೆ ಅರಿವಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಅಧಿಕಾರಕ್ಕಾಗಿ ಸಮ್ಮಿಶ್ರ ಸರಕಾರ ಮಾಡಿಕೊಂಡಿದ್ದ ಆ ಎರಡೂ ಪಕ್ಷಗಳ ನಾಯಕರು ಅಧಿಕಾರ ಇದ್ದಾಗ ಲೂ ಕಚ್ಚಾಡುತ್ತಿದ್ದರು.ಈಗ ಅಧಿಕಾರ ಇಲ್ಲದಿದ್ದಾಗಲೂ ಕಚ್ಚಾಡುತ್ತಿದ್ದಾರೆ.ಅವರಿಗೆ ಕಚ್ಚಾಟದಲ್ಲಿ ಆಸಕ್ತಿ ಇದೆಯೇ ವಿನಾ ರಾಜ್ಯದ ಅಭಿವೃದ್ಧಿಯಲ್ಲಿ ಇಲ್ಲ ಎಂದು ಅವರು ಲೇವಡಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com