ಸ್ವಕ್ಷೇತ್ರ ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ; ರಾಜಕೀಯ ಹೇಳಿಕೆ ನೀಡಲು ನಕಾರ
7 ತಿಂಗಳ ಬಳಿಕ ಸ್ವಕ್ಷೇತ್ರ ಶಿಕಾರಿಪುರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದು, ರಾಜಕೀಯ ಹೇಳಿಕೆಗಳಿಂದ ದೂರ ಉಳಿದಿದ್ದಾರೆ.
Published: 21st October 2020 08:32 AM | Last Updated: 21st October 2020 08:32 AM | A+A A-

ಸಿಎಂ ಯಡಿಯೂರಪ್ಪ
ಶಿವಮೊಗ್ಗ: 7 ತಿಂಗಳ ಬಳಿಕ ಸ್ವಕ್ಷೇತ್ರ ಶಿಕಾರಿಪುರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದು, ರಾಜಕೀಯ ಹೇಳಿಕೆಗಳಿಂದ ದೂರ ಉಳಿದಿದ್ದಾರೆ.
ನಿನ್ನೆಯಷ್ಟೇ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚು ದಿನ ಅಧಿಕಾರದಲ್ಲಿ ಉಳಿಯವುದಿಲ್ಲ. ಮುಂದೆ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿಯಾಗಲಿದ್ದಾರೆಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಅವರು, ಹೇಳಿಕೆ ಕುರಿತು ಯತ್ನಾಳ್ ಅವರನ್ನು ಕರೆ ಮಾತನಾಡುತ್ತೇನೆಂದು ಹೇಳಿದರು. ಯತ್ನಾಳ್ ಹೇಳಿಕೆ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಬಯಸಲಿಲ್ಲ.
ಈ ಹಿಂದೆ ಕೂಡ ಜಾತಿ ಗಣತಿ ವರದಿ ಕುರಿತ ಸಿದ್ದರಾಮಯ್ಯ ಆಗ್ರಹಗಳಿಗೆ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ಅವರು ತಿರಸ್ಕರಿಸಿದ್ದರು.