'ಆಪರೇಷನ್ ಕಮಲ' ತನಿಖೆ ನಡೆದರೆ ಮೀರ್ ಸಾಧಿಕ್ ಯಾರು ಎಂದು ಗೊತ್ತಾಗುತ್ತದೆ: ವಿ.ಎಸ್. ಉಗ್ರಪ್ಪ

ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಿಜವಾದ ಮೀರ್ ಸಾದಿಕ್ ಯಾರು ಎನ್ನುವುದು ಪತ್ತೆಯಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ
ಉಗ್ರಪ್ಪ
ಉಗ್ರಪ್ಪ

ಬೆಂಗಳೂರು: ರಾಜ್ಯದಲ್ಲಿ ನಡೆದ ಆಪರೇಷನ್ ಕಮಲದ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ನಿಜವಾದ ಮೀರ್ ಸಾದಿಕ್ ಯಾರು ಎನ್ನುವುದು ಪತ್ತೆಯಾಗುತ್ತದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿರುವ ಬಗ್ಗೆ ತನಿಖೆ ನಡೆಸಲಿ. ಇಲ್ಲಿ ಮೀರ್ ಸಾದಿಕ್ ಯಾರು ಎನ್ನುವುದನ್ನು ನಾವು ಸಾಬೀತು ಪಡಿಸುತ್ತೇವೆ. ನಮ್ಮ ಆರೋಪ ಸುಳ್ಳಾದರೆ ನೀವು ಹೇಳಿದ ಶಿಕ್ಷೆ ಅನುಭವಿಸಲು ನಾವು ಸಿದ್ಧವಿದ್ದೇವೆ. ಒಂದೊಮ್ಮೆ ಭ್ರಷ್ಟಾಚಾರದಿಂದ ಅಧಿಕಾರಕ್ಕೆ ಬಂದಿದೆ ಎನ್ನುವುದು ಸಾಬೀತಾದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದರು. 

ಕಳೆದ ಒಂದು ವರ್ಷ ಅವಧಿಯಲ್ಲಿ ಮುನಿರತ್ನ ಆಸ್ತಿ ಮೊತ್ತ 35 ಕೋಟಿ ರೂ. ಹೆಚ್ಚಳವಾಗಿದೆ. ಇವರ ಆಸ್ತಿ ವರ್ಷಕ್ಕೆ ಐದಾರು ಕೋಟಿಗಿಂತ ಹೆಚ್ಚು ಆಗುತ್ತಿಲ್ಲ. ಏಕಾಏಕಿ ಇಷ್ಟು ಸಂಪಾದಿಸಿದ್ದು ಹೇಗೆ? ಎಷ್ಟೇ ಸಿನಿಮಾ ಮಾಡಿದ್ದರೂ ಅಷ್ಟೊಂದು ಸಂಪಾದಿಸಲು ಸಾಧ್ಯವಿಲ್ಲ. ಈ ಹೆಚ್ಚಳದ ಮೊತ್ತ ಆಪರೇಷನ್ ಕಮಲದಿಂದ ಬಂದ ಹಣವಾಗಿದೆ.

ಕಪ್ಪು ಹಣವನ್ನು ಬೇರೆ ಬೇರೆ ರೀತಿ ಪರಿವರ್ತಿಸಿಕೊಂಡಿದ್ದಾರೆ. ಇಲ್ಲಿ ದೊಡ್ಡ ಮೊತ್ತದ ಭ್ರಷ್ಟಾಚಾರವಾಗಿದೆ. ರಾಜ್ಯ ಚುನಾವಣಾ ಆಯೋಗ ಪಾರದರ್ಶವಾಗಿದ್ದರೆ ಇದೇ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಮುನಿರತ್ನ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com