ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಬಂದಿದೆ, ಕಳೆದುಕೊಳ್ಳಬೇಡಿ: ಜಿ.ಸಿ. ಚಂದ್ರಶೇಖರ್

ಒಂದು ಕಡೆ ಒಕ್ಕಲಿಗ ನಾಯಕತ್ವಕ್ಕೆ ಮೂರು ಪಕ್ಷದಲ್ಲಿ ಕಾದಾಟ ಆರಂಭವಾಗಿದ್ದರೆ ಇನ್ನೊಂದು ಕಡೆ ಒಕ್ಕಲಿಗ ಸಮುದಾಯದಿಂದ  ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದ್ದಾರೆ.
ಜಿ.ಸಿ ಚಂದ್ರಶೇಖರ್
ಜಿ.ಸಿ ಚಂದ್ರಶೇಖರ್

ಬೆಂಗಳೂರು: ಒಂದು ಕಡೆ ಒಕ್ಕಲಿಗ ನಾಯಕತ್ವಕ್ಕೆ ಮೂರು ಪಕ್ಷದಲ್ಲಿ ಕಾದಾಟ ಆರಂಭವಾಗಿದ್ದರೆ ಇನ್ನೊಂದು ಕಡೆ ಒಕ್ಕಲಿಗ ಸಮುದಾಯದಿಂದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಾಗುತ್ತಾರೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಒಂದಿಷ್ಟು ಮಂದಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದರೆ ಕಾಂಗ್ರೆಸ್‌ನ ಮತ್ತೊಂದಿಷ್ಟು ಮಂದಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ. ಒಕ್ಕಲಿಕ ಸಮುದಾಯ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿ.ಸಿ‌.ಚಂದ್ರಶೇಖರ್, ನಮ್ಮ ಸಮುದಾಯದ ನಾಯಕರು
ಮೂರು ಪಕ್ಷದಲ್ಲಿದ್ದಾರೆ.

ಮೂರು ಪಕ್ಷದ ಒಕ್ಕಲಿಗ ನಾಯಕರು ಸಾಂಪ್ರದಾಯಿಕ ವೈರಿಗಳಾಗಿದ್ದಾರೆ. ಡಿ.ಕೆ.ಶಿವಕುಮಾರ್‌ಗೆ ಹೋಲಿಸಿದರೆ ಬಿಜೆಪಿಯ ಅಶ್ವಥ ನಾರಾಯಣ್ ಇನ್ನೂ ಜೂನಿಯರ್, ಉಪಮುಖ್ಯಮಂತ್ರಿಯಾಗಿದ್ದರೂ ಅವರು ಇನ್ನು ಜೂನಿಯರ್, ಆದರೆ ಡಿ.ಕೆ ಶಿವಕುಮಾರ್ ಬೆಳೆದು ಹೆಮ್ಮರವಾಗಿದ್ದಾರೆ. ಶಿವಕುಮಾರ್ ಅವರ ಬಗ್ಗೆ ಮಾತಾಡಬೇಕಾದರೆ ತಲೆಯಿಂದಲ್ಲ, ಹೃದಯದಿಂದ ಮಾತನಾಡಬೇಕು. ಯಾರೋ ಏನೇನೋ ಹೇಳಿಕೊಡುತ್ತಾರೆ ಎಂದು ಮಾತನಾಡಬೇಡಿ. ಎಚ್ಚರಿಕೆಯಿಂದ ಮಾತನಾಡುವುದನ್ನು ಕಲಿಯಿರಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com