ಇದು ಧರ್ಮ ಹಾಗೂ ಅಧರ್ಮದ ನಡುವಣ ಚುನಾವಣೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಇದು ಧರ್ಮ ಹಾಗೂ ಅಧರ್ಮದ ನಡುವಣ ಚುನಾವಣೆ. ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಮಹಿಳೆಯರಿಗೆ ಕಿರುಕುಳ, ನಿಮ್ಮಮತ ಮಾರಾಟ, ಮಾತೃ ಪಕ್ಷಕ್ಕೆ ದ್ರೋಹದಂತಹ ಅಧರ್ಮವನ್ನು ಮಣಿಸಲು, ಕುಸುಮಾ ಅವರಿಗೆ ಮತ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಿಗೆ ಕರೆ ನೀಡಿದ್ದಾರೆ.
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್

ಬೆಂಗಳೂರು: ಇದು ಧರ್ಮ ಹಾಗೂ ಅಧರ್ಮದ ನಡುವಣ ಚುನಾವಣೆ.ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ, ಮಹಿಳೆಯರಿಗೆ ಕಿರುಕುಳ, ನಿಮ್ಮಮತ ಮಾರಾಟ, ಮಾತೃ ಪಕ್ಷಕ್ಕೆ ದ್ರೋಹದಂತಹ ಅಧರ್ಮವನ್ನು ಮಣಿಸಲು, ನಿಮ್ಮ ಸೇವೆಗೆ ಪ್ರಾಮಾಣಿಕವಾಗಿ ಧರ್ಮ ಪಾಲಿಸುತ್ತಿರುವ ಕುಸುಮಾ ಅವರಿಗೆ ಮತ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತದಾರರಿಗೆ ಕರೆ ನೀಡಿದ್ದಾರೆ.

ರಾಜರಾಜೇಶ್ವರಿ ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ವಿವಿಧ ವಾರ್ಡ್ ಗಳಲ್ಲಿ ಶಿವಕುಮಾರ್ ಇಂದು ಸಂಜೆ ಪ್ರಚಾರ ನಡೆಸಿದರು. ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಚೆಲುವರಾಯಸ್ವಾಮಿ, ಪಕ್ಷದ ಅಭ್ಯರ್ಥಿ ಕುಸುಮಾ ಹೆಚ್ ಅವರು ಇದ್ದರು.

ಈ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗ ನನಗೆ ನೋಟೀಸ್ ಕೊಟ್ಟಿತ್ತು ಹೀಗಾಗಿ ತಡವಾಗಿ ಬಂದಿ ದ್ದೇನೆ. ನಿನ್ನೆ ನಾನು ಭಾಷಣ ಮಾಡುವಾಗ ಮುನಿರತ್ನ ದುಡ್ಡು ಕೊಟ್ಟರೆ ತೆಗೆದುಕೊಳ್ಳಿ,ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತಹಾಕಿ ಎಂದು ಹೇಳಿದ್ದೆ. ಅದು ನಡೀತಿರೋದು ನಿಜತಾನೆ? ನೀವು ಹೌದು ಎನ್ನುತ್ತಿ ದ್ದೀರಿ. ಅವರು ನನಗೆ 24 ಗಂಟೆಯಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ಬಿಜೆಪಿಯವರು ದುಡ್ಡು,ಸೆಟ್ಟ್ಯಾಪ್ ಬಾಕ್ಸ್ ಕೊಡುತ್ತಿರೋದು ನಿಜತಾನೇ? ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com