ರಾಜ್ಯ, ದೇಶದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವುದು ಅಸಾಧ್ಯ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ

ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇರುವುದಿಲ್ಲವೆಂದು ಕೆಲವರು (ಸಿದ್ದರಾಮಯ್ಯ) ಹೇಳುತ್ತಿದ್ದಾರೆ. ಇಂಥ ಹೇಳಿಕೆ ನೀಡುವವರು ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

Published: 29th October 2020 11:21 AM  |   Last Updated: 29th October 2020 12:26 PM   |  A+A-


HD Devegowda

ಎಚ್ ಡಿ ದೇವೇಗೌಡ

Posted By : Srinivasamurthy VN
Source : UNI

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇರುವುದಿಲ್ಲವೆಂದು ಕೆಲವರು (ಸಿದ್ದರಾಮಯ್ಯ)ಳುತ್ತಿದ್ದಾರೆ. ಇಂಥ ಹೇಳಿಕೆ ನೀಡುವವರು ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಉಪ ಚುನಾವಣೆ ನಡೆಯುತ್ತಿರುವ ಎರ ಡು ಕ್ಷೇತ್ರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ.ಎರಡೂ ಕ್ಷೇತ್ರಗಳಲ್ಲಿ ಗಲ್ಲುವ ವಿಶ್ವಾಸವಿದೆ.ಪ್ರಜ್ವಲ್, ನಿಖಿಲ್,ಕುಮಾರಸ್ವಾಮಿ ನಾನು ಮತ್ತು ಪಕ್ಷದ ಎಲ್ಲ ಮುಖಂಡರು ಪ್ರಚಾರ ಮಾಡುತ್ತಿದ್ದೇವೆ.  ತುಮಕೂರು ಜಿಲ್ಲೆ ಯಲ್ಲಿ ಕೆಲಸ ಮಾಡಲು ನಮಗೆ ಎನೂ ತೊಂದರೆ ಇಲ್ಲ.ಬೇರೆಯವರು ಹಣ ಖರ್ಚು ಮಾಡುವ ಬಗ್ಗೆ ನಾನು ಮಾತಾನಾಡುವುದಿಲ್ಲ.ಅಂತವರ ವಿರುದ್ಧ ಜನರೇ ತಿರ್ಮಾನ‌ ಮಾಡುತ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಮೈತ್ರಿ  ಸರ್ಕಾರವನ್ನು ಯಾರು ಪತನಗೊಳಿಸಿದರು ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ.16 ಶಾಸಕರನ್ನು ಯಾರು ಮುಂಬೈಗೆ ಕಳಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ.ಅವರೆಲ್ಲ ಮಾಧ್ಯಮಗಳಿಗೆ ಹೇಳಿಕೆ ಯನ್ನು ನೀಡಿದ್ದಾರೆ.ಕೆಲವರು ಮಾಧ್ಯಮಗಳ ಇಂಟರ್ ವ್ಯೂ ಅಲ್ಲಿ ಎಲ್ಲಾ ವಿಷಯ ಹೇಳಿದ್ದಾರೆ  ಎಂದು ಪರೋ ಕ್ಷವಾಗಿ ಸಿದ್ದರಾಮಯ್ಯ ಅವರ ಬಗ್ಗೆ ಪರೋಕ್ಷವಾಗಿ ತಿಳಿಸಿದರು. ಅಂದು ಕಾಂಗ್ರೆಸ್ ಹೈಕಮಾಂಡ್ ಅವರ ಒತ್ತಾಯದ ಮೇರೆಗೆ ಕುಮಾರಸ್ವಾಮಿ ಅವರನ್ನ ಮೈತ್ರಿ ಸರ್ಕಾರ ಮಾಡ ಲು ಹೇಳಿದೆ.ಆದರೆ ಕಾಂಗ್ರೆಸ್ ನಾಯಕರ ಅಸಹಕಾರದಿಂದ ಸರ್ಕಾರ ಪತನವಾಗಿದೆ ಎಂದು ಸರ್ಕಾರದ ಪತನದ  ಘಟನೆಯನ್ನು ಸ್ಮರಿಸಿದರು.

ಶಿರಾದಲ್ಲಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಚುನಾವಣಾ ತಂತ್ರ ವಿಚಾರದ ಪ್ರಸ್ತಾಪಿಸಿದ ಅವರು,ಅವರು ಚುನಾವಣೆ ನಡೆಸೋ ಬಗ್ಗೆ ನನಗೆ ಗೊತ್ತಿದೆ.ಅವರು ಯಾವ ರೀತಿ ಚುನಾವಣೆ ನಡೆಸ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ.ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ.ಈ  ಬಗ್ಗೆ ಕೆಲ ವರು ದೂರು ಕೊಟ್ರು ಯಾವುದೇ ಕ್ರಮ ಜರುಗುಸುತ್ತಿಲ್ಲ.ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೀನಿ.ಇದರ ಬಗ್ಗೆ ಮಾತನಾಡುತ್ತಾ ಕೂತರೆ ಯಾವುದೇ ಉಪಯೋಗವಿಲ್ಲ.ನೀವೇ ಹೇಳಿ ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾ ವಣೆ ನಡೆಸಲು ಸಾಧ್ಯವೆ?ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿ ಹೋಗಿದೆ  ಏನ್ ಮಾಡೋದು ?ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಡಿಕೆಶಿ ಅವರ ಜಾತಿ ರಾಜಕಾರಣದ ವಿಚಾರದ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು,ಜಾತಿ ರಾಜಕಾರಣ ಹೊಸದೇ ನಲ್ಲ ಬಿಡಿ.ನನ್ನನ್ನ1989 ರಲ್ಲಿ ಪಕ್ಷದಿಂದ ಹೊರಹಾಕಿದ್ರು.ಆಗ ನನ್ನ ಜೊತೆಗೆ ಬಂದವರು ವೈ.ಎಸ್.ವಿ.ದತ್ತಾ, ಬಿ.ಎಲ್.ಶಂಕರ್  ಮಾತ್ರ.ಆಗ ಏನೇನ್ ಆಯ್ತು ಅದು ಎಲ್ಲರಿಗೂ ಗೊತ್ತಿದೆ.ಅಂದಿನಿಂದಲೂ ಕೆಲವರು ಜಾತಿ ರಾಜಕಾರಣ ಮಾಡಿಕೊಂಡೆ ಬಂದಿದ್ದಾರೆ.ಜಾತಿರಾಜಕಾರಣದ ಬಗ್ಗೆ ಮಾತಾಡೋದಲ್ಲ ಅಭಿವೃದ್ಧಿ ಬಗ್ಗೆ ಮಾತಾಡಲಿ.ಜಾತಿ ರಾಜಕಾರಣದ ಬಗ್ಗೆ ಮಾತಾನಾಡೊದು ಮೊದಲು ಬಿಡಲಿ ಎಂದು ಡಿ.ಕೆ.ಶಿವಕುಮಾರ್ ಗೆ ಅವರು  ತಿರುಗೇಟು ನೀಡಿದರು.ಸಮ್ಮಿಶ್ರ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಕ್ಕೆ ನಿಂತಿದ್ದರು. ಈಗ ತದ್ವಿರುದ್ಧವಾಗಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಬೆಂಬಲಕ್ಕೆ ನಿಂತಿದ್ದೆ ಅಂತ ಅವರು ಹೇಳಿಕೊಳ್ತಿದ್ದಾರೆ ಆದರೆ ಈಗ  ಅವರು ಒಂದು ರಾಷ್ಟ್ರೀಯ ಪಕ್ಷದ ರಾಜ್ಯದ ಅಧ್ಯಕ್ಷರು.ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ.ಕುಮಾರಸ್ವಾಮಿ ಏನ್ ರಾಜಕೀಯ ಮಾಡಬೇ ಕು ಅದನ್ನ ಮಾಡ್ತಿದ್ದಾರೆ.ಮೊದಲಿನಿಂದಲೂ ಕುಮಾರಸ್ವಾಮಿ ರಾಜಕೀಯ ಹೋರಾಟ ಮಾಡ್ತಿದ್ದಾರೆ.ಯಾರು ಯಾರ ಬೆಂಬಲಕ್ಕೆ ನಿಂತಿದ್ದರು ಎಂದು ಮುಂದಿನ ದಿನಗಳಲ್ಲಿ  ಗೊತ್ತಾಗುತ್ತದೆ ಎಂದು ಅವರು ಹೇಳಿದರು.

4 ವಿಧಾನಪರಿಷತ್ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಮ್ಮ ಹೋರಾಟ ಮಾಡಿದ್ದೇವೆ.ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ನೀಡಿದ್ದೇವೆ.ಚುನಾವಣಾ ಉಸ್ತುವಾರಿಯನ್ನು ವಿಧಾನ ಪರಿಷ ತ್ ಸದಸ್ಯರ ಬಸವರಾಜ ಹೊರಟ್ಟಿ ಅವರಿಗೆ ವಹಿಸಲಾಗಿದೆ.ನಾನು‌ ಮತ್ತೊಂದು ಸುತ್ತು  ಶಿರಾದಲ್ಲಿ ಪ್ರಚಾರ ಮಾ ಡ್ತೇನೆ.ನಾವು ಮಾಡ್ತಿರೋ ಹೋರಾಟ ಯಾರ ವಿರುದ್ಧದ ಚಾಲೆಂಜ್ ಗೆ ಅಲ್ಲ.ಈ ರಾಜ್ಯದ ಏಳಿಗೆಗಾಗಿ ಕೊನೆವರೆ ಗೂ ಹೋರಾಡುತ್ತೇನೆ.ಪ್ರಾದೇಶಿಕ ಪಕ್ಷವನ್ನು ಈ ರಾಜ್ಯದಲ್ಲಿ ಗಟ್ಟಿಯಾಗಿ ಉಳಿಸಲು ಕೊನೆವರೆಗೂ ಹೋರಾಡು ತ್ತೇನೆ.ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಈ ದೇಶದ ಚುಕ್ಕಾಣಿ  ಹಿಡಿದಿತ್ತು.ನಾಯಕರ ನಡುವಿನ ವ್ಯತ್ಯಾಸದಿಂ ದ ಒಡೆದು ಹೋಗಿದೆ.ಉದಾಹರಣೆಗೆ ಬಿಹಾರದಲ್ಲಿ ಅದನ್ನು ಕಾಣಬಹುದಾಗಿದೆ.ಬಿಹಾರದಲ್ಲಿ ದೊಡ್ಡ ಜನಬೆಂ ಬಲ ಲಾಲೂ ಪ್ರಸಾದ ಅವರ ಪಕ್ಷಕ್ಕೆ ಸಿಗುತಿತ್ತು.ಬೇರೆ ಬೇರೆ ನಾಯಕರು ಬೇರೆ ಬೇರೆ ಪಕ್ಷ ಮಾಡಿಕೊಂಡರು.ಹೀ ಗಾಗಿ ಈಗ ಸಣ್ಣ ಸಣ್ಣ ಬಣಗಳಾದ  ಉದಾಹರಣೆ ಕಾಣಬಹುದಾಗಿದೆ ಎಂದು ಜನತಾ ಪರಿವಾರ ಸಂಘಟನೆ ವಿಘ ಟನೆಯಾದದ್ದನ್ನು ಸ್ಮರಿಸಿದರು.

ನಿಖಿಲ್ ಕುಮಾರಸ್ವಾಮಿ ಅವರು ಈಗ ಎಲ್ಲಾ‌ಕಡೆ ಪ್ರಚಾರ ಮಾಡ್ತಿದ್ದಾರೆ.ಅವರ ಪ್ರಚಾರಕ್ಕೆ ಉತ್ತಮ ಬೆಂಬಲ ಸಿಗುತ್ತಿದೆ.ಆರ್ ಆರ್ ನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಬಹಳ ಬೆಂಬಲ ಸಿಗುತ್ತಿದೆ. ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಲ್ಲಿ ಭಾರೀ ಮಳೆಯಾಗಿ ಭಾರೀ ಹಾನಿ ಸಂಭವಿಸಿದೆ.ಇದಕ್ಕೆ ಕಾರಣ  ಎನು ಅಂತ ಎಲ್ಲರಿಗೂ ಗೊತ್ತಿದೆ.ರಾಜಾಕಾಲುವೆ ಒತ್ತುವರಿ ಇದಕ್ಕೆ ಕಾರಣವಾಗಿದೆ.ಒತ್ತುವರಿ ಬಗ್ಗೆ ತಜ್ಞ ರಾದ ಲಕ್ಷ್ಮಣ್ ರಾವ್ ಸಮಿತಿಯ ವರದಿಯಲ್ಲಿ ಪ್ರಸ್ತಾಪ ಆಗಿದೆ.ಅವರ ವರದಿ ಸರ್ಕಾರದ ಬಳಿ ಇದೆ.ಇಂತಹ ಅನಾಹುತ ತಪ್ಪಿ ಸಲು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.ಆದರೆ ಸರ್ಕಾರ ವರದಿ ಜಾರಿ ಬದಲು  ಸುಮ್ಮನೆ ಮೊಸಳೆ‌ ಕಣ್ಣಿರು ಹಾಕುವ ಕೆಲಸ ಯಾರು ಮಾಡಬಾರದು.ಒತ್ತುವರಿ ತೆರವುಗೊಳಿಸುವುದ ಬಗ್ಗೆ ಕಠಿಣ ನಿರ್ಧಾರ ಮಾಡಬೇಕಿದೆ. ಒತ್ತುವರಿ ವಿಚಾರದಲ್ಲಿ ಅನೇಕ ರಾಜಕಾರಣಿ ಗಳು ಇರಬಹುದು.ಕೆರೆಗಳ‌ ಒತ್ತುವರಿ ಬಗ್ಗೆ ಸಹ ವರದಿಯಲ್ಲಿ ಪ್ರಸ್ತಾಪ ಆಗಿದೆ.ಕಂದಾಯ ಸಚಿವರು ಹೊಸ ಕಾಯ್ದೆ ತರುತ್ತೇನೆ ಅಂತ  ಹೇಳ್ತಿದ್ದಾರೆ.ಹೀಗಾಗಿ ಬಿಜೆಪಿ.ಕಾಂಗ್ರೆಸ್ ಬಗ್ಗೆ ಆರ್ ಆರ್ ನಗರದ ಜನ ಯೋಚನೆ ಮಾಡಬೇಕಿದೆ ಎಂದು ಅವರು ತಿಳಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆರೆ ಹಾವಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ.ರಾಜಕಾ ಲುವೆಗಳು ಒತ್ತುವರಿಯಾಗದಂತೆ ಕೆರೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ.ಇಂದು ಎರಡು ರಾಷ್ಟೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಟೀಕೆ ಮಾಡಿಕೊಳ್ಳುತ್ತಿದ್ದಾರೆ.ಇದೆಲ್ಲವನ್ನು ನೋಡಿದರೆ ಮನಸ್ಸಿಗೆ  ತುಂಬಾ ನೋವುಂಟಾ ಗುತ್ತದೆ.ಜನರ ಸಮಸ್ಯೆ ಬಗ್ಗೆ ಇವರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ.ನಾನು ಈಗ ಇದರ ಬಗ್ಗೆ ಮಾತನಾಡೋದಿ ಲ್ಲ ಜನರೇ ತೀರ್ಮಾನ ಮಾಡಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. 

Stay up to date on all the latest ರಾಜಕೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp