ಸಂಯುಕ್ತ ಹೆಗ್ಡೆ ಮೇಲೆ ಹಲ್ಲೆ: ನಮ್ಮ ಸಮಾಜದಲ್ಲಿ ನೈತಿಕ ಪೋಲೀಸ್ ಗಿರಿಗೆ ಅವಕಾಶವಿಲ್ಲ-ಸಂಸದೆ ಶೋಭಾ ಕರಂದ್ಲಾಜೆ

ಉದ್ಯಾನವನವೊಂದರಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನಮ್ಮ ಸಮಾಜದಲ್ಲಿ ನೈತಿಕ ಪೋಲೀಸ್ ಗಿರಿಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

Published: 05th September 2020 03:08 PM  |   Last Updated: 05th September 2020 03:08 PM   |  A+A-


ಶೋಭಾ ಕರಂದ್ಲಾಜೆ

Posted By : Raghavendra Adiga
Source : Online Desk

ಬೆಂಗಳೂರು: ಉದ್ಯಾನವನವೊಂದರಲ್ಲಿ ಕೆಲಸ ಮಾಡುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನಮ್ಮ ಸಮಾಜದಲ್ಲಿ ನೈತಿಕ ಪೋಲೀಸ್ ಗಿರಿಗೆ ಯಾವುದೇ ಅವಕಾಶವಿಲ್ಲ ಎಂದು ಹೇಳಿದರು.

ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ "ನಟಿ ಸಂಯುಕ್ತ ಹೆಗ್ಡೆ ಅವರನ್ನೊಳಗೊಂಡ ಈ ಘಟನೆ ನಡೆದಿರುವುದು  ದುರದೃಷ್ಟಕರ. ನಮ್ಮ ಸಮಾಜದಲ್ಲಿ ಇಂತಹ ನೈತಿಕ ಪೋಲಿಸ್ ಗಿರಿಗೆ  ಯಾವುದೇ ಅವಕಾಶವಿಲ್ಲ" ಎಂದು ಹೇಳಿದರು. ಸಂಯುಕ್ತ ಮತ್ತು ಆಕೆಯ ಸ್ನೇಹಿತರ  ಮೇಲೆ ನಿಂದನೆ ಮತ್ತು ಹಲ್ಲೆ ನಡೆಸಿದ ಕವಿತಾ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಘಟನೆಗೆ ಕಾಂಗ್ರೆಸ್ ನಾಯಕರನ್ನು ದೂಷಿಸಿದ ಶೋಭಾ, ಕಾಂಗ್ರೆಸ್ ನಾಯಕರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗ್ಡೆ ಅವರು ತಮ್ಮ ಸ್ನೇಹಿತರೊಂದಿಗೆ ಉದ್ಯಾನವನದಲ್ಲಿ ಹೂಲಾ ಹೋಪ್ ಅಭ್ಯಾಸ ಮಾಡುತ್ತಿದ್ದಾಗ ಕ್ರೀಡಾ ಉಡುಪನ್ನು ಧರಿಸಿದ್ದರು. ಈ ಸಮಯದಲ್ಲಿ ಹಲವು ಜನರಿದ್ದ ಗ್ಂಪೊಂದು ಸಂಯುಕ್ತ ಅವರ ಉಡುಗೆ ಸರಿಯಿಲ್ಲ, ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ, ಇದರ ಕುರಿತಂತೆ ಸಂಯುಕ್ತ ಅವರನ್ನೂ ಹೋಲಿಸಿ ನಿಂದಿಸಿದ್ದಾರೆ. . ಉದ್ಯಾನವನದಲ್ಲಿ ಸಂಯುಕ್ತ ಅವರ ವರ್ತನೆ ಇನ್ನೊಬ್ಬರನ್ನು ಕೆರಳಿಸುವಂತಿದೆ  ಎಂದು ಅವರು ಆರೋಪಿಸಿದರು. ಕವಿತಾ ರೆಡ್ಡಿ ಎಂಬ ಮಹಿಳೆ ಸಂಯುಕ್ತ ಮೇಲೆ ಹಲ್ಲೆಗೆ ಯತ್ನಿಸಿದಳು. ಎಲ್ಲ ಘಟನೆಗಳ ವಿಡಿಯೋವನ್ನು ಸಂಯುಜ್ತ  ಹೆಗ್ಡೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

 

 

ಘಟನೆ ನಡೆದ ಸ್ಥಳದಲ್ಲಿದ್ದ ವೈದ್ಯರೊಬ್ಬರು ವಿಡಿಯೋದಲ್ಲಿ ನಟಿ ಮತ್ತು ಅವರ ಸ್ನೇಹಿತರನ್ನು ಬೆಂಬಲಿಸುತ್ತಿದ್ದಾರೆ ಮತ್ತು ಅವರು ಯಾವುದೇ  ಅಸಭ್ಯ ವರ್ತನೆ ತೋರಿಲ್ಲ ಮತ್ತು ಕೇವಲ ವ್ಯಾಯಾಮ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

Stay up to date on all the latest ರಾಜಕೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp