ಸುರ್ಜೇವಾಲ ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿ, ಎಚ್ ಕೆ ಪಾಟಿಲ್, ದಿನೇಶ್ ಗುಂಡೂರಾವ್ ಗೆ ಹೊಸ ಜವಾಬ್ದಾರಿ

ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ 'ರಣದೀಪ್ ಸಿಂಗ್ ಸುರ್ಜೇವಾಲ' ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ರಂದೀಪ್ ಸಿಂಗ್ ಸುರ್ಜೇವಾಲಾ
ರಂದೀಪ್ ಸಿಂಗ್ ಸುರ್ಜೇವಾಲಾ

ನವದೆಹಲಿ: ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ 'ರಣದೀಪ್ ಸಿಂಗ್ ಸುರ್ಜೇವಾಲ' ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಮಹತ್ವದ ಬೆಳವಣಿಗೆಯಲ್ಲಿ ಎಐಸಿಸಿ ಪುನರ್ ರಚನೆಗೊಂಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸಿಂಗ್ ನೇಮಕಗೊಂಡಿದ್ದು, ಕರ್ನಾಟಕ ಉಸ್ತುವಾರಿಯಾಗಿದ್ದ ಕೆಸಿ ವೇಣುಗೋಪಾಲ್ ಅವರಿಗೆ ಕೊಕ್ ನೀಡಲಾಗಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡಿದ್ದ ಕೆ.ಸಿ. ವೇಣುಗೋಪಾಲ್‌ ಅವರನ್ನು ಕಡೆಗೂ ಬದಲಿಸಲಾಗಿದೆ.

ಇನ್ನೂ, ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಗುಲಾಂ ನಬಿ ಅಜಾದ್ ಕೈಬಿಡಲಾಗಿದೆ. 

ಮಹಾರಾಷ್ಟ್ರ ಉಸ್ತುವಾರಿಯಾಗಿ ಹೆಚ್ ಕೆ ಪಾಟೀಲ್ ನೇಮಕಗೊಂಡಿದ್ದರೆ, ತಮಿಳುನಾಡು, ಪುದುಚೇರಿ ಉಸ್ತುವಾರಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.

ರಾಷ್ಟ್ರೀಯ ಕಾಂಗ್ರೆಸ್‌ನ ಸಂಘಟನಾ ಸಮಿತಿಗಳನ್ನು ಶುಕ್ರವಾರ ಪುನಾರಚಿಸಲಾಗಿದೆ. ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರಾಗಿ ಮುಂದುವರಿದಿದ್ದಾರೆ. ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರನ್ನೂ ಸಿಡಬ್ಲ್ಯುಸಿ ಕಾಯಂ ಆಹ್ವಾನಿತರಾಗಿ ಮುಂದುವರಿದಿದ್ದಾರೆ. ಇವರ ಜೊತೆಗೆ ಕೆಪಿಸಿಸಿಯ ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಅವರನ್ನು ಸಿಡಬ್ಲ್ಯುಸಿ ಕಾಯಂ ಆಹ್ವಾನಿತರ ಪಟ್ಟಿಗೆ ಹೊಸದಾಗಿ ಸೇರ್ಪಡೆ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com