'ಹೆಣಗಳ ಮೇಲೆ ರಾಜಕಾರಣ ಮಾಡಿದ ನಿಮ್ಮ ಅಧಿಕಾರದ ಮೋಹ, ಇಂದು ನಿಮ್ಮನ್ನು ಪರಿತಪಿಸುವಂತೆ ಮಾಡಿದೆ'

ಬಿಜೆಪಿ ವಿರೋಧ ಪಕ್ಷಗಳ ನಾಯಕರ ಚಾರಿತ್ರ್ಯ ಹರಣ ಮಾಡುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಪ್ರತ್ಯುತ್ತರ ನೀಡಿದ್ದಾರೆ.

Published: 12th September 2020 08:04 AM  |   Last Updated: 12th September 2020 08:04 AM   |  A+A-


Nalin kumar kateel

ನಳಿನ್ ಕುಮಾರ್ ಕಟೀಲ್

Posted By : Shilpa D
Source : Online Desk

ಬೆಂಗಳೂರು: ಬಿಜೆಪಿ ವಿರೋಧ ಪಕ್ಷಗಳ ನಾಯಕರ ಚಾರಿತ್ರ್ಯ ಹರಣ ಮಾಡುತ್ತಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್‌ ಪ್ರತ್ಯುತ್ತರ ನೀಡಿದ್ದಾರೆ.

ಟಿಪ್ಪು ಜಯಂತಿಗೆ ಅನೇಕ ರಾಜಕಾರಣಿಗಳು, ವಿದ್ವಾಂಸರು, ಸಾಹಿತಿಗಳು ಮಾತ್ರವಲ್ಲದೆ ಕೋಟ್ಯಾಂತರ ಜನರು ವಿರೋಧ ವ್ಯಕ್ತಪಡಿಸಿದ್ದರು. ತನ್ನ ಮತಬ್ಯಾಂಕ್ ಭದ್ರಪಡಿಸಲು ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ಎಂದು ಹಿಂದೂ ಧರ್ಮವನ್ನು ಒಡೆಯಲು ಯತ್ನಿಸಿದ್ದೇ ಸಿದ್ದರಾಮಯ್ಯ ಅವರ ಅವಧಿಯ ಸಾಧನೆಯಾಗಿದೆ. 

ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿದ್ದರಿಂದಲೇ ಸ್ವಕ್ಷೇತ್ರದಲ್ಲೇ ಹೀನಾಯವಾಗಿ ಸೋತು ಇಂದು ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿದ್ದಾರೆ. ಸಿದ್ಧರಾಮಯ್ಯ ಅವರೇ, ನಿಮ್ಮ ಅಧಿಕಾರದ ಅವಧಿಯಲ್ಲಿ ಒಂದು ವರ್ಗವನ್ನು ಓಲೈಸಿಕೊಳ್ಳಲು ಹಿಂದೂ ಸಂಘಟನೆಯ ಕಾರ್ಯಕರ್ತರ ರಕ್ತವನ್ನೇ ಹರಿಸಿದ್ದು ನಮಗಿನ್ನೂ ನೆನಪಿದೆ. 

ಹತ್ತಾರು ಕಾರ್ಯಕರ್ತರ ಹೆಣಗಳ ಮೇಲೆ ರಾಜಕಾರಣ ಮಾಡಿದ ನಿಮ್ಮ ಅಧಿಕಾರದ ಮೋಹ, ಪಕ್ಷದ ದುರಾಡಳಿತ ಇಂದು ನಿಮ್ಮನ್ನು ಪರಿತಪಿಸುವಂತೆ ಮಾಡಿದೆ. ನಿಮ್ಮ ಕರ್ಮವನ್ನು ಮತ್ತೆ ನೆನಪಿಸಿ.

ಐಎಎಸ್ ಅಧಿಕಾರಿ ಡಿಕೆ ರವಿ, ಡಿವೈಎಸ್ ಪಿ ಗಣಪತಿ, ಎಸ್ ಐ ಮಲ್ಲಿಕಾರ್ಜುನ ಬಂಡೆಯಂತಹ ಅತಿದೊಡ್ಡ ಸರ್ಕಾರಿ ಅಧಿಕಾರಿಗಳ ಸಾವುಗಳಿಗೆ ಅಂದಿನ ಸಿದ್ದರಾಮಯ್ಯ ಸರ್ಕಾರ ಕಾರಣವಾಗಿದ್ದು ಮಾತ್ರವಲ್ಲದೆ ಆ ಅಮೂಲ್ಯ ಜೀವಗಳಿಗೆ ಬೆಲೆ ಇಲ್ಲದಂತಾಗಿತ್ತು.

ತಮ್ಮ ಪಕ್ಷದ ಪ್ರಭಾವಿ ನಾಯಕರೇ ಈ ಕೃತ್ಯಗಳಲ್ಲಿ ತೊಡಗಿದ್ದರೂ ಯಾವುದೇ ಕ್ರಮ ಕೈಗೊಳ್ಳದ ವ್ಯಕ್ತಿ ಯಾವ ಸೀಮೆಯ ನಾಯಕ? ಸಿದ್ದರಾಮಯ್ಯನವರು ತನ್ನ ಅಧಿಕಾರದಲ್ಲಿ ಮತಾಂಧ ಎಸ್ ಡಿಪಿಐ ಮತ್ತು ಪಿಎಫ್ ಐ ಸಂಘಟನೆಗಳ ಗೂಂಡಾಗಳನ್ನು ಜೈಲಿಂದ ಬಿಡುಗಡೆಗೊಳಿಸಿದ ನಂತರ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿದ್ದು ಕಣ್ಣೆದುರೇ ಇದೆ.

ಇಂತಹ ಪ್ರಕರಣಗಳ ನಂತರವೂ ಅವರನ್ನು ಬೆಂಬಲಿಸಿದ ಪರಿಣಾಮ ಹತ್ತಾರು ಜೀವಗಳು ಬಲಿಯಾಗಿದೆ. ಹೆಣಗಳ‌ ಮೇಲೆ ರಾಜಕಾರಣ ಮಾಡಿದ ಬುದ್ಧಿ ಇನ್ಯಾರಿಗೆ ಇರುತ್ತೆ? ಸಿದ್ದರಾಮಯ್ಯ ಅವರಿಗೆ ಕಟೀಲ್ ತಿರುಗೇಟು ನೀಡಿದ್ದಾರೆ.

Stay up to date on all the latest ರಾಜಕೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp