ಡ್ರಗ್ಸ್ ಪಿಡುಗು ತೊಲಗಿಸಲು ವಿಶೇಷ ಕಲಾಪ ನಡೆಸಿ ಕಠಿಣ ಕಾನೂನು ಜಾರಿಗೆ ತನ್ನಿ: ಕಾಂಗ್ರೆಸ್

ರಾಜ್ಯದಲ್ಲಿ ಡ್ರಗ್ಸ್ ಪಿಡುಗು ತೊಲಗಿಸಲು ಕಠಿಣ ಕ್ರಮಗಳ ಅಗತ್ಯವಿದ್ದು, ಇದಕ್ಕಾಗಿ ವಿಶೇಷ ಕಲಾಪ ನಡೆಸಿ ಕಠಿಣ ಕಾನೂನು ಜಾರಿಗೆ ತನ್ನಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. 
ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಪಿಡುಗು ತೊಲಗಿಸಲು ಕಠಿಣ ಕ್ರಮಗಳ ಅಗತ್ಯವಿದ್ದು, ಇದಕ್ಕಾಗಿ ವಿಶೇಷ ಕಲಾಪ ನಡೆಸಿ ಕಠಿಣ ಕಾನೂನು ಜಾರಿಗೆ ತನ್ನಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಹಾಗೂ ಶಾಸಕ ಈಶ್ವರ್ ಖಂಡ್ರೆಯವರು, ಯಾವುದೇ ಪಕ್ಷ ಹಾಗೂ ಅಂಗಸಂಸ್ಥೆಗಳಿಗೆ ಸೇರಿದ್ದರೂ ರಾಜ್ಯದಲ್ಲಿ ಡ್ರಗ್ಸ್ ಪಿಡುಗು ಹೋಗಲಾಡಿಸಲು ಪ್ರತೀಯೊಬ್ಬರು ಕೈಜೋಡಿಸಬೇಕಿದೆ. ಈ ಕುರಿತು ಕಠಿಣ ಕಾನೂನು ಜಾರಿಗೆ ತರಲು ಅಧಿವೇಶನದ ಅವಧಿ ವಿಸ್ತರಿಸಬೇಕಿದೆ ಎಂದು ಹೇಳಿದ್ದಾರೆ. 

ಡ್ರಗ್ಸ್ ದಂಧೆ ವಿರುದ್ಧ ಇದೀಗ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ ಉಡ್ತಾ ಪಂಜಾಬ್ ಸಿನಿಮಾದಂತೆ ಕರ್ನಾಟಕದ ಕುರಿತಂತೆಯೂ ಸಿನಿಮಾಮ ಬರುವ ಯಾವುದೇ ಸಂಶಯಗಳಿಲ್ಲ. ರಾಜ್ಯದ ವರ್ಚಸ್ಸಿಗೆ ಭಾರೀ ಹೊಡೆತ ಬೀಳಲಿದೆ ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕುರಿತು ಮಾತನಾಡಿದ ಅವರು, ಸಿಎಲ್'ಪಿ ಸಭೆಯು ಬುಧವಾರ ನಡೆಯಲಿದ್ದು, ಸಭೆಯಲ್ಲಿ ಅಧಿವೇಶನದ ಕುರಿತು ಮಾತುಕಚೆ ನಡೆಸಲಾಗುತ್ತದೆ ಎಂದಿದ್ದಾರೆ. 

ಸಭೆಯಲ್ಲಿ ಡ್ರಗ್ಸ್ ದಂಧೆ, ಕೊರೋನಾ ಸೋಂಕಿತರ ಸಂಖ್ಯೆ ಏರಿಕೆ, ಡಿಜೆ ಹಳ್ಳಿ ಗಲಭೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ ಎನ್ನಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com