ಮಂತ್ರಿ ಸ್ಥಾನಕ್ಕೆ ದುಂಬಾಲು ಬಿದ್ದಿಲ್ಲ- ಹೆಚ್. ವಿಶ್ವನಾಥ್

ಮಂತ್ರಿ ಸ್ಥಾನದ ಕುರಿತು ಚರ್ಚೆ ಆಗುತ್ತಿರುವುದು ನಿಜ. ಅದಕ್ಕಾಗಿ ತಾವು ಯಾರಿಗೂ ದುಂಬಾಲು ಬಿದ್ದಿಲ್ಲ ಎಂದು ವಿಧಾನ ಪರಿಷತ್ ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಹೆಚ್. ವಿಶ್ವನಾಥ್
ಹೆಚ್. ವಿಶ್ವನಾಥ್

ಬೆಂಗಳೂರು: ಮಂತ್ರಿ ಸ್ಥಾನದ ಕುರಿತು ಚರ್ಚೆ ಆಗುತ್ತಿರುವುದು ನಿಜ. ಅದಕ್ಕಾಗಿ ತಾವು ಯಾರಿಗೂ ದುಂಬಾಲು ಬಿದ್ದಿಲ್ಲ ಎಂದು ವಿಧಾನ ಪರಿಷತ್ ನ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಶಾಸಕರ ಭವನದಲ್ಲಿ ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ಹೆಸರಿನ ಕುರುಬ ಸಮುದಾಯದ ಮುಖಂಡರ ಜೊತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ, ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ಹೋಗಿದ್ದರು. ಸಂಪುಟ ವಿಸ್ತರಣೆ ಆಗೇ ಆಗುತ್ತದೆ.ಸಂಪುಟದಲ್ಲಿ ನಾವು ಇರುತ್ತೇವೆ ಎಂದುಕೊಂಡಿದ್ದೇವೆ.50-60 ಆಕಾಂಕ್ಷಿಗಳಿದ್ದ ಮಾತ್ರಕ್ಕೆ ಎಲ್ಲರಿಗೂ ಮಂತ್ರಿ ಸ್ಥಾನ ಸಿಗುವುದಿಲ್ಲ. ರಾಜಕೀಯ ಎಂದರೇ ಅವಕಾಶ. ಸಚಿವನಾಗಬೇಕು ಎಂದು ಹಠ ಚಟಕ್ಕೆ ಬಿದ್ದು  ಬಿಜೆಪಿಗೆ ಬಂದಿಲ್ಲ. ಹಳೆಯ ಪಕ್ಷದಲ್ಲಿದ್ದಾಗ ಅಲ್ಲಿನ ನಾಯಕರ ಧೋರಣೆ ವಿರುದ್ಧ ಬಿಜೆಪಿಗೆ ಸೇರಿದ್ದೇವೆ. ನಾನೂ ಸಹ ದೆಹಲಿಗೆ ಹೋಗಿ ಬಂದಿದ್ದೇನೆ ಎಂದರು.

ಶೇಪಾರ್ಡ್ಸ್ ಸಮುದಾಯದ ಐದನೇ ವಾರ್ಷಿಕೋತ್ಸವದ ಸಭೆ ನಡೆಸಲಾಗುತ್ತಿದೆ. ಇಂದಿನ ಸಭೆಯಲ್ಲಿ  ಎಲ್ಲಾ ಪಕ್ಷದ ಕುರುಬ ಸಮುದಾಯದ ಮುಖಂಡರು ಇದ್ದಾರೆ. ಇದು ಸಮುದಾಯದ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ. ದೇಶದಲ್ಲಿ ಕುರುಬ ಸಮುದಾಯವನ್ನು ಒಂದು ವೇದಿಕೆಗೆ ತರುವ ಪ್ರಯತ್ನವಿದು. ಇದು ರಾಜಕೀಯಕ್ಕೆ ಸಂಬಂಧಪಟ್ಟ ಸಭೆ ಅಲ್ಲ. ಸಮುದಾಯದ ಸಂಘಟನೆ ಮಾಡುವ ಒಂದಷ್ಟು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದರು.

ಮತ್ತೆ ಟಿಪ್ಪು ಸುಲ್ತಾನ್, ಡ್ರಗ್ಸ್ ವಿಚಾರವಾಗಿ ಪ್ರತಿಕ್ರಿಯಿಸಲು ವಿಶ್ವನಾಥ್ ನಿರಾಕರಿಸಿದರು.ನಮ್ಮ ನಡೆ ಶಾಸನಸಭೆಯತ್ತ. ಶಾಸನ ಸಭೆ ಆರಂಭ ಆಗುತ್ತಿದ್ದು ತಾವು ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com