ಅಧಿವೇಶನಕ್ಕೆ ಸ್ಕಿಪ್: ಹಾಸನದ ರೆಸಾರ್ಟ್ ನಲ್ಲಿ ಕುಟುಂಬಸ್ಥರ ಜೊತೆ ಕುಮಾರಸ್ವಾಮಿ ರಿಲ್ಯಾಕ್ಸ್!
ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಸನದ ಹೊರವಲಯದ ರೆಸಾರ್ಟ್ ನಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆ ತಂಗಿದ್ದು, ವಿಧಾನಸಭೆ ಅಧಿವೇಶನಕ್ಕೆ ಗೈರಾಗಿದ್ದಾರೆ.
Published: 22nd September 2020 07:37 AM | Last Updated: 22nd September 2020 07:37 AM | A+A A-

ಹಾಸನ: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಸನದ ಹೊರವಲಯದ ರೆಸಾರ್ಟ್ ನಲ್ಲಿ ತಮ್ಮ ಕುಟುಂಬ ಸದಸ್ಯರ ಜೊತೆ ತಂಗಿದ್ದು, ವಿಧಾನಸಭೆ ಅಧಿವೇಶನಕ್ಕೆ ಗೈರಾಗಿದ್ದಾರೆ.
ಪತ್ನಿ ಅನಿತಾ, ಪುತ್ರ ನಿಖಿಲ್ ಮತ್ತು ಸೊಸೆ ರೇವತಿ ಜೊತೆ ಹಾಸನದ ಹೊಯ್ಸಳ ಗ್ರಾಮದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಹೊಯ್ಸಳ ರೆಸಾರ್ಟ್ ನಲ್ಲಿ ತಂಗಿರುವ ಜೆಡಿಎಸ್ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ರೆಸಾರ್ಟ್ ಗೆ ತೆರಳಿ ಕುಮಾರಸ್ವಾಮಿ ಅವರ ಗಂಟಲು ದ್ರವ ಮಾದರಿ ಪಡೆದರು.
ಎರಡು ದಿನಗಳಿಂದ ಯಾರನ್ನೂ ಭೇಟಿಯಾಗದೆ ಕುಟುಂಬ ಸದಸ್ಯರ ಜತೆ ರೆಸಾರ್ಟ್‌ನಲ್ಲಿ ಇದ್ದಾರೆ. ನಿಖಿಲ್ ಮತ್ತು ಅವರ ಪತ್ನಿ ರೇವತಿ ಹಾಸನದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು.
ಇನ್ನೂ ಹಾಸನ ಜಿಲ್ಲೆಯಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರ ಸರ್ವಾಧಿಕಾರಕ್ಕೆ ಬೇಸತ್ತಿರುವ ಶಾಸಕ ಎಟಿ ರಾಮಸ್ವಾಮಿ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಲು ಹಾಸನಕ್ಕೆ ಬರ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.