ಅವರಿಗೆ ಕೊರೋನಾ ಬಂದಿದೆ, ದೂರ ಉಳಿಯಲು ಹೇಳಿ: ಸದನದಲ್ಲಿ ಗೊಂದಲ ಸೃಷ್ಟಿಸಿದ ಪ್ರಿಯಾಂಕ್ ಖರ್ಗೆ ಕೊರೋನಾ ರಿಪೋರ್ಟ್!

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೊರೋನಾ ವೈದ್ಯಕೀಯ ವರದಿ ವಿಚಾರ ಶುಕ್ರವಾರ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. 
ಸದನದಲ್ಲಿ ಮಾತನಾಡುತ್ತಿರುವ ಸಚಿವ ಮಾಧುಸ್ವಾಮಿ
ಸದನದಲ್ಲಿ ಮಾತನಾಡುತ್ತಿರುವ ಸಚಿವ ಮಾಧುಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಕೊರೋನಾ ವೈದ್ಯಕೀಯ ವರದಿ ವಿಚಾರ ಶುಕ್ರವಾರ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. 

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಆದ್ದರಿಂದ ಸದನ ಸಭೆಯಿಂದ ದೂರ ಉಳಿಯಲು ಹೇಳಿ ಎಂದು ಡಿಸಿಎಂ ಮಾಧುಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು. 

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಇಲ್ಲ ಅವರ ವರದಿ ನೆಗೆಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದರು. 

ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆಯವರು ನನಗೆ ನೆಗೆಟಿವ್ ರಿಪೋರ್ಟ್ ಬಂದಿದೆ. ನನಗೂ ಜವಾಬ್ದಾರಿ ಇದೆ. ಹೀಗಾಗಿಯೇ ನಾನು ಮೊದಲ ಎರಡು ದಿನ ಸಭೆಯಿಂದ ದೂರ ಉಳಿದಿದ್ದೆ. ಒಂದು ಸಾರಿ ಪಾಸಿಟಿವ್, ಎರಡು ಬಾರಿ ನೆಗೆಟಿವ್ ಬಂತು. ಆ ಕಾರಣಕ್ಕಾಗಿ ಸ್ವಲ್ಪ ಗೊಂದಲ ಆಗಿತ್ತು, ನಾನು ನೆಗೆಟಿವ್ ರಿಪೋರ್ಟ್ ಬಂದಿರೋದನ್ನು ಹಾಕಿರಲಿಲ್ಲ ಅಷ್ಟೇ ಎಂದು ಹೇಳಿದರು. 

ಈ ವೇಳೆ ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ಪ್ರಿಯಾಂಕ್ ಖರ್ಗೆ ಅವರದ್ದು ಕೊರೊನಾ ನೆಗೆಟಿವ್ ರಿಪೋರ್ಟ್ ನನ್ನ ಬಳಿ ಇದೆ. ಡೋಂಟ್ ವರಿ ಎಂದು ಸ್ಪಷ್ಟಪಡಿಸಿದರು.

ಮೊದಲು ನನಗೆ ಪಾಸಿಟಿವ್ ಎಂದು ವರದಿ ಕೊಟ್ಟಿದ್ದರು. ನಂತರ 48 ಗಂಟೆಗಳ ಬಳಿಕ ನೆಗೆಟಿವ್ ಬಂತು. ಮತ್ತೆ ಅನುಮಾನ ಬಂದು ವೈದ್ಯರನ್ನು ಸಂಪರ್ಕಿಸಿದೆ. ಮತ್ತೆ ಟೆಸ್ಟ್ ಮಾಡಿಸಿದ ಸಂದರ್ಭದಲ್ಲಿ ನೆಗೆಟಿವ್ ಬಂತು. ಆ ವೇಳೆ ವೈರಲಾಜಿಸ್ಟ್ ಅವರನ್ನು ಭೇಟಿ ಮಾಡಿ ಆರ್ ಟಿಪಿಸಿಆರ್ ಟೆಸ್ಟ್ ಗೆ ಮಾಡಿಸಿದೆ. ಅಲ್ಲದೇ ಯಾರಿಗೂ ತೊಂದರೆಯಾಗಬಾರದೆಂದು ಎರಡು ದಿನ ಮನೆಯಲ್ಲೇ ಇದ್ದೆ. ಕೊರೊನಾ ಬಂದೇ ಇಲ್ಲ ಎಂದು ವೈದ್ಯರು ಹೇಳಿದ್ದ ಕಾರಣ ನಾನು ಸದನಕ್ಕೆ ಹಾಜರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com