ಬಿಜೆಪಿಯಿಂದ ಸುರೇಶ್ ಅಂಗಡಿ ಪತ್ನಿ ಅಥವಾ ಪುತ್ರಿಯನ್ನು ಕಣಕ್ಕಿಳಿಸಲು ಶೆಟ್ಟರ್ ಆಸಕ್ತಿ

ಸುರೇಶ್ ಅಂಗಡಿ ನಿಧನರಾಗಿ ಇನ್ನೂ ವಾರವೂ ಕಳೆದಿಲ್ಲ. ಆಗಲೇ ಬೆಳಗಾವಿ ಬಿಜೆಪಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ. 

Published: 27th September 2020 03:39 PM  |   Last Updated: 27th September 2020 03:39 PM   |  A+A-


suresh angadi

ಸುರೇಶ್ ಅಂಗಡಿ

Posted By : Vishwanath S
Source : UNI

ಬೆಂಗಳೂರು: ಸುರೇಶ್ ಅಂಗಡಿ ನಿಧನರಾಗಿ ಇನ್ನೂ ವಾರವೂ ಕಳೆದಿಲ್ಲ. ಆಗಲೇ ಬೆಳಗಾವಿ ಬಿಜೆಪಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಚರ್ಚೆ ಜೋರಾಗಿದೆ. 

ಆಕಾಂಕ್ಷಿಗಳು ಸಂಘದ ಮುಖಂಡರ ನ್ನು ಮತ್ತು ಹೈಕಮಾಂಡ್ ನ್ನು ಸಂಪರ್ಕಿಸುವ ಕೆಲಸ ಶುರು ಮಾಡಿದ್ದಾರೆ. ಈಗಾಗಲೇ ಕೆಲವರ ಹೆಸರು ಓಡಾಡ ತೊಡಗಿದೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಠಾತ್ ನಿಧನದಿಂದ ಬಿಜೆಪಿ ಪಕ್ಷಕ್ಕೆ ಭಾರೀ ಆಘಾತವಾಗಿದೆ. ಮೊದಲ ಮೂರು ಅವಧಿಯಲ್ಲಿ ಕ್ಷೇತ್ರದಲ್ಲಿ ಸುರೇಶ ಅಂಗಡಿ ಜನಪರ ಕೆಲಸ ಮಾಡಲಿಲ್ಲ ಎನ್ನುವ ಆರೋಪವಿದೆ. ಆದರೆ ರೈಲ್ವೆ ಖಾತೆ ಸಚಿವರಾದ ನಂತರ ಅವರು ಹಳೆಯದನ್ನೆಲ್ಲ ಮರೆಸುವ ರೀತಿಯಲ್ಲಿ ಕೆಲಸ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದೆ.

ಬೆಳಗಾವಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯಕ್ಕೂ ರೈಲ್ವೆಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಈ ಭಾಗದ ದಶಕಗಳ ಇನ್ನಷ್ಟು ಕನಸುಗಳು ನನಸಾಗುವ ನಿರೀಕ್ಷೆಯನ್ನು ಮೂಡಿಸಿದ್ದರು.

Stay up to date on all the latest ರಾಜಕೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp