ಈಶ್ವರಪ್ಪ- ಯಡಿಯೂರಪ್ಪ ಅಸಮಾಧಾನ ಶಮನಕ್ಕೆ ಯತ್ನ; ಏಪ್ರಿಲ್ 8 ರಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ದೌಡು

ಉಪ ಚುನಾವಣೆ ಸಮಯದಲ್ಲಿ ವಿರೋಧಪಕ್ಷಗಳಿಗೆ ಸರ್ಕಾರವನ್ನು ಟೀಕೆ ಮಾಡಲು ಹೆಚ್ಚು ಅವಕಾಶ ಕೊಡಬಾರದು, ಆಹಾರವಾಗಬಾರದು ಎಂಬ ಉದ್ದೇಶದಿಂದ ಎಚ್ಚರಗೊಂಡ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಆಂತರಿಕ ಕಲಕ್ಕೆ ಬೇಗ ಮಂಗಳ ಹಾಡಲು ತೀರ್ಮಾನಿಸಿದೆ. 

Published: 03rd April 2021 01:11 PM  |   Last Updated: 03rd April 2021 01:56 PM   |  A+A-


Arun Singh

ಅರುಣ್ ಸಿಂಗ್

Posted By : Manjula VN
Source : UNI

ಬೆಂಗಳೂರು: ಉಪ ಚುನಾವಣೆ ಸಮಯದಲ್ಲಿ ವಿರೋಧಪಕ್ಷಗಳಿಗೆ ಸರ್ಕಾರವನ್ನು ಟೀಕೆ ಮಾಡಲು ಹೆಚ್ಚು ಅವಕಾಶ ಕೊಡಬಾರದು, ಆಹಾರವಾಗಬಾರದು ಎಂಬ ಉದ್ದೇಶದಿಂದ ಎಚ್ಚರಗೊಂಡ ಬಿಜೆಪಿ ಹೈಕಮಾಂಡ್ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಆಂತರಿಕ ಕಲಕ್ಕೆ ಬೇಗ ಮಂಗಳ ಹಾಡಲು ತೀರ್ಮಾನಿಸಿದೆ. 

ಇದೆ ಕಾರಣದಿಂದ ಬಿಜೆಪಿ ರಾಜ್ಯ ಉಸ್ತುವಾರಿ ಅರಣ್ಯ ಅವರನ್ನು ತರಾತುರಿಯಲ್ಲಿ ಬೆಂಗಳೂರಿಗೆ ಕಳುಹಿಸಿ ಕಲಹಕ್ಕೆ ತೇಪೆ ಹಾಕಲು ತೀರ್ಮಾನಿಸಿದೆ.

ಇದರ ಅಂಗವಾಗಿ 8 ರಂದು ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸಿ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ನಡುವೆ ಬಿಕ್ಕಟ್ಟು ಶಮನಕ್ಕೆ ತೇಪೆ ಹಾಕಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಬಿಜೆಪಿ ಸರ್ಕಾರದಲ್ಲಿ ಸಚಿವರು ಮತ್ತು ಮುಖ್ಯಮಂತ್ರಿ ನಡುವೆ ಶೀತಲಸಮರ ಬೀದಿಗೆ ಬಂದ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ಹೈ ಕಮಾಂಡ್ ಪಂಚರಾಜ್ಯಗಳ ಚುನಾವಣೆ ಹಾಗ ಉಪ ಚುನಾವಣೆ ನಡುವೆ ನಡೆಯುತ್ತಿರುವ ಬೆಳವಣಿಗೆಯನ್ನು ತಹಬದಿಗೆ ತರಲು ಬಿಜೆಪಿ ನಾಯಕರು ಮಂದಾಗಿದ್ದಾರೆ. 

ಅನುದಾನ ಹಂಚಿಕೆ, ಇಲಾಖೆಯಲ್ಲಿ ಹಸ್ತಕ್ಷೇಪ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಈಶ್ವರಪ್ಪ ಮತ್ತು ಮುಖ್ಯಮಂತ್ರಿ ನಡುವಿನ ಶೀತಲ ಸಮರಕ್ಕೆ ಬ್ರೇಕ್ ಹಾಕಲಿದ್ದಾರೆ ಎನ್ನಲಾಗಿದೆ. ಜೊತೆಗೆ ಮೂರು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಅರುಣ್ ಸಿಂಗ್ ಭಾಗವಹಿಸಲಿದ್ದಾರೆ.

ಇದೆ 8 ರಂದು ರಾಜ್ಯಕ್ಕೆ ಬರಲಿರುವ ಅವರು ಮೂರು ದಿನಗಳು ಪಕ್ಷ, ಸಂಘಟನೆ, ಉಪ ಚುನಾವಣೆ ತಯಾರಿ, ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮಾಡಿಕೊಂಡಿರುವ ಸಿದ್ದತೆಗಳ ಪ್ರಮುಖ ನಾಯಕರ ಜೊತೆ ಚೆರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಬೆಂಬಲಿತ ಶಾಸಕರು ಸಚಿವರ ಕಾರ್ಯವೈಖರಿ, ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಅರುಣ್ ಸಿಂಗ್ ಗೆ ದೂರು ನೀಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ಸಿಎಂ ನಿಷ್ಠರ ಬಣ ಮನವಿ ಮಾಡುವ ಸಾಧ್ಯತೆ ಇದೆ.


Stay up to date on all the latest ರಾಜಕೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp