ರಾಜೀನಾಮೆ ನೀಡಿ ಹೊರಗೆ ಹೋಗಿ ಟೀಕೆ ಮಾಡಿ: ರೆಬೆಲ್ ನಾಯಕ ಯತ್ನಾಳ್'ಗೆ ಸಚಿವ ನಿರಾಣಿ ಸವಾಲು
ಪಕ್ಷದ ಚಿನ್ನೆ ಮತ್ತು ನಮ್ಮ ಮುಖಂಡರ ಫೋಟೋಗಳನ್ನು ಹಾಕಿಕೊಂಡು ಆಯ್ಕೆಯಾಗಿ ಬಂದು, ಇದೀಗ ಪಕ್ಷದ ಹಿರಿಯ ವಿರುದ್ಧ ಟೀಕೆ ಮಾಡುವುದು, ಪಕ್ಷಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಟೀಕೆ ಮಾಡಲೇಬೇಕೆಂದಿದ್ದರೆ ರಾಜೀನಾಮೆ ನೀಡಿ ಹೊರಗೆ ಹೋಗಿ ಮಾತನಾಡಲಿ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಬಿಜೆಪಿ ಶಾಸಕ ಯತ್ನಾಳ್'ಗೆ ಸವಾಲು ಹಾಕಿದ್ದಾರೆ.
Published: 04th April 2021 08:19 AM | Last Updated: 04th April 2021 08:51 AM | A+A A-

ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು: ಪಕ್ಷದ ಚಿನ್ನೆ ಮತ್ತು ನಮ್ಮ ಮುಖಂಡರ ಫೋಟೋಗಳನ್ನು ಹಾಕಿಕೊಂಡು ಆಯ್ಕೆಯಾಗಿ ಬಂದು, ಇದೀಗ ಪಕ್ಷದ ಹಿರಿಯ ವಿರುದ್ಧ ಟೀಕೆ ಮಾಡುವುದು, ಪಕ್ಷಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ. ಟೀಕೆ ಮಾಡಲೇಬೇಕೆಂದಿದ್ದರೆ ರಾಜೀನಾಮೆ ನೀಡಿ ಹೊರಗೆ ಹೋಗಿ ಮಾತನಾಡಲಿ ಎಂದು ಸಚಿವ ಮುರುಗೇಶ್ ಆರ್.ನಿರಾಣಿ ಬಿಜೆಪಿ ಶಾಸಕ ಯತ್ನಾಳ್'ಗೆ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದ ವಿರುದ್ಧ ಮನಸೋ ಇಚ್ಛೆ ಮಾತನಾಡುವುದು ಉಂಡ ಮನೆಗೆ ದ್ರೋಹ ಮಾಡಿದಂತೆ. ಯಾರಾದರೂ ನಾಲಾಯಕ್ ಇದ್ದರೆ ಅದು ವಿಜಯಪುರದವ. ಆತ ಬಹಳ ಹಿರಿಯ. ಇನ್ಮುಂದೆ ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು ಎಂದು ಎಚ್ಚರಿಸಿದ್ದಾರೆ.
ಯತ್ನಾಳ್ ಏನೆಂದು ತಿಳಿದುಕೊಂಡಿದ್ದಾರೆ? ಪಕ್ಷದ ಹೈಕಮಾಂಡ್ ಸುಮ್ಮನಿದೆ ಎಂದು ಮನಸೋ ಇಚ್ಛೆ ಮಾತನಾಡುವುದು ಶೋಭೆಯಲ್ಲ. ಆತ ಮುಂದೆಯೂ ಸುಧಾರಿಸದಿದ್ದರೆ ಪಕ್ಷ ಕ್ರಮ ತೆಗೆದುಕೊಳ್ಳುತ್ತದೆ. ಇವರ ಎಲ್ಲಾ ನಡವಳಿಕೆಗಳನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಹೇಳಿದ್ದಾರೆ.