ಹೊಟೆಲ್ ಪಾವತಿ ವಿಚಾರ ಬಿಡಿ; ಮೊದಲು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲಿಗಾಗಿ ಏನು ಮಾಡಿದ್ದೀರಿ: ತೇಜಸ್ವಿ ಸೂರ್ಯಗೆ ಕಾಂಗ್ರೆಸ್ ತರಾಟೆ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲನ್ನು ಬಿಡುಗಡೆ ಮಾಡಿಸಲು ನೀವೇನು ಮಾಡಿದ್ದೀರಿ ಎಂದು ಕಾಂಗ್ರೆಸ್ ತೇಜಸ್ವಿ ಸೂರ್ಯಗೆ ಪ್ರಶ್ನೆ ಮಾಡಿದೆ.

Published: 04th April 2021 02:25 PM  |   Last Updated: 04th April 2021 02:26 PM   |  A+A-


MP Tejasvi Surya pay bill after breakfast

ಹೊಟೇಲ್ ನಲ್ಲಿ ತಿಂಡಿ ತಿಂದು ಬಿಲ್ ಪಾವತಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ

Posted By : Srinivasamurthy VN
Source : Online Desk

ಬೆಂಗಳೂರು: ಹೊಟೆಲ್ ನಲ್ಲಿ ತಿಂಡಿ ತಿಂದು ಪಾವತಿ ಮಾಡಿದ ಬಗ್ಗೆ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ತೈಜಸ್ವಿ ಸೂರ್ಯಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲನ್ನು ಬಿಡುಗಡೆ ಮಾಡಿಸಲು ನೀವೇನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದೆ.

ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಕೊಯಮತ್ತೂರಿನ ಅನ್ನಪೂರ್ಣ ಹೋಟೆಲ್‌ನಲ್ಲಿ ತಿಂಡಿ ಸೇವಿಸಿದ್ದರು. ಬಳಿಕ ಹೊಟೆಲ್ ನ ಕ್ಯಾಷಿಯರ್ ನಿರಾಕರಿಸಿದ್ದರೂ ಬಿಲ್ ಪಾವತಿಸಿದ್ದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು. 'ಎಲ್ಲರನ್ನು ಗೌರವಿಸುವ ಮತ್ತು  ಎಲ್ಲರನ್ನೂ ರಕ್ಷಿಸುವ ಪಕ್ಷ ಬಿಜೆಪಿ. ಸಣ್ಣ ವ್ಯಾಪಾರಿಗಳಿಂದಲೂ ರೋಲ್-ಕಾಲ್ ಮಾಡಲು ನಾವು ಡಿಎಂಕೆ ಅಲ್ಲ' ಎಂದು ಡಿಎಂಕೆ ಬಗ್ಗೆ ವ್ಯಂಗ್ಯವಾಡಿದ್ದರು. 

ಇದೇ ವಿಚಾರಕ್ಕೆ ಹೋಟೆಲ್ ಆಡಳಿತ ಮಂಡಳಿ ಫೇಸ್‌ಬುಕ್‌ನಲ್ಲಿ ನಯವಾಗಿಯೇ ತಿರುಗೇಟು ನೀಡಿತ್ತು. 'ಅನ್ನಪೂರ್ಣದಲ್ಲಿ ನಾವು ಎಲ್ಲರನ್ನೂ ಒಂದೇ ರೀತಿಯ ಪ್ರೀತಿಯಿಂದ ಸ್ವಾಗತಿಸುತ್ತೇವೆ. ಪ್ರತಿಯೊಬ್ಬರೂ ತಮ್ಮ ಬಿಲ್‌ಗಳನ್ನು ಪಾವತಿಸಲು ಮುಂದೆ ಬರುತ್ತಾರೆ. ಯಾರೂ ನಮ್ಮನ್ನು ಯಾವುದಕ್ಕೂ ಉಚಿತವಾಗಿ  ಒತ್ತಾಯಿಸಲಿಲ್ಲ. ಪ್ರೀತಿ ಮತ್ತು ಗೌರವದ ಸಂಕೇತವಾಗಿ ನಾವು ಕೆಲವೊಮ್ಮೆ ನಮ್ಮ ಸಮಾಜಕ್ಕಾಗಿ ಕೆಲಸ ಮಾಡುವ ಜನರಿಂದ ಹಣವನ್ನು ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಇದಕ್ಕೆ ಕರ್ನಾಟಕ ಕಾಂಗ್ರೆಸ್ ಇದೀಗ ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಪಾಲನ್ನು ಬಿಡುಗಡೆ ಮಾಡಿಸಲು ನೀವೇನು ಮಾಡಿದ್ದೀರಿ ಪ್ರಶ್ನೆ ಮಾಡಿದೆ. ‘ಹೋಟೆಲ್‌ನಲ್ಲಿ ನೀವು ತಿಂದಿರುವುದಕ್ಕೆ ಬಿಲ್ ಪಾವತಿಸಿರುವುದು ಸಹಜ. ಆ ಬಗ್ಗೆ ಹೆಮ್ಮೆಪಡುವುದರಿಂದ  ಅನುಕೂಲವಿಲ್ಲ. ಬದಲಿಗೆ, ಜಿಎಸ್‌ಟಿಯಲ್ಲಿ ರಾಜ್ಯದ ಪಾಲು ಪಡೆಯಲು ಒಬ್ಬ ಸಂಸದರಾಗಿ ಏನು ಮಾಡುತ್ತಿದ್ದೀರಿ ಹೇಳಿ. ಆದಾಗ್ಯೂ ನಿಮಗೆ ದೊಡ್ಡ ಬಿಲ್‌ಗಳ ಬಗ್ಗೆ ಮಾತನಾಡಬೇಕು ಎಂದಿದ್ದಲ್ಲಿ ‘ಸ್ಕ್ಯಾನಿಯಾ ಬಿಲ್ (ಸ್ಕ್ಯಾನಿಯಾ ಬಸ್ ಹಗರಣ)’ ಬಗ್ಗೆ ಬೆಳಕು ಚೆಲ್ಲುವ ಕಾಳಜಿ ತೋರಿ!’ ಎಂದು ಕರ್ನಾಟಕ ಕಾಂಗ್ರೆಸ್  ಟ್ವೀಟ್ ಮಾಡಿದೆ.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp