ಯಡಿಯೂರಪ್ಪ ರಾಜ್ಯದ ಕಣ್ಮಣಿ ಎಂದು ಹೊಗಳಿದ ಈಶ್ವರಪ್ಪ: ಡ್ಯಾಮೇಜ್ ಕಂಟ್ರೋಲ್ ಗೆ ಸರ್ಕಸ್!

ಕನಕದಾಸ ಜಯಂತಿಗೆ ರಜೆ ನೀಡಿದ್ದು ಯಡಿಯೂರಪ್ಪ, ಈ ಕಾರ್ಯವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಕಾರ್ಯಕ್ರಮದಲ್ಲಿ ಬಿಎಸ್‍ವೈ ಅವರನ್ನು ಸಚಿವ ಕೆ.ಎಸ್ ಈಶ್ವರಪ್ಪ ಗುಣಗಾನ ಮಾಡಿದರು.

Published: 05th April 2021 08:54 AM  |   Last Updated: 05th April 2021 12:42 PM   |  A+A-


Chief Minister B S Yediyurappa

ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಸಿಎಂ ಯಡಿಯೂರಪ್ಪ

Posted By : Shilpa D
Source : The New Indian Express

ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಕಣ್ಮಣಿಯಾಗಿದ್ದಾರೆ, ಕನಕದಾಸ ಜಯಂತಿಗೆ ರಜೆ ನೀಡಿದ್ದು ಯಡಿಯೂರಪ್ಪ, ಈ ಕಾರ್ಯವನ್ನು ಎಂದಿಗೂ ಮರೆಯುವಂತಿಲ್ಲ ಎಂದು ಕಾರ್ಯಕ್ರಮದಲ್ಲಿ ಬಿಎಸ್‍ವೈ ಅವರನ್ನು ಸಚಿವ ಕೆ.ಎಸ್ ಈಶ್ವರಪ್ಪ ಗುಣಗಾನ ಮಾಡಿದರು.

ಕಾಗಿನೆಲೆ ಕನಕಪೀಠದ ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ ಬಿಎಸ್‍ವೈ ನೇತೃತ್ವದಲ್ಲಿ ರಾಜ್ಯದಲ್ಲಿ ಮೀಸಲಾತಿಯನ್ನು ಶೇ. 50ಗಿಂತ ಜಾಸ್ತಿ ಮಾಡಲು ಬಜೆಟ್‍ನಲ್ಲಿ ಒಪ್ಪಿದ್ದೇವೆ. ಅಲ್ಲದೇ ಕನಕದಾಸ ಜಯಂತಿ ಆರಂಭಿಸಿದ್ದು ಬಿಜೆಪಿ ಸರ್ಕಾರ ಎಂದು ಹೇಳಿದರು.

ಪಾದಯಾತ್ರೆ ಆರಂಭಿಸಬೇಕೆಂದಾಗ ನಮಗೆ ಹೆದರಿಕೆಯಾಯಿತು. ಇದು ಸಾಧ್ಯವಾಗುತ್ತಾ ಎನ್ನುವ ಭಯವಿತ್ತು. ಅದರೆ, ಪಾದಯಾತ್ರೆ ಯಶಸ್ವಿಯಾಯಿತು. ಇಡೀ ಸಮುದಾಯ ಮತ್ತು ರಾಜಕಾರಣಿಗಳನ್ನುವನ್ನು ಪಾದಯಾತ್ರೆ ಒಂದು ಮಾಡಿತು. ಎಲ್ಲಾ ಸಮಾಜಗಳಿಗೂ ಮೀಸಲಾತಿ ಹೋರಾಟ ಮಾದರಿಯಾಯಿತು. ನಾವು ಕುರುಬ ಸಮಾಜಕ್ಕೆ ಮಾತ್ರ ಮೀಸಲಾತಿ ಕೇಳಲಿಲ್ಲ. ಕೋಲಿ, ಕುರುಬ, ಸವಿತಾ ಸಮಾಜ ಕೇಳಿದ್ದೇವೆ. ಇಬ್ಬರು ಸ್ವಾಮೀಜಿಗಳ ಪ್ರಯತ್ನ ಕುರುಬ ಸಮುದಾಯಕ್ಕೆ ಸೀಮಿತವಾಗಿಲ್ಲ. ಹಿಂದುಳಿದ ಸಮಾಜದ 35 ಸಮಾಜಗಳನ್ನು ಸೇರಿಸಿದ್ದರು ಎಂದರು.  

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp