ಹೈಕಮಾಂಡ್ ಗೆ ಪತ್ರ: ಮುಖಕೊಟ್ಟು ಮಾತನಾಡನಾಡದ ಬಿಎಸ್ ವೈ-ಈಶ್ವರಪ್ಪ; ಪ್ರತಿಕ್ರಿಯಿಸಲು ಸಿಎಂ ನಕಾರ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೇ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆ ಪ್ರಕರಣದ ನಂತರ ಮೊದಲ ಬಾರಿಗೆ ಭಾನುವಾರ ಸಿಎಂ ಜತೆಗೆ ವೇದಿಕೆ ಹಂಚಿಕೊಂಡರು. ಆದರೆ ಪರಸ್ಪರ ಮುಖ ಕೊಟ್ಟು ಮಾತನಾಡಲಿಲ್ಲ. 

Published: 05th April 2021 09:01 AM  |   Last Updated: 05th April 2021 12:42 PM   |  A+A-


Eshwarappa and yediyurappa

ಈಶ್ವರಪ್ಪ ಮತ್ತು ಯಡಿಯೂರಪ್ಪ

Posted By : Shilpa D
Source : The New Indian Express

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧವೇ ಪತ್ರ ಬರೆದಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆ ಪ್ರಕರಣದ ನಂತರ ಮೊದಲ ಬಾರಿಗೆ ಭಾನುವಾರ ಸಿಎಂ ಜತೆಗೆ ವೇದಿಕೆ ಹಂಚಿಕೊಂಡರು. ಆದರೆ ಪರಸ್ಪರ ಮುಖ ಕೊಟ್ಟು ಮಾತನಾಡಲಿಲ್ಲ. 

ಕಾಗಿನೆಲೆ ಕನಕಪೀಠದ ಹರಿಹರ ಬೆಳ್ಳೂಡಿ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಅಂತರ ಕಾಯ್ದುಕೊಂಡದ್ದು ಎದ್ದುಕಂಡಿತು. ‘ಕನಕ ಜಯಂತಿಗೆ ರಜೆ ನೀಡಿದವರು ಮುಖ್ಯಮಂತ್ರಿ ಯಡಿಯೂರಪ್ಪ’ ಎಂದು ಭಾಷಣ ಮಾಡುವಾಗ ಈಶ್ವರಪ್ಪ ಪ‍್ರಸ್ತಾಪಿಸಿದರಾದರೂ ಅವರ ನಡುವೆ ಆತ್ಮೀಯತೆ ಕಂಡುಬರಲಿಲ್ಲ.

ಕಾರ್ಯಕ್ರಮಕ್ಕಿಂತ ಮೊದಲು ಸುದ್ದಿಗಾರರ ಜತೆಗೆ ಮಾತನಾಡಲು ಈಶ್ವರಪ್ಪ ನಿರಾಕರಿಸಿದರು. ಯಡಿಯೂರಪ್ಪ ಮಾತನಾಡಿದರಾದರೂ, ಈಶ್ವರಪ್ಪ ಅವರ ಪತ್ರದ ಬಗ್ಗೆ ಕೇಳಿದಾಗ, ‘ಅದೆಲ್ಲ ಯಾಕೆ ಚರ್ಚೆ ಮಾಡುತ್ತೀರಿ’ ಎಂದಷ್ಟೇ ಪ್ರತಿಕ್ರಿಯಿಸಿದರು.

ನಾನು ಈ ವಿಷಯದ ಬಗ್ಗೆ ಈ ಮೊದಲು ಪ್ರತಿಕ್ರಿಯಿಸಿರಲಿಲ್ಲ, ಈಗಲೂ ಮಾತನಾಡುವುದಿಲ್ಲ ಎಂದು ಹೇಳಿದ ಸಿಎಂ ಯಡಿಯೂರಪ್ಪ ತುಟಿ ಬಿಚ್ಚದೇ ಸುಮ್ಮನಿದ್ದರು.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp