ಯೂತ್ ಕಾಂಗ್ರೆಸ್ ಭಿನ್ನಮತಕ್ಕೆ ಡಿಕೆಶಿ ತಂತ್ರ: ರಕ್ಷಾ ರಾಮಯ್ಯಗೆ ಮಸ್ಕಿ, ನಲಪಾಡ್ ಗೆ ಬಸವ ಕಲ್ಯಾಣ ಉಸ್ತುವಾರಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರಕ್ಷಾ ರಾಮಯ್ಯ, ಮೊಹಮ್ಮದ್‌ ನಲಪಾಡ್ ಇಬ್ಬರ ನಡುವಿನ ಮನಸ್ತಾಪವನ್ನು ಸರಿದೂಗಿಸಲು ಮುಂದಾಗಿದ್ದಾರೆ. ಅವರೆಲ್ಲಾ ನಮ್ಮ ಹುಡುಗರು ಎಂದು ಹೇಳುವ ಮೂಲಕ ಅಸಮಾಧಾನಕ್ಕೆ ತೆರೆ ಎಳೆಯಲು ಮಂದಾಗಿದ್ದಾರೆ.

Published: 05th April 2021 12:01 PM  |   Last Updated: 05th April 2021 12:38 PM   |  A+A-


dk shivakumar, Mohammed Nalapad. and Raksha Ramaiah

ಡಿಕೆ ಶಿವಕುಮಾರ್, ರಕ್ಷಾ ರಾಮಯ್ಯ ಮತ್ತು ನಲಪಾಡ್

Posted By : Shilpa D
Source : The New Indian Express

ಬೆಂಗಳೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ನಡೆದು ಸುಮಾರು 2 ತಿಂಗಳೇ ಕಳೆದಿವೆ, ಹಲವು ಅಡೆತಡೆಗಳ ನಡುವೆ ರಕ್ಷಾ ರಾಮಯ್ಯ ಅಧ್ಯಕ್ಷ ಎಂದು ಘೋಷಿಸಲಾಯಿತು.

ಚುನಾವಣೆಯಲ್ಲಿ ಕಣದಲ್ಲಿ ರಕ್ಷಾ ರಾಮಯ್ಯ ಅಧ್ಯಕ್ಷರಾಗಿ, ಎಚ್.ಎಸ್. ಮಂಜುನಾಥ್‌ ಉಪಾಧ್ಯಕ್ಷರಾಗಿ  ಆಯ್ಕೆಯಾಗಿದ್ದರು. ಇನ್ನೊಬ್ಬ ಅಭ್ಯರ್ಥಿ ಮೊಹಮ್ಮದ್‌ ನಲಪಾಡ್ ಅವರ ಫಲಿತಾಂಶವನ್ನೇ ತಡೆ ಹಿಡಿಯಲಾಗಿತ್ತು,

ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಏಳು ಮಂದಿ ನಾಮಪತ್ರ ಸಲ್ಲಿಸಿದ್ದರು. ಕೊನೆಯ ಹಂತದಲ್ಲಿ ದಕ್ಷಿಣ ಕನ್ನಡದ ಯುವ ಮುಖಂಡ ಮಿಥುನ್‌ ರೈ ಕಣದಿಂದ ಹಿಂದೆ ಸರಿದಿದ್ದರು. ಕಣದಲ್ಲಿದ್ದವರ ಪೈಕಿ, ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌, ಎನ್‌ಎಸ್‌ಯುಐ ಅಧ್ಯಕ್ಷ ಎಚ್. ಎಸ್. ಮಂಜುನಾಥ್ ಮತ್ತು ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಯುವ ಕಾಂಗ್ರೆಸ್‌ ಚುನಾವಣೆಯನ್ನು ‘ಫೇಮ್‌’ ಸಂಸ್ಥೆ ನಡೆಸಿತ್ತು. ರಕ್ಷಾ ರಾಮಯ್ಯ ಅವರಿಗಿಂತ ಮೊಹಮ್ಮದ್ ನಲಪಾಡ್‌ ಅವರು ಹೆಚ್ಚು ಮತಗಳನ್ನು ಪಡೆದಿದ್ದರೂ, ಅವರ ವಿರುದ್ಧ ಪ್ರಕರಣಗಳಿರುವ ಕಾರಣಕ್ಕೆ ನಲಪಾಡ್ ಅವರನ್ನು  ವಿಜಯಿ ಎಂದು ಘೋಷಿಸಲಿಲ್ಲ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರ ನಡುವಿನ ಮನಸ್ತಾಪವನ್ನು ಸರಿದೂಗಿಸಲು ಮುಂದಾಗಿದ್ದಾರೆ. ಅವರೆಲ್ಲಾ ನಮ್ಮ ಹುಡುಗರು ಎಂದು ಹೇಳುವ ಮೂಲಕ  ಅಸಮಾಧಾನಕ್ಕೆ ತೆರೆ ಎಳೆಯಲು ಮಂದಾಗಿದ್ದಾರೆ.

ಪರಸ್ಪರ ಬಡಿದಾಡಿಕೊಳ್ಳುವುದನ್ನು ತಪ್ಪಿಸಲು  ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದು,  ವಯಕ್ತಿಕವಾಗಿ ಇಬ್ಬರಿಗೂ ಜವಾಬ್ದಾರಿ ನೀಡಿದ್ದಾರೆ.

ರಕ್ಷಾ ರಾಮಯ್ಯ ಅವರಿಗೆ ಮಸ್ಕಿ ಹಾಗೂ ನಲಪಾಡ್ ಅವರಿಗೆ ಬಸವ ಕಲ್ಯಾಣ ಉಪ ಚುನಾವಣೆ ಜವಾಬ್ದಾರಿ ನೀಡಲಾಗಿದೆ.

ರಕ್ಷಾ ರಾಮಯ್ಯ ಮತ್ತವರ ತಂಡ ಮಸ್ಕಿಯಲ್ಲಿ ಬಿಜಿ ತುರುವಿಹಾಳ್ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರೇ, ಬಸವಕಲ್ಯಾಣದಲ್ಲಿ ನಲಪಾಡ್ ತಂಡ ಮಲ್ಲಮ್ಮ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp