ಬಿಜೆಪಿ ದೇಶಕ್ಕೊಂದು ಅಸ್ಮಿತೆ ಕೊಟ್ಟ ಪಕ್ಷ: ಸಿ.ಟಿ.ರವಿ

ಬಿಜೆಪಿ ಭಾರತ ದೇಶಕ್ಕೊಂದು ಅಸ್ಮಿತೆ ಕೊಟ್ಟು, ರಾಮಮಂದಿರ ಮೂಲಕ ಸಾಂಸ್ಕೃತಿಕ ಅಸ್ಮಿತೆ ನೀಡಿದೆ.ದೇಶ ಮೊದಲು ಎಂಬ ತತ್ವ ನಮ್ಮ ಪಕ್ಷದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

Published: 06th April 2021 03:29 PM  |   Last Updated: 06th April 2021 04:41 PM   |  A+A-


CT_Ravi1

ಸಿ.ಟಿ. ರವಿ

Posted By : Nagaraja AB
Source : UNI

ಬೆಂಗಳೂರು: ಬಿಜೆಪಿ ಭಾರತ ದೇಶಕ್ಕೊಂದು ಅಸ್ಮಿತೆ ಕೊಟ್ಟು, ರಾಮಮಂದಿರ ಮೂಲಕ ಸಾಂಸ್ಕೃತಿಕ ಅಸ್ಮಿತೆ ನೀಡಿದೆ.ದೇಶ ಮೊದಲು ಎಂಬ ತತ್ವ ನಮ್ಮ ಪಕ್ಷದ್ದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿ.ಟಿ.ರವಿ,ಬಿಜೆಪಿ ಪಕ್ಷ ಇವತ್ತು ಬಲಾಢ್ಯವಾಗಿ ಬೆಳೆದಿದ್ದು, ಪ್ರಸಕ್ತ ವಿಶ್ವದಲ್ಲಿ ಅತಿ ಹೆಚ್ಚು ರಾಜಕೀಯ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದೆ. ಅಲ್ಲದೇ ಇದು ಅತಿ ಹೆಚ್ಚು ಸಂಸದರು,ಶಾಸಕರು ಮಹಿಳಾ ಮತ್ತು ದಲಿತ ಸಮುದಾಯದವರನ್ನು ಹೊಂದಿರುವ ಪಕ್ಷವಾಗಿದೆ ಎಂದರು.

ನಮ್ಮ ಪಕ್ಷ ಎರಡು ಹಂತ ದಾಟಿದೆ. ಮೊದಲು ಜನ ಸಂಘದ ಮೂಲಕ ಮೂಲಕ ಕಾಶ್ಮೀರದ ಏಕತೆಗಾಗಿ ಶಾಮ ಪ್ರಸಾದ್ ಮುಖರ್ಜಿ ಶ್ರಮಿಸಿದ್ದು, ದೇಶಕ್ಕಾಗಿ ನೆಹರು ಸಂಪುಟದಿಂದ ಹೊರ ಬಂದು ದೇಶ ಮೊದಲು ಎನ್ನುವ ಪಕ್ಷ ಬೇಕಾಗುತ್ತದೆ ಎಂದು ಅರಿತು ಜನ ಸಂಘ ಸ್ಥಾಪಿಸಿದರು.ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಸ್ಥಾನ ಇತ್ತು. ಕಾಶ್ಮೀರ ಪ್ರವೇಶ ಮಾಡಲು ವಿಸಾ ತರೆಗೆದುಕೊಂಡು ಹೋಗುವ ಪರಿಸ್ಥಿತಿ ಇತ್ತು. ಅದನ್ನು ವಿರೋಧಿಸಿ ಶಾಮ ಪ್ರಸಾದ್ ಮುಖರ್ಜಿ ಕಾಶ್ಮೀರ್ ಪ್ರವೇಶ ಮಾಡಿದಂತಹ ಸಂದರ್ಭದಲ್ಲಿ ಅವರನ್ನು ಬಂಧಿಸಿದ್ದು, ಅಲ್ಲಿಯೇ ಮುಖರ್ಜಿ ನಿಧನ ಹೊಂದಿದರು. ಆದರೆ ಅವರ ಬಲಿದಾನ ವ್ಯರ್ಥವಾಗಲಿಲ್ಲ. ಕಾಶ್ಮೀರದ ಪ್ರತ್ಯೇಕ ಧ್ವಜ , ಸಂವಿಧಾನ ರದ್ದುಗೊಳಿಸಲಾಯಿತು ಆದರೆ, ವಿಶೇಷ ಸ್ಥಾನ ಮುಂದುವರೆಯಿತು. ಅದನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿ ದೇಶದಲ್ಲಿ ಒಂದೇ ಕಾನೂನು ಎಂದು ಸಾರಿದರು.

ದೀನ್ ದಯಾಳ್ ಉಪಾಧ್ಯಾಯ್ ಅವರ ಕೊಡುಗೆಯೂ ಪಕ್ಷಕ್ಕೆ ಇದೆ. ವಾಜಪೇಯಿ, ಅಡ್ವಾಣಿ ಅವರ ನಾಯಕತ್ವದಲ್ಲಿ 1980 ರಲ್ಲಿ ಬಿಜೆಪಿ ಉದಯಿಸಿ, 1984 ರಲ್ಲಿ ಮೊದಲ ಸಂಸತ್ ಚುನಾವಣೆ ಎದುರಿಸಲಾಯಿತು. ಆಗ ಬರೀ ಇಬ್ಬರು ಸಂ ವಾಜಪೇಯಿ ಅಡ್ವಾಣಿ ಸೋತರು. ಬೇರೆಯವರು ನಮ್ಮನ್ನು ದೋ ನಂಬರ್ ಪಕ್ಷ ಎಂದು ಲೇವಡಿ ಮಾಡಿದ್ದರು.ಎಲ್ಲ ವರ್ಗದ ಅಂತ್ಯೋದಯ ಯೋಜನೆಗಳು ನಮ್ಮ ಯೋಜನೆಗಳು ಅದಾನಿ ಅಂಬಾನಿ ಅನುಕೂಲಕ್ಕಾಗಿ ಅಲ್ಲ. ಕಟ್ಟಕಡೆಯ ಜನರಿಗೆ ತಲುಪಿಸುವ ಯೋಜನೆಗಳು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ ಎಂದು ತಿಳಿಸಿದರು.

ಅಟಲ್ ಜಿ ಕಾಲದಲ್ಲಿ ಸುವರ್ಣ ಚತುಸ್ಪತ ಯೋಜನೆ, ಗ್ರಾಮ್ ಸಡಕ್ ಯೋಜನೆಗಳು ಅವರ ಕೊಡುಗೆ ಈಗ ಆಡಳಿತ ಸುಧಾರಣೆ ಪರ್ವ ನಡೆಯುತ್ತಿದೆ. ಈಗ ನೂರು ರೂ. ಕೇಂದ್ರದಿಂದ ಬಂದರೆ ಅದು ಕಡೆಯ ವ್ಯಕ್ತಿಗೆ ತಲುಪುತ್ತದೆ.ಬಿಜೆಪಿಗೆ ರಾಜಕೀಯ ಉದ್ಯೋಗ ಅಲ್ಲ ಸೇವೆ. ಇದೆ ಧ್ಯೇಯದೊಂದಿಗೆ ಪಕ್ಷ ಹಾಗೂ ದೇಶ ಕಟ್ಟುವ ಕೆಲಸ ಮಾಡೋಣ ಎಂದು ಸಿ.ಟಿ.ರವಿ ಕರೆ ನೀಡಿದರು.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp