ಉರಿ ಬಿಸಿಲಿನ ನಡುವೆಯೇ ಮಸ್ಕಿಯಲ್ಲಿ ಕಾವೇರಿದೆ ಉಪ-ಚುನಾವಣಾ ಪ್ರಚಾರ!

ಮಸ್ಕಿ ವಿಧಾನಸಭೆ ಕ್ಷೇತ್ರಗದ ಉಪ ಚುನಾವಣೆಗೆ ಇನ್ನೂ ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮಸ್ಕಿಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.

Published: 06th April 2021 09:19 AM  |   Last Updated: 06th April 2021 12:56 PM   |  A+A-


congress rally in maski

ಮಸ್ಕಿಯಲ್ಲಿ ಕಾಂಗ್ರೆಸ್ ಪ್ರಚಾರ

Posted By : Shilpa D
Source : The New Indian Express

ಕಲಬುರಗಿ: ಮಸ್ಕಿ ವಿಧಾನಸಭೆ ಕ್ಷೇತ್ರಗದ ಉಪ ಚುನಾವಣೆಗೆ ಇನ್ನೂ ಕೇವಲ 15 ದಿನಗಳು ಮಾತ್ರ ಬಾಕಿ ಉಳಿದಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ನಡುವೆ ಮಸ್ಕಿಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.

ಮಸ್ಕಿಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದ ಕಾರಣ ಸಾಂಪ್ರಾದಾಯಿಕ ವೈರಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಎಲ್ಲಾ ರೀತಿಯ ತಂತ್ರ ನಡೆಸುತ್ತಿವೆ.

ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್ ಮತ್ತು ಕಾಂಗ್ರೆಸ್ ನಿಂದ ಬಸನಗೌಡ ಪಾಟೀಲ್ ತುರುವಿಹಾಳಿ ಸ್ಪರ್ಧಿಸಿದ್ದಾರೆ.  2018ರ ವಿಧಾನಸಭೆ ಚುನಾವಣೆ ನಂತರ ಇಬ್ಬರು ಅಭ್ಯರ್ಥಿಗಳು ಪಕ್ಷ ಬದಲಾಯಿಸಿದ್ದರು.

2018 ರಲ್ಲಿ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ತುರುವಿಹಾಳ್ ವಿರುದ್ಧ 213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಾಟೀಲ್ ಬಿಜೆಪಿ ಸೇರಿದರೇ, ತುರುವಿಹಾಳ್ ಕಾಂಗ್ರೆಸ್ ಸೇರ್ಪಡೆಯಾದರು.

ಪಾಟೀಲ್ ಪಕ್ಷ ತೊರೆದ ಹಿನ್ನೆಲೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಾಗಿದೆ, ಬಿಜೆಪಿ ಸೇರುವ ವೇಳೆ ಟಿಕೆಟ್ ನೀಡುವುದಾಗಿ ಪಾಟೀಲ್ ಅವರಿಗೆ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು, ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಅವರು ಮಾರ್ಚ್ 20 ರಂದು ಪಾಟೀಲ್ ಅವರ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದರು ಮತ್ತು ಮತದಾನದ ಮೊದಲು ಕ್ಷೇತ್ರದ ಎಲ್ಲಾ ಆರು ಜಿಲ್ಲಾ ಪಂಚಾಯಿತಿಗಳಿಗೆ ಭೇಟಿ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿದರು.

ಇನ್ನೂ ಪಾಟೀಲ್ ಅವರಿಗೆ ಸಹಾಯ ಮಾಡಲು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಕಳೆದ ಮೂರು ದಿನಗಳಿಂದ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ತುರುವಿಹಾಳ್ ಪರ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾರ್ಚಿ 29 ರಂದು ತುರುವಿಹಾಳ್ ನಾಮಪತ್ರ ಸಲ್ಲಿಸುವ ವೇಳೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರು ಹಾಜರಿದ್ದರು. ಬುಧವಾರ ಶಿವಕುಮಾರ್ ಮಸ್ಕಿಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.

2008,2013, ಮತ್ತು 2018 ರಲ್ಲಿ ಪಾಟೀಲ್ ನಿರಂತರವಾಗಿ ಮಸ್ಕಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು.  ಆದಾಗ್ಯೂ, ಕೊನೆಯ ಎರಡು ವಿಜಯಗಳು ಕಾಂಗ್ರೆಸ್ ಟಿಕೆಟ್‌ ನಿಂದ ಆಗಿದ್ದು. “ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದಿದ್ದರೂ, ಕಳೆದ ಬಾರಿ ಅವರ ಗೆಲುವಿನ ಅಂತರ ಕೇವಲ 213 ಮತಗಳು ಮಾತ್ರ.  ಆದರ ಈ ಬಾರಿ ಚುನಾವಣಾ ಪಲಿತಾಂಶವನ್ನು ಊಹಿಸುವುದು ಕಷ್ಟವಾಗಿದೆ.

Stay up to date on all the latest ರಾಜಕೀಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp