ಉಪಚುನಾವಣೆ: ಕಾರ್ಯಕರ್ತರ ಮನೋಸ್ಥೈರ್ಯ ಹೆಚ್ಚಿಸಲು ಮೋದಿ ಭಾಷಣದ ಟಾನಿಕ್!
ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಹಲವು ತಂತ್ರಗಳನ್ನು ಬಳಸುತ್ತಿದೆ, ಇದರಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಬಿಜೆಪಿ ಉತ್ತಮವಾಗಿ ಬಳಸಿಕೊಂಡಿದೆ.
Published: 07th April 2021 09:18 AM | Last Updated: 07th April 2021 09:18 AM | A+A A-

ನರೇಂದ್ರ ಮೋದಿ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಹಲವು ತಂತ್ರಗಳನ್ನು ಬಳಸುತ್ತಿದೆ, ಇದರಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಬಿಜೆಪಿ ಉತ್ತಮವಾಗಿ ಬಳಸಿಕೊಂಡಿದೆ.
ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿ ಲೋಕಸಭೆ ಉಪ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಸಂಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ಪ್ರಚಾರದ ಇಂಧನವಾಗಿ ಬಳಸಿಕೊಂಡಿದೆ.
ಬಿಜೆಪಿ ಯಶಸ್ಸು ಅದರ ಕಾರ್ಯಕರ್ತರಿಂದ ಬಂದಿದೆ ಎಂದು ಪ್ರಧಾನ ಮಂತ್ರಿ ಭಾಷಣದಲ್ಲಿ ಉಲ್ಲೇಖಿಸಿದ್ದರು, ಹೀಗಾಗಿ ಉಪ ಚುನಾವಣೆ ನಡೆಯಯುತ್ತಿರುವ ಕ್ಷೇತ್ರಗಳು ಸೇರಿದಂತೆ ಹಲವೆಡೆ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು.
ಸಂಸ್ಥಾಪನಾ ದಿನ ಮುಂಬರುವ ಉಪ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ಪಕ್ಷದ ಇತಿಹಾಸ, ನಮ್ಮ ನಾಯಕರುಗಳ ತ್ಯಾಗ,ವನ್ನು ನಾವು ಸ್ಮರಿಸಬೇಕು. ಪ್ರಧಾನಿ ಮೋದಿ ಭಾಷಣದಿಂದ ಪ್ರೇರೇಪಿತರಾದ ಕಾರ್ಯಕರ್ತರು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯಲು ಬದ್ಧರಾಗಿದ್ದಾರೆ ಎಂದು ಜಗದೀಶ್ ಶೆಟ್ಟ
ರ್ ಹೇಳಿದ್ದಾರೆ.
ಜಗದೀಶ್ ಶೆಟ್ಟರ್ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿ ಪರ ಬೆಳಗಾವಿಯಲ್ಲಿ ಪ್ರಚಾರ ನಡೆಸಿದರು. ಮಸ್ಕಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಪ್ರತಿ ಬ್ಲಾಕ್ ಅಧ್ಯಕ್ಷರ ನಿವಾಸದ ಹೊರಗೆ ಪಕ್ಷದ ಚಿಹ್ನೆಯೊಂದಿಗೆ ನಾಮಫಲಕವನ್ನು ಹಾಕುವ ಅಭಿಯಾನ ನಡೆಸಿದರು.
ಪ್ರತಿ ಚುನಾವಣೆಯಲ್ಲೂ ಈ ನಾಯಕರು ಮಾಡುವ ಕೆಲಸಗಳನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಪಕ್ಷದ ಧ್ವಜಗಳನ್ನು ಮನೆಗಳ ಮೇಲೆ ಮತ್ತು ಪಕ್ಷದ ಕಾರ್ಯಕರ್ತರ ಕಚೇರಿಗಳ ಮೇಲೆ ಹಾರಿಸಲಾಯಿತು.
ಬಸವಕಲ್ಯಾಣದಲ್ಲಿ ಕಾರ್ಯಕರ್ತರು ಮತ್ತು ಬೆಂಬಲಿಗರಿಗಾಗಿ ಪ್ರಧಾನ ಮಂತ್ರಿಗಳ ಭಾಷಣ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಪಾಲ್ಗೋಂಡಿದ್ದರು.