ಉಪ ಚುನಾವಣೆ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ? ಏಪ್ರಿಲ್ 18ರ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ

ಪಕ್ಷ ಮತ್ತು ಸರ್ಕಾರದ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಿಜೆಪಿ ಕೋರ್ ಕಮಿಟಿ ಏಪ್ರಿಲ್ 18 ರಂದು ಸಭೆ ಸೇರಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪಕ್ಷ ಮತ್ತು ಸರ್ಕಾರದ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಬಿಜೆಪಿ ಕೋರ್ ಕಮಿಟಿ ಏಪ್ರಿಲ್ 18 ರಂದು ಸಭೆ ಸೇರಲಿದೆ.

ಬೆಳಗಾವಿ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣೆಗಳು ಮುಗಿದ ನಂತರ ಸಭೆ ಸೇರಲಿದೆ, ಈಗಾಗಲೇ ಕೋರ್ ಕಮಿಟಿ ಪುನಾರಚನೆಯಾಗಿ 15 ದಿನಗಳೇ ಕಳೆದಿವೆ.  ಕೋರ್ ಕಮಿಟಿ ಸಭೆಯಲ್ಲಿ ಸಚಿವ ಈಶ್ವರಪ್ಪ ಅವರ ಪತ್ರ ಸಂಬಂಧ ಚರ್ಚೆ ನಡಯುವ ಸಾಧ್ಯತೆಯಿದೆ. 

ಇದರ ಜೊತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆಯೂ ಚರ್ಚಿಸಲಾಗುತ್ತದೆ. 

ಇನ್ನೂ ಸಚಿವರಾದ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ ಹಾಗೂ ಎಂಟಿಬಿ ನಾಗರಾಜ್ ಮತ್ತುಆರ್ .ಶಂಕರ್ ಅವರುಗಲಿಗೆ ಜಿಲ್ಲಾ ಉಸ್ತುವಾರಿ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುತ್ತದೆ, ಇದರಿಂದ ಹಾಲಿ ಇರುವ ಉಸ್ತುವಾರಿ ಸಚಿವರ ಬದಲಾವಣೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಸಿಎಂ ಯಡಿಯೂರಪ್ಪ ತಮ್ಮ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ ಎಂದು 50 ಶಾಸಕರು ದೂರು ನೀಡಿದ್ದುಇದರ ಬಗ್ಗೆಯು ಚರ್ಚೆ ನಡೆಯಲಿದೆ, ಮೂರು ಉಪಚುನಾವಣೆ ಮತ್ತು ಪಕ್ಷವನ್ನು ಬಲಗೊಳಿಸುವ ಬಗ್ಗೆಯೂ ಚರ್ಚಿಸಲಾಗುವುದು. 

ನಳಿನ್ ಕುಮಾರ್ ಕಟೀಲ್‌ ನೇತೃತ್ವದ ಕೋರ್‌ ಕಮಿಟಿಯಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿವಿ ಸದಾನಂದ ಗೌಡ ಇದ್ದಾರೆ. ಇನ್ನು ಸಚಿವರಾದ ಜಗದೀಶ್ ಶೆಟ್ಟರ್ , ಕೆ.ಎಸ್ ಈಶ್ವರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ , ಸಿ.ಎನ್ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಆರ್‌. ಅಶೋಕ್ , ಶ್ರೀರಾಮುಲು ಇದ್ದಾರೆ.

ಜೊತೆಗೆ ನಿರ್ಮಲ್ ಕುಮಾರ್ ಸುರಾನ ( ಬಿಜೆಪಿ ರಾಜ್ಯ ಉಪಾಧ್ಯಕ್ಷ) ಹಾಗೂ ಬಿಪಿ ಅರುಣ್ ಕುಮಾರ್ ( ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಘಟನೆ) ಇವರನ್ನು ಕೋರ್‌ ಕಮಿಟಿ ಒಳಗೊಂಡಿದೆ. ವಿಶೇಷ ಆಹ್ವಾನಿತರಾಗಿ ಅರುಣ್ ಸಿಂಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಡಿಕೆ ಅರುಣ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com