ಮೋದಿ ಗಡ್ಡ ಬಿಟ್ಟರೆ ಠಾಗೂರ್ ಆಗೋಲ್ಲ ಹೇಳಿಕೆ: ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಮಹಾತ್ಮರಾಗಲ್ಲ; ಖರ್ಗೆಗೆ ಬಿಜೆಪಿ ಟಾಂಗ್

ಕಲ್ಯಾಣ ಕರ್ನಾಟಕ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರೇ ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಮಹಾತ್ಮ ಆಗಲಾರರು. ಈ ನಿಯಮ ನಕಲಿ ಗಾಂಧಿ ಕುಟುಂಬಕ್ಕೆ ಅನ್ವಯ ಆಗುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

Published: 12th April 2021 03:52 PM  |   Last Updated: 12th April 2021 04:27 PM   |  A+A-


Mallikarjuna Kharge

ಮಲ್ಲಿಕಾರ್ಜುನ ಖರ್ಗೆ

Posted By : Shilpa D
Source : Online Desk

ಬೆಂಗಳೂರು: ಕಲ್ಯಾಣ ಕರ್ನಾಟಕ ವಿರೋಧಿ ಮಲ್ಲಿಕಾರ್ಜುನ ಖರ್ಗೆ ಅವರೇ ಗಾಂಧಿ ಹೆಸರಿಟ್ಟುಕೊಂಡ ಮಾತ್ರಕ್ಕೆ ಎಲ್ಲರೂ ಮಹಾತ್ಮ ಆಗಲಾರರು. ಈ ನಿಯಮ ನಕಲಿ ಗಾಂಧಿ ಕುಟುಂಬಕ್ಕೆ ಅನ್ವಯ ಆಗುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ನರೇಂದ್ರ ಮೋದಿ ಗಡ್ಡ ಬಿಟ್ಟುಕೊಂಡ ಮಾತ್ರಕ್ಕೆ ರವೀಂದ್ರನಾಥ್ ಠಾಗೋರ್ ಆಗುವುದಿಲ್ಲ ಎಂಬ ಖರ್ಗೆ ವ್ಯಂಗ್ಯ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಸಂಬಂಧ ಟ್ವೀಟ್  ಮಾಡಿರುವ ಬಿಜೆಪಿ ಗಾಂಧಿ ಹೆಸರು ಇಟ್ಟುಕೊಂಡ ಮಾತ್ರಕ್ಕೆ ಎಲ್ಲರು ಮಹಾತ್ಮರಾಗುವುದಿಲ್ಲ ಎಂದು ಟಾಂಗ್ ನೀಡಿದೆ.

'ಪ್ರಧಾನಿ ನರೇಂದ್ರ ಮೋದಿ ಗಡ್ಡಬಿಟ್ಟರೆ ರವೀಂದ್ರನಾಥ ಠಾಗೋರ್ ಆಗೋದಿಲ್ಲ.‌ ಪಶ್ಚಿಮ ಬಂಗಾಳ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡಿರುವ ನಕಲು ಇದಾಗಿದೆ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ‌ ಮಲ್ಲಿಕಾರ್ಜುನ ‌ಖರ್ಗೆ ಹೇಳಿದ್ದರು. ಮಸ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಪರ ಬಹಿರಂಗ ಸಭೆಯಲ್ಲಿ ಖರ್ಗೆ ಮಾತನಾಡಿದ್ದರು.
 

Stay up to date on all the latest ರಾಜಕೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp