ಕೇವಲ ಭಾಷಣ ಮಾಡುವುದಷ್ಟೇ ಬಿಜೆಪಿ ಸಾಧನೆ: ಸತೀಶ್ ಜಾರಕಿಹೊಳಿ

ಕೇವಲ ಭಾಷಣ ಮಾಡುವುದಷ್ಟೇ ಬಿಜೆಪಿಯ ಸಾಧನೆ, ಆದರೆ, ಎಂದಿಗೂ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಬುಧವಾರ ಹೇಳಿದ್ದಾರೆ. 

Published: 15th April 2021 07:37 AM  |   Last Updated: 15th April 2021 07:37 AM   |  A+A-


Satish Jarkiholi

ಸತೀಶ್ ಜಾರಕಿಹೊಳಿ

Posted By : Manjula VN
Source : The New Indian Express

ಬೆಳಗಾವಿ: ಕೇವಲ ಭಾಷಣ ಮಾಡುವುದಷ್ಟೇ ಬಿಜೆಪಿಯ ಸಾಧನೆ, ಆದರೆ, ಎಂದಿಗೂ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಸತೀಶ್ ಜಾರಕಿಹೊಳಿ ಬುಧವಾರ ಹೇಳಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್ ಜಾರಕಿಹೊಳಿ‌ ಅವರು ನಿನ್ನೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಅಬ್ಬರದ ಪ್ರಚಾರ ನಡೆಸಿದರು. 

ಈ ವೇಳೆಯಲ್ಲಿ ಸತೀಶ್ ಜಾರಕಿಹೊಳಿ‌ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮಾತಿನ ಮೂಲಕ ತಿರುಗೇಟು ನೀಡಿದರು. ನಮ್ಮದು ಕೇವಲ ಮಾತು ಅಷ್ಟೇ ಅಲ್ಲ, ಕೆಲಸ ಎಂದು ಟಾಂಗ್ ‌ಕೊಟ್ಟರು.

ನಮ್ಮ ಪರವಾಗಿ ಕ್ಷೇತ್ರದಲ್ಲಿ ಉತ್ತಮ ವಾತಾವರಣ ಇದೆ. ಕಾರ್ಯಕರ್ತರು ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಸೋಲಿನ ಭೀತಿಯಿಂದ ಸಿಎಂ ಬಿ ಎಸ್ ಯಡಿಯೂರಪ್ಪ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪರವಾಗಿ ನಾಳೆ ಯಾವುದೇ ನಾಯಕರು ಪ್ರಚಾರಕ್ಕೆ ಬರಲ್ಲ‌. ಅರಬಾವಿ ಕ್ಷೇತ್ರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ‌ ಬಿಜೆಪಿ ಪರ ಸಹಜವಾಗಿ ಕೆಲಸ ಮಾಡ್ತಾರೆ. ಅರಬಾವಿಯಲ್ಲಿ ನಮ್ಮ ಹಾಗೂ ಪಕ್ಷದ ಮತ ಬ್ಯಾಂಕ್ ಇದೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನ ಬೇಸತ್ತಿದ್ದಾರೆ. ಇದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು. 

ವಿಧಾನಸಭೆ ಸಭೆಯಲ್ಲಿ ಸತೀಶ್ ಒಮ್ಮೆಯೂ  ಕ್ಷೇತ್ರದ ಬಗ್ಗೆ ಮಾತನಾಡಿಲ್ಲ. ಇನ್ನೂ ಲೋಕಸಭೆಯಲ್ಲಿ ಏನು ಧ್ವನಿ ಎತ್ತುತ್ತಾರೆ ಎಂದು ಇತ್ತೀಚೆಗೆ ಸಚಿವ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದರು. 

ಇದಕ್ಕೆ ತಿರುಗೇಟು ನೀಡಿರುವ ಸತೀಶ್ ಜಾರಕಿಹೊಳಿಯವರು, ಸಚಿವ ಶೆಟ್ಟರ್ ಹೇಳುವುದರಲ್ಲಿ ಸತ್ಯಾಂಶವಿದೆ. ಬರೀ ಮಾತನಾಡುವುದೇ ಸಾಧನೆ ಆಗಬಾರದು. ಶೆಟ್ಟರ್ ಮೂರು ಗಂಟೆ ವಿಧಾನಸಭೆಯಲ್ಲಿ ಮಾತನಾಡಬೇಕಾದರೆ ಮೂರು ಗ್ಲಾಸ್ ನೀರು ಕುಡಿದು ಮಾತನಾಡುತ್ತಾರೆ. ಯಾವುದೇ ಕಚೇರಿಯನ್ನು ಶೆಟ್ಟರ್ ನೋಡಿಲ್ಲ. ಜನ ಸಾಮಾನ್ಯರ ಕಷ್ಟದ ಬಗ್ಗೆ ಶೆಟ್ಟರ್​ಗೆ ಗೊತ್ತಿಲ್ಲ. ಕೇವಲ ಭಾಷಣ ಮಾಡುವುದನ್ನೇ ಸಾಧನೆ ಎಂದು‌ ಕೊಂಡಿದ್ದಾರೆ. ಎಂ ಎಸ್ ಬಿಲ್ಡಿಂಗ್ ಎಲ್ಲಿದೆ ಎಂದು ಗೊತ್ತಿಲ್ಲ. ಭಾಷಣ ಮಾಡುವುದರಲ್ಲಿ ಶೆಟ್ಟರ್ ಪ್ರವೀಣರು. ಭಾಷಣಕ್ಕೂ ಕೆಲಸಕ್ಕೂ ತುಂಬಾ ವ್ಯತ್ಯಾಸ ಇದೆ. ಭಾಷಣಕ್ಕಿಂತ ಹೆಚ್ಚು ಕೆಲಸ ಮಾಡಿದ್ದು ನಮಗೆ ತೃಪ್ತಿ ಇದೆ ಎಂದು ಟಾಂಗ್ ನೀಡಿದರು. 

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp