'ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ?'

ವಲಸೆ ನಾಯಕ ಸಿದ್ದರಾಮಯ್ಯ ಅವರ ಬಣದೊಂದಿಗೆ ನೀವೂ ಸೇರಿಕೊಂಡು ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ? ಎಂದು ರಣದೀಪ್ ಸುರ್ಜೇವಾಲಾ ಗೆ ಬಿಜೆಪಿ ಟಾಂಗ್ ನೀಡಿದೆ.

Published: 16th April 2021 09:04 AM  |   Last Updated: 16th April 2021 12:34 PM   |  A+A-


Dk suresh and dk shivakumar

ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್

Posted By : Shilpa D
Source : Online Desk

ಬೆಂಗಳೂರು: ವಲಸೆ ನಾಯಕ ಸಿದ್ದರಾಮಯ್ಯ ಅವರ ಬಣದೊಂದಿಗೆ ನೀವೂ ಸೇರಿಕೊಂಡು ಕನಕಪುರದ ಸಹೋದರರಿಬ್ಬರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಲು ಶ್ರಮಿಸುತ್ತಿದ್ದೀರಾ? ಎಂದು ರಣದೀಪ್ ಸುರ್ಜೇವಾಲಾ ಗೆ ಬಿಜೆಪಿ ಟಾಂಗ್ ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ  ಸಂಸದ ಡಿಕೆ ಸುರೇಶ್‌ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನ ಬರಲು ಕಾರಣವೇನು? ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಪ್ರಶ್ನಿಸಿದೆ.

ಸತೀಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಗೆದ್ದು ಸಂಸದರಾದರೆ ಬಿಜೆಪಿ ಸಂಸದರಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದೆ ತಲೆಭಾಗಿ ಬೇಡುವುದಿಲ್ಲ ಎಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುರ್ಜೇವಾಲ ಹೇಳಿಕೆ ನೀಡಿದ್ದರು.

ಇದಕ್ಕೆ ಟ್ವಿಟ್ಟರ್‌ನಲ್ಲಿ ಟಾಂಗ್ ನೀಡಿರುವ ಬಿಜೆಪಿ, ನಿಮ್ಮ ಮಾತಿನ ಪ್ರಕಾರ ಕನಕಪುರದ ಮಹಾನಾಯಕನ ಸಹೋದರ ಡಿಕೆ ಸುರೇಶ್ ಅಸಮರ್ಥರೇ!? ಡಿಕೆ ಸುರೇಶ್‌ ಅವರ ಸಾಮರ್ಥ್ಯದ ಮೇಲೆ ನಿಮಗೆ ಅನುಮಾನ ಬರಲು ಕಾರಣವೇನು? ಎಂದು ಲೇವಡಿ ಮಾಡಿದೆ.

Stay up to date on all the latest ರಾಜಕೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp