'ನೀವು ಅದೆಷ್ಟೇ ಲೂಟಿಯ ಹಣ ಹಂಚಿದರೂ ಹೆದರುವವರು ಯಾರೂ ಇಲ್ಲ, ಭ್ರಮೆಗಳಿಗೆ ಮಿತಿ ಇರಲಿ!'

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕೆಸರೆರಚಾಟ ಮುಂದುವರಿದಿದೆ, ನಾನು ಬಂದಿರುವುದರಿಂದ ಕಾಂಗ್ರೆಸ್ ಗೆ ಹೆದರಿಕೆಯಾಗಿದೆ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಕೆಪಿಸಿಸಿ ತಿರುಗೇಟು ನೀಡಿದೆ.
ವಿಜಯೇಂದ್ರ
ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕೆಸರೆರಚಾಟ ಮುಂದುವರಿದಿದೆ, ನಾನು ಬಂದಿರುವುದರಿಂದ ಕಾಂಗ್ರೆಸ್ ಗೆ ಹೆದರಿಕೆಯಾಗಿದೆ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆಗೆ ಕೆಪಿಸಿಸಿ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್,  ವಿಜಯೇಂದ್ರ ಅವರೇ ತಾವು,  ಗ್ರಾಮ ಪಂಚಾಯ್ತಿ ಸದಸ್ಯರಲ್ಲ, ಶಾಸಕರಲ್ಲ, ಸಂಸದರಲ್ಲ, ವಿಧಾನ ಪರಿಷತ್ ಸದಸ್ಯರಲ್ಲ, ರಾಜ್ಯಸಭೆ ಸದಸ್ಯರಲ್ಲ, ಮುಖ್ಯಮಂತ್ರಿಯೂ ಅಲ್ಲ ಇದುವರೆಗೂ ಚುನಾವಣೆಯನ್ನೇ ಎದುರಿಸಿಲ್ಲ ವ್ಯಂಗ್ಯವಾಡಿದೆ. 

ನೀವು ಅದೆಷ್ಟೇ  ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ನ ಲೂಟಿಯ ಹಣ ಹಂಚಿದರೂ ಹೆದರುವವರು ಯಾರೂ ಇಲ್ಲ, ತಮ್ಮ ಭ್ರಮೆಗಳಿಗೆ ಮಿತಿ ಇರಲಿ! ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಟೀಕಿಸಿದೆ. 

ವಿರೋಧ ಪಕ್ಷದವರು ಆರೋಪ ಮಾಡುವುದು ಸಹಜ. ನಾನು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಬಂದಿರುವುದರಿಂದ ಕಾಂಗ್ರೆಸ್‌ ನಾಯಕರಿಗೆ ಸೋಲಿನ ಭಯ ಶುರುವಾಗಿದೆ. ಕಾಂಗ್ರೆಸ್‌ ನಾಯಕರು ಹತಾಶೆಗೊಂಡಿದ್ದಾರೆ. ಸೋಲುತ್ತೇವೆ ಎಂಬ ಭಯದಿಂದ ಹೀಗೆ ಆರೋಪ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com