ಜ್ವರದ ನಡುವೆಯೂ ಬಿಎಸ್'ವೈ ಭರ್ಜರಿ ಪ್ರಚಾರ: ತೀವ್ರ ಸುಸ್ತಿನಿಂದಾಗಿ ರೋಡ್ ಶೋ ಅರ್ಧಕ್ಕೆ ನಿಲ್ಲಿಸಿದ ಸಿಎಂ

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ್ವರದ ನಡುವೆಯೂ ಬಿರುಸಿನ ಪ್ರಚಾರ ನಡೆಸಿದರು. ಆದರೆ, ಕೆಲ ಸಮಯದ ಬಳಿಕ ತೀವ್ರ ಸುಸ್ತಿನಿಂದಾಗಿ ರೋಡ್ ಶೋ ಅರ್ಧದಲ್ಲೇ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸಾದರು.
ಪ್ರಚಾರದಲ್ಲಿ ತೊಡಗಿರುವ ಸಿಎಂ ಯಡಿಯೂರಪ್ಪ
ಪ್ರಚಾರದಲ್ಲಿ ತೊಡಗಿರುವ ಸಿಎಂ ಯಡಿಯೂರಪ್ಪ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಗುರುವಾಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜ್ವರದ ನಡುವೆಯೂ ಬಿರುಸಿನ ಪ್ರಚಾರ ನಡೆಸಿದರು. ಆದರೆ, ಕೆಲ ಸಮಯದ ಬಳಿಕ ತೀವ್ರ ಸುಸ್ತಿನಿಂದಾಗಿ ರೋಡ್ ಶೋ ಅರ್ಧದಲ್ಲೇ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸಾದರು. 

ಬೆಳಗಾವಿ ಲೋಕಸಭೆಗೆ ನಡೆಯುತ್ತಿರುವ ಉಪಚುನಾವಣೆಗೆ ಪ್ರಚಾರಕ್ಕಾಗಿ ಬುಧವಾರ ಎರಡನೇ ಬಾರಿಗೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಆದರೂ ಖಾಸಗಿ ಹೋಟೆಲ್ ನಲ್ಲಿ ಸ್ವಲ್ಪ ವಿಶ್ರಾಂತಿ ಪಡೆದುಕೊಂಡ ನಂತರ ಅರಬಾವಿ ಮತ್ತು ಗೋಕಾಕಗೆ ತೆರಳಿ ಪ್ರಚಾರಕ್ಕೆ ತೆರಳಿದರು. 

ನಂತರ ಗುರುವಾರ ಬೆಳಗಾವಿಯಲ್ಲಿ ಯಡಿಯೂರಪ್ಪ ರೋಡ್ ಶೋ ನಡೆಸುತ್ತಿದ್ದರು. ಶಿವಾಜಿ ಉದ್ಯಾನದಿಂದ ಆರಂಭವಾಗಿದ್ದ ರೋಡ್ ಶೋ ಮಹಾತ್ಮಪುಲೆ ರಸ್ತೆವರೆಗೆ ನಡೆಯಿತು. ಈ ವೇಳೆ ಜ್ವರ ತೀವ್ರವಾದ ಹಿನ್ನೆಲೆಯಲ್ಲಿ ರೋಡ್ ಶೋ ಅರ್ಧಕ್ಕೆ ಮೊಟಕುಗೊಳಿಸಿ ಹೋಟೆಲ್ ನತ್ತ ತೆರಳಿದರು. ನಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ್ ಶೆಟ್ಟರ್, ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ರೋಡ್ ಶೋ ಮುಂದುವರೆಯಿತು. 

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜ್ವರ, ಸುಸ್ತು, ನಿಶಕ್ತಿ ಹಿನ್ನೆಲೆ ಆರೋಗ್ಯ ತಪಾಸಣೆ ನಡೆಸಿರುವ ಖಾಸಗಿ ಆಸ್ಪತ್ರೆಯ ವೈದ್ಯರು, ವಿಶ್ರಾಂತಿಗೆ ಸಲಹೆ ನೀಡಿದ್ದರು. ಆದರೂ ಜ್ವರಬಾಧೆಯ ನಡುವೆಯೂ ಗುರುವಾರ ಬೆಳಿಗ್ಗೆ ಲಿಂಗಾಯತ ಮಠಗಳಿಗೆ ಭೇಟಿ ನೀಡಿ ಬಳಿಕ ವಿಪರೀತ ಬಿಸಿಲಿನಲ್ಲೇ ರೋಡ್ ಶೋ ನಡೆಸಿದ್ದರು. ಈ ವೇಳೆ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿಗಳಿಗೆ ಸುಸ್ತು ತೀವ್ರವಾಗಿ ಬಾಧಿಸಿತು. ಕೂಡಲೇ ರೋಡ್ ಶೋನಿಂದ ಹೋಟೆಲ್'ಗೆ ಹಿಂದುರುಗಿ ವಿಶ್ರಾಂತಿ ಪಡೆದರು. ನಂತರ ಸುರೇಶ್ ಅಂಗಡಿ ನಿವಾಸದಿಂದ ಮನೆ ಊಟ ತರಿಸಿ, ಊಟ ಮಾಡಿದ ಬಳಿಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. 

ಕಳೆದ ಎರಡು ದಿನಗಳಿಂದ ಯಡಿಯೂರಪ್ಪ ಅವರು ಜ್ವರದಿಂದ ಬಳಲುತ್ತಿದ್ದು, ಪ್ರಚಾರಕ್ಕೆ ತೆರಳುವುದಕ್ಕೂ ಮುನ್ನ ಕೊರೋನಾ ಪರೀಕ್ಷೆಗೊಳಗಾಗಿದ್ದರು. ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಬಳಿಕ ವೈದ್ಯರು ವಿಶ್ರಾಂತಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. 

ಮುಖ್ಯಮಂತ್ರಿಗಳು ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ವಿಶ್ರಾಂತಿಯಲ್ಲಿರಲಿದ್ದು, ನಂತರ ಬೆಂಗಳೂರಿನಲ್ಲಿ ಭಾನುವಾರ ಸಂಜೆ ವೇಳೆಗೆ ಕೊರೋನಾ ಪರಿಸ್ಥಿತಿ ಕುರಿತು ಸರ್ವಪಕ್ಷ ಸಭೆ ನಡೆಸಲುದ್ದಾರೆಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com