ಉಪ ಚುನಾವಣೆ ಮತದಾನಕ್ಕೆ ಸಿದ್ಧವಾಗುತ್ತಿದೆ ಮಸ್ಕಿ: ಶಾಂತಿ ಕಾಪಾಡಲು ಬಿಗಿ ಭದ್ರತೆ ವ್ಯವಸ್ಥೆ
ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಸಕಲ ತಯಾರಿ ನಡೆಸಿದ್ದಾರೆ
Published: 16th April 2021 11:12 AM | Last Updated: 16th April 2021 12:35 PM | A+A A-

ಸಾಂದರ್ಭಿಕ ಚಿತ್ರ
ಮಸ್ಕಿ: ಶನಿವಾರ ನಡೆಯುವ ಮಸ್ಕಿ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ ಜಿಲ್ಲಾಧಿಕಾರಿ ಆರ್ ವೆಂಕಟೇಶ್ ಕುಮಾರ್ ಸಕಲ ತಯಾರಿ ನಡೆಸಿದ್ದಾರೆ.
ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಏಪ್ರಿಲ್ 15ರಂದು ಮುಕ್ತಾಯವಾಗಿದೆ. ಇನ್ನು ಕೋವಿಡ್ ನಿಯಮಗಳ ಪ್ರಕಾರ ಮನೆ ಮನೆ ಪ್ರಚಾರ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಅವರು, ಏ.15ರ ಸಂಜೆ 7 ಗಂಟೆಯ ಬಳಿಕ ಕ್ಷೇತ್ರದವರಲ್ಲದವರು ಕ್ಷೇತ್ರ ಬಿಟ್ಟು ಹೋಗಬೇಕು. ಚುನಾವಣೆ ನೀತಿ ಸಂಹಿತೆ ಜಾರಿ ಬಳಿಕ ಇದುವರೆಗೆ 60 ದೂರು ದಾಖಲಾಗಿವೆ. 46 ಕೋವಿಡ್ ಪ್ರಕರಣ, 14 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಾಗಿವೆ. ಇದರಲ್ಲಿ 7 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಮತದಾನಕ್ಕಾಗಿ ಸಿಬ್ಬಂದಿಗಳಿಗೆ ಸರಿಯಾದ ತರಬೇತಿ ನೀಡಲಾಗಿದೆ. ಎಲ್ಲಾ ನಿರ್ಣಾಯಕ ಮತದಾನ ಕೇಂದ್ರಗಳು ಮತ್ತು ದುರ್ಬಲ ಪ್ರದೇಶಗಳಲ್ಲಿ ವೆಬ್‌ಕಾಸ್ಟಿಂಗ್ ಸೌಲಭ್ಯ, ಸೂಕ್ಷ್ಮ ವೀಕ್ಷಕರು ಮತ್ತು ವೀಡಿಯೋಗ್ರಾಫರ್‌ಗಳನ್ನು ನಿಯೋಜಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಮಾಸ್ಕಿಯ ದೇವನಾಂಪ್ರಿಯ ಅಶೋಕ ಪದವಿ ಕಾಲೇಜಿನಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮಸ್ಟರಿಂಗ್ ಪ್ರಾರಂಭವಾಗಲಿದೆ, ಶನಿವಾರ ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 2 ರಂದು ರಾಯಚೂರಿನ ಎಸ್‌ಆರ್‌ಪಿಎಸ್ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದರು.
ತ್ರದಲ್ಲಿ ಒಟ್ಟು 62 ಸೂಕ್ಷ್ಮ, 07 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣೆ ಕರ್ತವ್ಯಕ್ಕೆ 739 ಪೊಲೀಸ್ ಕಾನ್ಸ್ಟೆಬಲ್, 71 ಎಎಸ್ಐ, 25 ಪಿಎಸ್ಐ, 07 ಸಿಪಿಐ, 03 ಡಿಎಸ್ಪಿ, 1 ಸಿಆರ್ಪಿಎಫ್ ಮತ್ತು ಒಂದು ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.