ಉಪ ಚುನಾವಣೆ: ರಾಜ್ಯದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ, ನೀರಸ ಮತದಾನ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮತದಾನ ಗಣನೀಯ ಇಳಿಕೆಯಾಗಿದೆ.

Published: 18th April 2021 08:48 AM  |   Last Updated: 19th April 2021 12:45 PM   |  A+A-


A woman sanitises her hands before exercising her franchise at a polling booth in Basavakalyan

ಬಸವಕಲ್ಯಾಣದಲ್ಲಿ ಮತದಾನಕ್ಕೆ ಹೋಗುವ ಮುನ್ನ ಸ್ಯಾನಿಟೈಸ್ ಮಾಡಿಕೊಂಡ ಮಹಿಳೆ

Posted By : Sumana Upadhyaya
Source : The New Indian Express

ಬೆಳಗಾವಿ/ಕಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮತದಾನ ಗಣನೀಯ ಇಳಿಕೆಯಾಗಿದೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಮಾತ್ರ(ಪರಿಶಿಷ್ಟ ಪಂಗಡಕ್ಕೆ ಮೀಸಲು) ಶೇಕಡಾ 77.48ರಷ್ಟು ನಿನ್ನೆ ಮತದಾನವಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಡಾ ಕೆ ಹರೀಶ್ ಕುಮಾರ್, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇಕಡಾ 54.02ರಷ್ಟು ಮತದಾನವಾಗಿದೆ. ಬೆಳಗಾವಿಯ 8 ತಾಲ್ಲೂಕುಗಳಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾ 60.47ರಷ್ಟು ಮತದಾನವಾಗಿದ್ದು ಬೆಳಗಾವಿ ಉತ್ತರ ಭಾಗದಲ್ಲಿ ಅತಿ ಕಡಿಮೆ ಶೇಕಡಾ 42.88ರಷ್ಟು ಮತದಾನವಾಗಿದೆ.

ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗಿರುವುದರಿಂದ ಜನರು ತಮ್ಮ ಮನೆ ಬಿಟ್ಟು ಹೊರಬರಲು ಭಯಪಡುತ್ತಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ 188 ಪ್ರಕರಣಗಳು ದಾಖಲಾಗಿದ್ದು, ಮೊನ್ನೆ ಶುಕ್ರವಾರ 120 ಪ್ರಕರಣಗಳು ದಾಖಲಾಗಿದ್ದರೆ, ಬೀದರ್‌ನಲ್ಲಿ ನಿನ್ನೆ 359 ಮತ್ತು ಶುಕ್ರವಾರ 326 ಪ್ರಕರಣಗಳು ದಾಖಲಾಗಿವೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ 91 ಮತ್ತು ಶುಕ್ರವಾರ 108 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ಕ್ಷೇತ್ರದ ಅನೇಕ ಭಾಗಗಳಲ್ಲಿ ಬೀದಿಗಳು ನಿರ್ಜನವಾಗಿದ್ದವು, ಸಂಜೆ 5ರ ಹೊತ್ತಿಗೆ ಒಟ್ಟಾರೆ ಸರಾಸರಿ ಮತದಾನ ಕೇವಲ 47.6 ರಷ್ಟಿತ್ತು. ಬಸವಕಲ್ಯಾಣದಲ್ಲಿ ನಿನ್ನೆ ಸಂಜೆ ಶೇಕಡಾ 52.4 ಮತ್ತು ಮಸ್ಕಿಯಲ್ಲಿ ಶೇಕಡಾ 62.28 ರಷ್ಟಾಗಿತ್ತು.

ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ಪುತ್ರ ಅಮರನಾಥ ಜಾರಕಿಹೊಳಿ ಕೊರೋನಾ ಪಾಸಿಟಿವ್ ಆಗಿದ್ದು, ಗೋಕಾಕ್ ನ ಸ್ಥಳೀಯ ಮತಗಟ್ಟೆಯಲ್ಲಿ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದರು. ಹೆಚ್ಚಿನ ಮತದಾರರನ್ನು ಆಕರ್ಷಿಸುವ ಕ್ರಮಗಳ ಹೊರತಾಗಿಯೂ, ಬಸವಕಲ್ಯಾಣದಲ್ಲಿ ಉಪಚುನಾವಣೆ ನಿರೀಕ್ಷೆಯಂತೆ ವೇಗವನ್ನು ಗಳಿಸಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹೈ-ವೋಲ್ಟೇಜ್ ಪ್ರಚಾರವನ್ನು ಗಮನಿಸಿದರೆ, ರಾಜಕೀಯ ವಿಶ್ಲೇಷಕರು ಮತದಾರರ ಹೆಚ್ಚಿನ ಮತದಾನವನ್ನು ನಿರೀಕ್ಷಿಸಿದ್ದರು. ಇಲ್ಲಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಶೇ 64.56 ರಷ್ಟು ಮತದಾನವಾಗಿತ್ತು.

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ, ಸಾಯಂಕಾಲ ಹೊತ್ತಿಗೆ ಮತದಾರರು ಮತಗಟ್ಟೆಗಳಿಗೆ ಬರುವ ಸಂಖ್ಯೆ ಹೆಚ್ಚಾಯಿತು. ಇಲ್ಲಿ 2018 ರ ಚುನಾವಣೆಯಲ್ಲಿ ಶೇಕಡಾ 68.97 ರಷ್ಟು ಮತದಾನವಾಗಿದ್ದರೆ, ಬೆಳಗಾವಿಯಲ್ಲಿ ಮತದಾನದ ಕೊನೆಯಲ್ಲಿ, ಗೋಕಾಕ್ ಪಟ್ಟಣದ ಬೀದಿ ಮೂಲೆಯಲ್ಲಿ ಮಸಾಲಾ ದೋಸೆಯನ್ನು ಸವಿಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಮತದಾರರ ಕಳಪೆ ಮತದಾನದಿಂದಾಗಿ ಯಾವುದೇ ಸಂದೇಹವಿಲ್ಲದೆ ಗೆಲ್ಲುತ್ತೇನೆ ಎಂದು ಹೇಳಿದರು.

ತಮ್ಮ ಪತಿ ದಿವಂಗತ ಸುರೇಶ್ ಅಂಗಡಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಕರ್ನಾಟಕಕ್ಕೆ ತಂದ ಯೋಜನೆಗಳು ಗೆಲ್ಲಲು ಸಹಾಯವಾಗಲಿದ್ದು ತಾವು ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಮಂಗಳಾ ಅಂಗಡಿ ಕೂಡ ವ್ಯಕ್ತಪಡಿಸಿದ್ದಾರೆ.. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ. ಬಸವಕಲ್ಯಾಣ, ಮಸ್ಕಿ ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ, ಬೆಳಗಾವಿಯಲ್ಲಿ ಐದನೇ ನೇರ ಜಯವನ್ನು ಬಿಜೆಪಿ ಮುನ್ಸೂಚನೆ ನೀಡಿದರೆ, ಕಾಂಗ್ರೆಸ್ ಕೂಡ ಮೂರು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದು, ಜನಪ್ರಿಯ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಿದೆ.

Stay up to date on all the latest ರಾಜಕೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp