ಪರಿಸ್ಥಿತಿ ಕೈಮೀರುತ್ತಿದೆ, ಸರ್ಕಾರ ನಿಧಾನವಾಗಿ ವಾಸ್ತವ ಒಪ್ಪಿಕೊಳ್ಳುವ ಅನಿವಾರ್ಯ ಸೃಷ್ಟಿ: ಕಾಂಗ್ರೆಸ್ 

ಕೋವಿಡ್-19 ಪರಿಸ್ಥಿತಿ ಕೈಮೀರುತ್ತಿದೆ, ಸರ್ಕಾರ ನಿಧಾನಕ್ಕೆ ವಾಸ್ತವ ಒಪ್ಪಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಪರಿಸ್ಥಿತಿ ಕೈಮೀರುತ್ತಿದೆ, ಸರ್ಕಾರ ನಿಧಾನಕ್ಕೆ ವಾಸ್ತವ ಒಪ್ಪಿಕೊಳ್ಳುವ ಅನಿವಾರ್ಯ ಸೃಷ್ಟಿಯಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಯಾವ ಕೊರತೆಯೂ ಇಲ್ಲ ಎಂದೇ ವಾದಿಸುತ್ತಿದ್ದ ಸಚಿವ ಸುಧಾಕರ್ ಅವರೇ ,  ಅರ್ಥವಾಗಲು ಇಷ್ಟು ದಿನ ಬೇಕಾಯ್ತೇ? ಎಂದು ಪ್ರಶ್ನಿಸಿದೆ.  ಸೋಂಕಿನಿಂದಾದ ಸಾವುಗಳು, ಬರೀ ಸಾವುಗಳಷ್ಟೇ ಅಲ್ಲ, ಬೇಜವಾಬ್ದಾರಿ ಬಿಜೆಪಿ  ನಡೆಸಿದ ಕೊಲೆಗಳು ಎಂದು ಆರೋಪಿಸಿದೆ.

ಸರ್ಕಾರದ ಅಯೋಗ್ಯತನ ಸ್ವತಃ ಬಿಜೆಪಿ ನಾಯಕರಿಗೇ ತಿಳಿದಿದೆ. ಮೂರು ಡಿಸಿಎಂಗಳಿದ್ದೂ ಸಹ ರಾಜ್ಯದ ಯಾವುದೇ ಬಿಕ್ಕಟ್ಟುಗಳನ್ನು ನಿರ್ವಹಿಸಲು ಸೋತಿರುವುದನ್ನು ಬಿಜೆಪಿಗರೇ ಟೀಕಿಸುತ್ತಿದ್ದಾರೆ. ಸಾರಿಗೆ ನೌಕರರ ಬಿಕ್ಕಟ್ಟು, ಕೊರೋನಾ ನಿರ್ವಹಣೆ ಎಲ್ಲಾ ವಿಚಾರದಲ್ಲಿಯೂ ವಿಫಲವಾಗಿದೆ. ನಿಮ್ಮದೇ ನಾಯಕರ ಪ್ರಶ್ನೆಗೆ ಉತ್ತರವಿದೆಯೇ? ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. 

ಕೇಂದ್ರ ಸರ್ಕಾರಕ್ಕೆ ರಾಜ್ಯಪಾಲರಿಗೆ ಸಭೆ ಕರೆಯಲು ನಿರ್ದೇಶನ ನೀಡಿದ್ದೇಕೆ? ನಿಮ್ಮ ಸರ್ಕಾರದ ಮೇಲೆ ನಂಬಿಕೆ ಇಲ್ಲವೇ? ಚುನಾಯಿತ ಸರ್ಕಾರವೊಂದು ಇರುವಾಗಲೂ ಸಂವಿಧಾನದ ಯಾವ ನಿಯಮದ ಆಧಾರದಲ್ಲಿ ಈ ನಿರ್ದೇಶನ ನೀಡಿದೆ? ಎಂದು ಕಾಂಗ್ರೆಸ್ ಟೀಕಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com