ಯಡಿಯೂರಪ್ಪ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ? ಧೃತರಾಷ್ಟ್ರ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ!
ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
Published: 03rd August 2021 02:05 PM | Last Updated: 03rd August 2021 02:05 PM | A+A A-

ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿಸಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
#ಫ್ಯಾಮಿಲಿಜನತಾಪಾರ್ಟಿ ಆಗಿರುವ ಬಿಜೆಪಿಗೆ ವಂಶ ರಾಜಕಾರಣ ಬೆಳೆಸುವುದರಲ್ಲಿ ಬಹಳ ಆಸಕ್ತಿ!
— Karnataka Congress (@INCKarnataka) August 3, 2021
ರಾಜ್ಯದಲ್ಲಿ ಮೊದಲ ಬಾರಿ ಸಿಎಂ ಪುತ್ರನನ್ನು ಸಿಎಂ ಮಾಡಿದ ಹೆಗ್ಗಳಿಕೆಯೊಂದಿಗೆ ಈಗ ಚುನಾಯಿತ ಪ್ರತಿನಿಧಿಯೇ ಅಲ್ಲದ @BYVijayendraರನ್ನು ಸಚಿವರನ್ನಾಗಿಸಲು ಮುಂದಾಗಿದೆ.@BSYBJP ಮುಂದೆ ದೆಹಲಿ ಹೈಕಮಾಂಡ್ ಮಂಡಿಯೂರಿ ಶರಣಾಗಿದೆಯೇ @BJP4Karnataka?
ಹಿಂಬಾಗಿಲಲ್ಲಿ ಆಡಳಿತ ನಡೆಸುತ್ತಿದ್ದ 'ಸೂಪರ್ ಸಿಎಂ' ವಿಜಯೇಂದ್ರ ಅವರನ್ನು ಮುಂಬಾಗಿಲ ಮೂಲಕ ಕರೆತರಲು ಫ್ಯಾಮಿಲಿ ಜನತಾ ಪಾರ್ಟಿ ಸಜ್ಜಾಗಿದೆ. ವರ್ಗಾವಣೆ ದಂಧೆ, ಆಪರೇಷನ್ ಕಮಲ, ವಿಜಯೇಂದ್ರ ಸರ್ವೀಸ್ ಟ್ಯಾಕ್ಸ್ ಲೂಟಿ, ಭ್ರಷ್ಟಾಚಾರಗಳ ರೂವಾರಿ ಎಂದು ತಮ್ಮದೇ ಪಕ್ಷದವರ ಆರೋಪವಿದ್ದೂ ಸಂಪುಟ ಸೇರುತ್ತಿರುವುದು ಬಿಜೆಪಿಯ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದದು ಕಾಂಗ್ರೆಸ್ ಹರಿ ಹಾಯ್ದಿದೆ.
ತಾವು ವಿಪಕ್ಷಗಳಿಗೆ ಆರೋಪಿಸುತ್ತಿದ್ದ ಅದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲು ಬಿಜೆಪಿಗೆ ಬಹಳ ಉತ್ಸಾಹ, ಸಿಎಂ ನಂತರ ಈಗ ವಿಜಯೇಂದ್ರ ಸರದಿ! ಎಂಪಿ, ಎಂಎಲ್ಎ, ಎಂಎಲ್ಸಿ, ಯಾವುದೇ ಚುನಾಯಿತ ಪ್ರತಿನಿಧಿಯೇ ಅಲ್ಲದ ವಿಜಯೇಂದ್ರ ಅವರಿಗೆ ಸಂಪುಟ ಸ್ಥಾನ, ಯಡಿಯೂರಪ್ಪ ಅವರೇ, ಧೃತರಾಷ್ಟ್ರನ ಪುತ್ರಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ! ಎಂದು ಪ್ರಶ್ನಿಸಿದ್ದಾರೆ.