ಸಂಪುಟ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಬಿಜೆಪಿ: ವಿಪಕ್ಷಗಳ ತೀವ್ರ ಕಿಡಿ

ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಪ್ರಮಾಣವಚನ ಸ್ವೀಕಾರ ಮಾಡಿ ಹಲವು ದಿನಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಸಚಿವ ಸ್ಥಾನಕ್ಕಾಗಿ ಹೆಚ್ಚುತ್ತಿರುವ ಲಾಬಿ ಕುರಿತು ಪ್ರತಿಪಕ್ಷ ನಾಯಕರು ತೀವ್ರ ಕಿಡಿಕಾರಿದ್ದಾರೆ. 
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿಯವರು ಪ್ರಮಾಣವಚನ ಸ್ವೀಕಾರ ಮಾಡಿ ಹಲವು ದಿನಗಳು ಕಳೆದರೂ ಸಚಿವ ಸಂಪುಟ ವಿಸ್ತರಣೆ ವಿಳಂಬ ಹಾಗೂ ಸಚಿವ ಸ್ಥಾನಕ್ಕಾಗಿ ಹೆಚ್ಚುತ್ತಿರುವ ಲಾಬಿ ಕುರಿತು ಪ್ರತಿಪಕ್ಷ ನಾಯಕರು ತೀವ್ರ ಕಿಡಿಕಾರಿದ್ದಾರೆ. 

ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ವಾರಗಳು ಕಳೆದರೂ ಇನ್ನೂ ಸಚಿವ ಸಂಪುಟ ರಚನೆ ಆಗಿಲ್ಲ. ರಾಜ್ಯವು ಪ್ರವಾಹ, ಕೋವಿಡ್‌ನಿಂದ ಕಂಗೆಟ್ಟಿರುವ ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಏಕಾಂಗಿಯಾಗಿ ಕಾರ್ಯನಿರ್ವಹಿಸಬೇಕಿದೆ. ಈ ಬಗ್ಗೆ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಇದೀಗ ಮತ್ತೊಮ್ಮೆ ಸಂಪುಟ ರಚನೆ ವಿಳಂಬ ಕುರಿತು ಕಿಡಿಕಾರಿವೆ.

ಒಂದು ದಿನದಲ್ಲಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಾದರೆ, ಸಂಪುಟ ರಚನೆ ಏಕೆ ಮಾಡಲಾಗುತ್ತಿಲ್ಲ? ಸಂಪುಟ ರಚನೆ ಕುರಿತು ನಿರ್ಧಾರ ತೆಗೆದುಕೊಳ್ಳುಬೇಕಾದಾಗ ನೀರಸವಾಗಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ. 

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ನಿನ್ನೆಯಷ್ಟೇ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು ನೆರೆ ಪೀಡಿತರಿಕೆ ಸಾಂತ್ವನ ಹೇಳಿದರು. ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ ಗಂಭೀರ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಪ್ರವಾಹದಿಂದ ಸಾಕಷ್ಟು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಪಟ್ಟಿಯನ್ನು ಶೀಘ್ರಾತಿ ಶೀಘ್ರದಲ್ಲಿ ಕೇಂದ್ರದ ನಾಯಕರಿಗೆ ರವಾನಿಸಿ ನಿರ್ಧಾರಗಳನ್ನು ಸಂಪುಟ ರಚನೆ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಎರಡನೇ ಬಾರಿ ದೆಹಲಿಗೆ ಹೋಗುವ ಆಗತ್ಯವಿರಲಿಲ್ಲ. ಈ ಬೆಳವಣಿಗೆಯು ಸರ್ಕಾರದ ಬೇಜಾಬ್ದಾರಿಯನ್ನು ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ. 

ನೆರೆ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಾಗಿದ್ದು, ರಾಜ್ಯದಲ್ಲೂ ಪ್ರತೀನಿತ್ಯ 2,000 ಪ್ರಕರಣಗಳು ಪತ್ತೆಯಾಗುತ್ತಿದೆ. 3ನೇ ಅಲೆಗೆ ರಾಜ್ಯ ಕೂದಲೆಡೆ ಅಂತರದಲ್ಲಿದೆ. ಸರ್ಕಾರದ ಶೀಘ್ರದಲ್ಲಿ ಸಂಪುಟ ರಚನೆ ಮಾಡುವ ಅಗತ್ಯವಿದೆ. ಆದರೆ, ಪದೇ ಪದೇ ದೆಹಲಿಗೆ ಹೋಗುವುದು ಬಿಟ್ಟು, ಒಂದೇ ಬಾರಿ ಮಾಡಬೇಕು ಎಂದು ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿ ಶಾಸಕರ ವಿರುದ್ಧವೂ ಕಿಡಿಕಾರಿದ ಅವರು, ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಾ ಪ್ರತೀಯೊಬ್ಬರೂ ಬೆಂಗಳೂರಿನಲ್ಲಿದ್ದಾರೆ. ಇದು ಅವರಲ್ಲಿರುವ ಅಸೂಕ್ಷ್ಮತೆಯನ್ನು ಪ್ರತಿಬಿಂಬಿಸುತ್ತಿದೆ. ಬಿಜೆಪಿ ನಾಯಕರು ಬೇಜಾಬ್ದಾರಿಯುತ ಹಾಗೂ ಭ್ರಷ್ಟ ನಾಯಕರಾಗಿದ್ದಾರೆಂದು ತಿಳಿಸಿದ್ದಾರೆ. 

ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಜಾತ್ಯತೀತವಾದಕ್ಕೆ ತರ್ಪಣ ಬಿಟ್ಟು ಬಹಳ ದಿನವಾಯ್ತು. ನಾವಿದ್ದಾಗಿನ ಪಕ್ಷ ಅದಲ್ಲ. ಅಲ್ಲಿಂದ ಬೇರೆ ಪಕ್ಷಕ್ಕೆ ಬಂದವರೂ ಜೆಡಿಎಸ್‌ನವರಾಗ್ತಾರಾ? ನಾನು ಅಲ್ಲಿಂದಲೇ ಬಂದವನು, ಆರ್.ವಿ.ದೇಶಪಾಂಡೆ ಜನತಾ ಪಕ್ಷದಿಂದ ಬಂದವರು. ಹಾಗಂತ ನಾವೂ ಈಗ ಆ ಪಕ್ಷದವರು ಹೇಗಾಗ್ತೇವೆಯೇ ಎಂದು ಟೀಕಿಸಿದ್ದಾರೆ. 

ಇದರಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಿ, ಬಿಜೆಪಿ ಆಡಳಿತವನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಲಿ, ಅದೇ ಸಾಕು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಅತ್ಯಂತ ಕಠಿಣ ಪರಿಸ್ಥಿತಿ ಇದ್ದು, ಸಾಕಷ್ಟು ಸಮಸ್ಯೆಗಳಿವೆ. ಸಿಎಂ ಎರಡನೇ ಬಾರಿ ದೆಹಲಿಗೆ ಹೋಗಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಾ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇದೇ ಸಮಯವನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತಲ್ಲವೇ? ಪ್ರಮುಖ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಡೆಸುತ್ತಾರೆ. ಇದನ್ನೂ ಏಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲು ಸಾಧ್ಯವಾಗಲಿಲ್ಲ? ಇಂತಹ ಸರ್ಕಾರ ಹೊಂದಿರುವುದು ನಮ್ಮ ದೌರ್ಭಾಗ್ಯವಾಗಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com