'ಒಂದಕ್ಕೆ ಎರಡು ತೆಗೆಯಿರಿ, ಯಾವುದರಲ್ಲಿ ಹೊಡೀತಾರೋ ಅದರಲ್ಲೇ ಹೊಡೀರಿ' ಹೇಳಿಕೆಯಲ್ಲಿ ತಪ್ಪೇನಿದೆ?: ಈಶ್ವರಪ್ಪ ಸಮರ್ಥನೆ

ಒಂದಕ್ಕೆ ಎರಡು ತೆಗೀರಿ, ಯಾವುದರಲ್ಲಿ ಹೊಡೀತಾರೋ ಅದರಲ್ಲಿಯೇ ಹೊಡೀರಿ. ಯಾರೂ ಕೇಳೋದಿಲ್ಲ. ಏಕೆಂದರೆ ನಾವೀಗ ಸಮರ್ಥರು ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಹೇಳಿಕೆ ನೀಡಿದ್ದ ಕೆ. ಎಸ್‌. ಈಶ್ವರಪ್ಪ ಮತ್ತೆ ತಮ್ಮ ಮಾತುಗಳನ್ನ ಸಮರ್ಥಿಸಿಕೊಂಡಿದ್ದಾರೆ.
ಈಶ್ವರಪ್ಪ
ಈಶ್ವರಪ್ಪ

ಶಿವಮೊಗ್ಗ: ಒಂದಕ್ಕೆ ಎರಡು ತೆಗೀರಿ, ಯಾವುದರಲ್ಲಿ ಹೊಡೀತಾರೋ ಅದರಲ್ಲಿಯೇ ಹೊಡೀರಿ. ಯಾರೂ ಕೇಳೋದಿಲ್ಲ. ಏಕೆಂದರೆ ನಾವೀಗ ಸಮರ್ಥರು ಎಂದು ಬಿಜೆಪಿ ಕಾರ್ಯಕಾರಿಣಿಯಲ್ಲಿ ಹೇಳಿಕೆ ನೀಡಿದ್ದ ಕೆ. ಎಸ್‌. ಈಶ್ವರಪ್ಪ ಮತ್ತೆ ತಮ್ಮ ಮಾತುಗಳನ್ನ ಸಮರ್ಥಿಸಿಕೊಂಡಿದ್ದಾರೆ.

ನಾನು ಮತ್ತೆ ಸ್ಪಷ್ಟವಾಗಿ ಹೇಳುತ್ತೇನೆ. ಅದಕ್ಕೆ ಕೇರಳ ಉದಾಹರಣೆ ನೀಡಿದ್ದೇನೆ. ನಮಗೆ ಮೊದಲು ಎದುರಾಳಿಯನ್ನ ಎದುರಿಸುವ ಶಕ್ತಿ ಇರಲಿಲ್ಲ. ನಮ್ಮ ಜನಸಂಘದ ರಾಷ್ಟ್ರೀಯ ಅಧ್ಯಕ್ಷರು ಕೇರಳದಲ್ಲಿ ರಾಷ್ಟ್ರೀಯ ಅಧಿವೇಶನ ಮುಗಿಸಿ ಟ್ರೈನ್‌ನಲ್ಲಿ ವಾಪಸ್‌ ಆಗುತ್ತಿದ್ದ ಸಂದರ್ಭದಲ್ಲಿ ಮೊಗಲ್‌ಸರಾಯ್‌ ಎಂಬ ರೈಲ್ವೇ ನಿಲ್ದಾಣದಲ್ಲಿ ಕೊಲೆ ಮಾಡಿ. ಪ್ಲಾಟ್‌ಫಾರ್ಮ್‌‌ನಲ್ಲಿ ಬಿಸಾಡಿ ಹೋದರು. ಯಾರು ಕೊಲೆ ಮಾಡಿದರು ಎಂದು ತಿಳಿಯುವಷ್ಟೂ ನಮಗೆ ಅಂದು ಶಕ್ತಿ ಇರಲಿಲ್ಲ.

ಕೇರಳದಲ್ಲಿ ಶಾಖೆಗಳನ್ನ ನಡೆಸುತ್ತಿದ್ದ ಯುವಕರನ್ನ ಕೊಲೆ ಮಾಡುತ್ತಿದ್ದರು. ಅಂದು ಹಿರಿಯರು ಬಿ ಕಾಮ್‌ ಅಟ್ ಆಲ್‌ ಕಾಸ್ಟ್‌ ಎನ್ನುತ್ತಿದ್ದರು. ಎಂಥಹ ಸಂದರ್ಭ ಬಂದರೂ ಸುಮ್ಮನಿರಿ ಎನ್ನುತ್ತಿದ್ದರು. ಶಕ್ತಿ ಬಂದ ಮೇಲೆ ಫೇಸ್‌ ವಿದ್‌ ಸೇಮ್‌ ಸ್ಟಿಕ್‌' ಎಂದು ಈಶ್ವರಪ್ಪ ಹೇಳಿದ್ದಾರೆ.

ಉಡುಪಿಯಲ್ಲಿ ಕೊಟ್ಟಿಗೆಯಲ್ಲಿ ಹಸು ಕದಿಯುತ್ತಿದ್ದವರನ್ನ ಕೇಳಿದ್ದಕ್ಕೆ ಮಹಿಳೆಯನ್ನ ಚುಚ್ಚಿದ್ದರು. ದೂರು ನೀಡಿದರೇ ಅಂದು ದೂರು ತೆಗೆದುಕೊಳ್ಳುತ್ತಿರಲಿಲ್ಲ. ಏಕೆಂದರೆ ಅಂದು ಸಿದ್ದರಾಮಯ್ಯ ಸರ್ಕಾರವಿತ್ತು. ನಾನು ವಿಪಕ್ಷ ನಾಯಕನಾಗಿ ಅಂದು ಪ್ರಶ್ನಿಸಿದ್ದೆ. ಆದರೆ ಅಂದಿನ ಸಿಎಂ ಸಿದ್ದರಾಮಯ್ಯ, ನಿಮ್ಮಂಥ ಕೋಮುವಾದಿಗಳನ್ನ ಬಗ್ಗು ಬಡಿಯುತ್ತೇವೆ ಎಂದು ನನಗೆ ಹೇಳಿದ್ದರು. ಗೋಮಾತೆಯ ಶಾಪದಿಂದಲೇ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡರು. ಗೋಮಾತೆಯನ್ನ ಕೊಲ್ಲುತ್ತಿದ್ದ ಯುವಕರನ್ನೂ ಕೊಂದರು. ಆದರೆ ಸರ್ಕಾರ ಆರೋಪಿಗಳನ್ನ ರಕ್ಷಣೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com