'ಬಸವರಾಜ ಬೊಮ್ಮಾಯಿಯನ್ನು ನಾನು ಬಲ್ಲೆ, ಅವರಿಗಿರುವ ಅಪಾರ ಅನುಭವದಿಂದ ಉತ್ತಮ ಆಡಳಿತ ನೀಡಬಲ್ಲರು!'

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಾಗಿದ್ದಾಗ ಆಡಳಿತದಲ್ಲಿ ಉತ್ತಮ ಅನುಭವ ಹೊಂದಿದ್ದರು ಅವರು ಉತ್ತಮ ಆಡಳಿತವನ್ನು ನೀಡಬಲ್ಲರು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವರಾಗಿದ್ದಾಗ ಆಡಳಿತದಲ್ಲಿ ಉತ್ತಮ ಅನುಭವ ಹೊಂದಿದ್ದರು ಅವರು ಉತ್ತಮ ಆಡಳಿತವನ್ನು ನೀಡಬಲ್ಲರು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಹೇಳಿದ್ದಾರೆ.

ಅವರನ್ನು ನಾನು ವಯಕ್ತಿಕವಾಗಿ ಬಲ್ಲೆ, ಅವರಿಂದ ನಾನು ಉತ್ತಮ ಆಡಳಿತ ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.  ಸಿಎಂ ಬಸವರಾಜ ಬೊಮ್ಮಾಯಿ ದೇವೇಗೌಡರ ಮನೆಗೆ ಭೇಟಿ ನೀಡಿರುವುದು ಸಹಜ. ಅದಕ್ಕೆ ಬೇರೆ ಅರ್ಥ ಕಲ್ಪಿಸಿದರೆ ನಾವು ಸಣ್ಣವರಾಗುತ್ತೇವೆ. ದೇವೇಗೌಡರು ಹಲವು  ಸಂದರ್ಭಗಳಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮಾರ್ಗದರ್ಶನ
ಮಾಡುತ್ತಾರೆ. ನಾವು ಉನ್ನತ ಹುದ್ದೆಗೆ ಹೋದಾಗ ಆ ಕ್ಷೇತ್ರದ ಹಿರಿಯರನ್ನ ಭೇಟಿ ಮಾಡೋದು ಒಂದು ಸಂಪ್ರದಾಯ ಎಂದು ಪರಮೇಶ್ವರ್‌ ವ್ಯಾಖ್ಯಾನಿಸಿದರು.

ನಾನು ಉಪಮುಖ್ಯಮಂತ್ರಿಯಾಗಿದ್ದಾಗ ದೇವೇಗೌಡರನ್ನು ಭೇಟಿ ಮಾಡಿದ್ದೆ, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಪಂಚಮಸಾಲಿಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸುವಂತೆ ಬ್ಲಾಕ್‌ಮೇಲ್‌ ಮಾಡಬಾರದು. ಸೆಪ್ಟೆಂಬರ್‌ ಒಳಗಡೆ ಒಬಿಸಿ ಪಟ್ಟಿಗೆ ಸೇರಿಸಿ ಎನ್ನುವುದು ಬ್ಲಾಕ್‌ಮೇಲ್‌ ಆಗುತ್ತದೆ ಎಂದರು.

ಬಿಸಿ ವರ್ಗಗಳ ಪಟ್ಟಿ ಸಿದ್ದತೆ ನಿರ್ಧಾರ ಅಧಿಕಾರ ರಾಜ್ಯಕ್ಕೆ ಕೊಟ್ಟಿರೋದು ಸ್ವಾಗತಾರ್ಹ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಇದ್ದಾಗಲೂ ಈ ಪ್ರಸ್ತಾವನೆ ಇತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ಸಮುದಾಯಗಳು ಬೇರೆ ಬೇರೆ ಹೆಸರಿಟ್ಟು ಕೊಂಡಿವೆ. ಅಂಥವರಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಿಲು ಗೊಂದಲ ವಾಗುತಿತ್ತು. ರಾಜ್ಯ ಸರ್ಕಾರಕ್ಕೆ ಈ ಅಧಿಕಾರ ಕೊಟ್ಟಿರೋದು ಒಳ್ಳೆ ಬೆಳವಣಿಗೆ ಎಂದು ಹೇಳಿದರು.

ಮಾಜಿ ಸಚಿವ ಜಮೀರ್ ಅಹಮದ್ ಖಾನ್ ಮನೆ ಮೇಲೆ ಇಡಿ ದಾಳಿ ಮಾಡಿದ ನಂತರ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಭೇಟಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಇದೊಂದು ಸೌಜನ್ಯದ ಭೇಟಿಯಾಗಿರಬಹುದೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com