ದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮಹಿಳೆಯರು, ಯುವಕರತ್ತ ಹೆಚ್ಚಿನ ಗಮನ ಹರಿಸಬೇಕು: ಡಿ.ಕೆ. ಶಿವಕುಮಾರ್

ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮಹಿಳೆಯರು ಮತ್ತು ಯುವಕರತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ.
ಡಿಕೆ. ಶಿವಕುಮಾರ್
ಡಿಕೆ. ಶಿವಕುಮಾರ್

ಬೆಂಗಳೂರು: ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮಹಿಳೆಯರು ಮತ್ತು ಯುವಕರತ್ತ ಹೆಚ್ಚಿನ ಗಮನ ಹರಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ. 

ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ನಿನ್ನೆ ಏರ್ಪಡಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿರುವ ಅವರು, ದೇಶದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಎರಡು ವಿಚಾರಗಳಿಂದ ಮಾತ್ರ ಸಾಧ್ಯತೆಗಳಿವೆ. ಒಂದು ಮಹಿಳೆಯರು, ಮತ್ತೊಂದು ಯುವಕರು. ಈ ಎರಡೂ ಗುಂಪುಗಳು ದೇಶದಲ್ಲಿ ಬದಲಾವಣೆಗಳನ್ನು ತರಬಹುದು ಎಂದು ಹೇಳಿದ್ದಾರೆ. 

ಎರಡೂ ಗುಂಪುಗಳಿಗೆ ಕರ್ನಾಟಕದ ಕಾಂಗ್ರೆಸ್ ವಿಶೇಷ ಕಾರ್ಯಕ್ರಮಗಳನ್ನು ಆರಂಭಿಸುತ್ತಿದೆ. ಯುವ ಜನಾಂಗದಿಂದ ನಾಯಕರನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ನನಗೂ ಕೂಡ ಚೆನ್ನಾಗಿ ತಿಳಿದಿದೆ. ನೀವೆಲ್ಲರೂ ಕೂಡ ನಾಯಕರಾಗಲು ತಯಾರಾಗಬೇಕು. ನೀವು ಕೂಡ ಪ್ರತಿ ಕಾಲೇಜು ಮತ್ತು ಹಳ್ಳಿಗೆ ಭೇಟಿ ನೀಡಬೇಕೆಂದು ಯುವಕರಿಗೆ ತಿಳಿಸಿದ್ದಾರೆ.

ನಾವು ಡಿಜಿಟಲ್ ಯೂತ್ ಬಗ್ಗೆ ಸಂಭಾಷಣೆ ನಡೆಸಿದ್ದೇವೆ. ಇದು ಹೆಚ್ಚಿನ ಮತಗಳನ್ನು ಪಡೆಯಲು ಕಾರಣವಾಗುವುದಿಲ್ಲ. ಆದರೆ, ಪಕ್ಷವು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಯುವಂತೆ ಮಾಡಬೇಕು. ನಮ್ಮ ಕಾರ್ಯಯೋಜನೆಗಳು ಸಹಾಯ ಮಾಡುತ್ತದೆ. 

ಯುವಕರನ್ನು ನಾಯಕರನ್ನಾಗಿ ಪರಿವರ್ತಿಸಲು ಕೊಡುಗೆ ನೀಡುವವರು ನಿಜವಾದ ನಾಯಕರಾಗುತ್ತದೆ. ಹೆಚ್ಚು ಅಭಿಮಾನಿ, ಬೆಂಬಲಿಗರನ್ನು ಹೊಂದಿರುವವರಲ್ಲ. ಡಾ ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯನವರ ಕಾರ್ಯಕ್ರಮಗಳು, ನೀತಿಗಳು, ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡಿದ್ದರೆ, ಯಾವುದೇ ಚುನಾವಣೆಯಲ್ಲಿ ನಾವು ಸೋಲುತ್ತಿರಲಿಲ್ಲ ಎಂದಿದ್ದಾರೆ. 

ಇದೇ ವೇಳೆ ರಾಜಕೀಯದಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಮಾತನಾಡಿರುವ ಅವರು, ನೀವು ನಾಯಕನಾಗಲು ಬಯಸುತ್ತಿದ್ದಾರೆ ವಿಧಾನಸೌಧವನ್ನು ನೋಡಬೇಡಿ. ನನ್ನ ರಾಜಕೀಯ ಜೀವನ ಆರಂಭವಾದಾಗ ಮೊದಲು ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದೆ. ವಿಲಾಸ್ ರಾವ್ ದೇಶಮುಖ ಪಂಚಾಯತ್ ಮುಖ್ಯಸ್ಥರಾಗಿದ್ದರು. ಜವಹರಲಾಲ್ ನೆಹರು ಪುರಸಭೆಯ ಅಧ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಬೆಂಗಳೂರು ನಗರಪಾಲಿಕೆ ಸದಸ್ಯರಾಗಿದ್ದರು.

ಕಾರ್ಪೊರೇಟರ್ ಆಗಿ ರಾಜಕೀಯ ಜೀವನ ಆರಂಭಿಸಿದ ರಾಮಲಿಂಗಾ ರೆಡ್ಡಿ ಅವರು ಇಂದು ಎಲ್ಲಿದ್ದಾರೆ. ಮೇಲಕ್ಕೆ ಹೋಗಲು ನೀವು ಕೂಡ ಒಂದೊಂದೇ ಹೆಜ್ಜೆಯನ್ನು ಮುಂದಿಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com