ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಎಂಇಎಸ್-ಶಿವಸೇನೆ ತ್ರಿಕೋನ ಸ್ಪರ್ಧೆ

ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ತೀರಾ ವಿಭಿನ್ನವಾಗಿ ನಡೆಯಲಿದೆ, ಏಕೆಂದರೇ ಮೊಟ್ಟಮೊದಲ ಬಾರಿಗೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಇದೇ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ತೀರಾ ವಿಭಿನ್ನವಾಗಿ ನಡೆಯಲಿದೆ, ಏಕೆಂದರೇ ಮೊಟ್ಟಮೊದಲ ಬಾರಿಗೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

ಇಲ್ಲಿಯವರೆಗೆ, ಸ್ಪರ್ಧಿಸಿದ್ದ ಹೆಚ್ಚಿನ ಅಭ್ಯರ್ಥಿಗಳು ಚುನಾವಣೆಯಲ್ಲಿ ಕನ್ನಡ ಅಥವಾ ಮರಾಠಿ ಗುಂಪಿನಲ್ಲಿ ವಿಭಜನೆಯಾಗಿದ್ದರು. ಮೊದಲ ಬಾರಿಗೆ ಬಿಜೆಪಿ, ಕಾಂಗ್ರೆಸ್, ಎಂಇಎಸ್-ಶಿವಸೇನೆ, ಜೆಡಿಎಸ್ ಮತ್ತು ಎಐಎಂಐಎಂನಿಂದ ಅಧಿಕೃತವಾಗಿ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರವು ಬೆಳಗಾವಿಯಲ್ಲಿನ ಅನೇಕ ಪ್ರಮುಖ ರಾಜಕೀಯ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಏಕೆಂದರೆ ಈ ಹಿಂದೆ ಕನ್ನಡ ಮತ್ತು ಮರಾಠಿ ಗುಂಪುಗಳ ಹೆಚ್ಚಿನ ಅಭ್ಯರ್ಥಿಗಳು ಇವರನ್ನು ಬೆಂಬಲಿಸಿದ್ದರು.

ಈ ಹಿಂದೆ, ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರು ಸಾಮಾನ್ಯವಾಗಿ ಕನ್ನಡ ಅಥವಾ ಮರಾಠಿ ಗುಂಪುಗಳೊಂದಿಗೆ ಇಂಟರ್ನಲ್ ಅಂಡರ್ ಸ್ಟಾಂಡ್ ಹೊಂದಿದ್ದರು. ಇದುವರೆಗಿನ ಚುನಾವಣೆಗಳಲ್ಲಿ ಅವರೆಲ್ಲಾ ಒಟ್ಟುಗೂಡಿದರು. ಈ ಬಾರಿ ಕಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಮ್ಮದೇ ಅಭ್ಯರ್ಥಿಗಳನ್ನು ಹೊಂದಿರುವುದರಿಂದ, ಎಂಇಎಸ್-ಶಿವಸೇನಾ ಮೈತ್ರಿಕೂಟ, ಜೆಡಿಎಸ್ ಮತ್ತು ಎಐಎಂಐಎಂ ಅಭ್ಯರ್ಥಿಗಳ ಪ್ರವೇಶವು ಎರಡೂ ರಾಷ್ಟ್ರೀಯ ಪಕ್ಷಗಳ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.

ಬೆಳಗಾವಿಯಲ್ಲಿ ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಸಾಂಪ್ರದಾಯಿಕವಾಗಿ ಬಿಜೆಪಿ ಪರವಾಗಿರುವ ಬಹುಪಾಲು ಮರಾಠಿ ಮತಗಳು ಈಗ ಎಂಇಎಸ್-ಶಿವಸೇನಾ ಒಕ್ಕೂಟ ಮತ್ತು ಬಿಜೆಪಿ ನಡುವೆ ವಿಭಜನೆಯಾಗುತ್ತವೆ. ಮತಗಳ ವಿಭಜನೆ ತಪ್ಪಿಸಲು ಬಿಜೆಪಿ ಮತ್ತು ಶಿವಸೇನಾ-ಎಂಇಎಸ್ ಆಂತರಿಕ ಒಪ್ಪಂದ ಮಾಡಿಕೊಳ್ಳುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

ಎಐಎಂಐಎಂ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕಣದಲ್ಲಿ ಗೆಲ್ಲಲು ಕಾಂಗ್ರೆಸ್ ಗೂ ಕೂಡ ಅಷ್ಟೇ ಕಠಿಣವಾಗಿದೆ. ಆದಾಗ್ಯೂ, ಎಲ್ಲಾ ರಾಜಕೀಯ ಪಕ್ಷಗಳು ಸೆಪ್ಟೆಂಬರ್ 3 ನಗರ ಪಾಲಿಕೆ ಚುನಾವಣೆಗೆ ಮುಂಚಿತವಾಗಿ ತಮ್ಮ ರಾಜಕೀಯ ತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿವೆ.

ತಮ್ಮ ಪಕ್ಷವು  ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ವಾರ್ಡ್‌ಗಳಲ್ಲಿ ಗೆಲ್ಲಲು ಉತ್ಸುಕವಾಗಿದ್ದು ಉಜ್ವಲ ಅವಕಾಶವಿದೆ ಎಐಎಂಐಎಂ ನ ಹಿರಿಯ ನಾಯಕ, ಲತೀಫ್ ಖಾನ್ ಪಠಾಣ್ ಹೇಳಿದ್ದಾರೆ. "ನಮ್ಮ ಅಭ್ಯರ್ಥಿಗಳನ್ನು ಯಾವ ವಾರ್ಡ್‌ಗಳಲ್ಲಿ ನಿಲ್ಲಿಸಬೇಕು ಎಂಬುದನ್ನು ಕಂಡುಹಿಡಿಯಲು ನಾವು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಈಗಲೂ ಚರ್ಚಿಸುತ್ತಿದ್ದೇವೆ. ಬೆಳಗಾವಿಯಲ್ಲಿ ನಮ್ಮ ಪಕ್ಷಕ್ಕೆ ಸಿಗುತ್ತಿರುವ ಬೆಂಬಲವನ್ನು ಗಮನಿಸಿದರೆ, ನಾವು ಖಂಡಿತವಾಗಿಯೂ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೇವೆ" ಎಂದು ಅವರು ಹೇಳಿದರು.

ತಮ್ಮ ಪಕ್ಷವು ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ಹಲವಾರು ಸಂಭಾವ್ಯ ಅಭ್ಯರ್ಥಿಗಳನ್ನು ಹೊಂದಿದೆ ಎಂದು ಹಿರಿಯ ಜೆಡಿಎಸ್ ಮುಖಂಡ ಫೈಜುಲ್ಲಾ ಮಡಿವಾಲೆ ಹೇಳಿದ್ದಾರೆ. ಇತರ ಪಕ್ಷಗಳೊಂದಿಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.

ಸ್ಥಳೀಯ ಸಮಸ್ಯೆಗಳ ಮೇಲೆ ಪಾಲಿಕೆ ಚುನಾವಣೆಯನ್ನು ನಡೆಸಲಾಗುವುದು. ಚುನಾವಣೆ ಹತ್ತಿರವಾಗುತ್ತಿದ್ದರೂ, ಕಾಂಗ್ರೆಸ್ ಪಕ್ಷದ ನಾಯಕರು ಇನ್ನೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ ಅಥವಾ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆ ಎಂದು ನಿರ್ಧರಿಸಿಲ್ಲ. ಆದರೆ ಪಕ್ಷದ ಮೂಲಗಳು ಹೇಳುವಂತೆ, ಕೆಪಿಸಿಸಿ ಖಂಡಿತವಾಗಿಯೂ ಬಿಜೆಪಿ ಮತ್ತು ಜೆಡಿಎಸ್ ಅನ್ನು ಎದುರಿಸಲು ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸುತ್ತದೆ.

ಬೆಳಗಾವಿಯ 58 ವಾರ್ಡ್‌ಗಳಲ್ಲಿ ಬಹುತೇಕ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಂಇಎಸ್-ಶಿವಸೇನಾ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂದು ರಾಜಕೀಯ ಮುಖಂಡರು ಭವಿಷ್ಯ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com