ಗೋವಾ ವಿಧಾನಸಭೆ ಚುನಾವಣೆ: ಬಿಜೆಪಿ ಸರ್ಕಾರ ಕಿತ್ತೊಗೆಯಲು ಕಾಂಗ್ರೆಸ್ ಜೊತೆ ಗೋವಾ ಫಾರ್ವರ್ಡ್ ಪಾರ್ಟಿ ಮೈತ್ರಿ

ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಗೋವಾ ಫಾರ್ವರ್ಡ್ ಪಾರ್ಟಿ ನಿರ್ಧರಿಸಿದೆ.
ರಾಹುಲ್ ಗಾಂಧಿ ಜೊತೆ ಗೋವಾ ನಾಯಕರು
ರಾಹುಲ್ ಗಾಂಧಿ ಜೊತೆ ಗೋವಾ ನಾಯಕರು

ಬೆಂಗಳೂರು: ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಗೋವಾ ಫಾರ್ವರ್ಡ್ ಪಾರ್ಟಿ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ವಿಜಯ್ ಸರ್ದೇಸಾಯಿ ಮತ್ತು ಶಾಸಕ ಪ್ರಸಾದ್ ಗಾಂವ್ಕರ್ ಹಾಗೂ ವಿನೋದ್ ಪಾಲ್ಯೇಕರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಗೋವಾ ಕಾಂಗ್ರೆಸ್ ಘಟಕ ತಿಳಿಸಿದೆ.

ಗೋವಾದ 40 ವಿಧಾನಸಭಾ ಸ್ಥಾನಗಳ ಪೈಕಿ 14-15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಜಿಎಫ್‌ಪಿ ಪ್ರಬಲವಾಗಿರುವ ಏಳೆಂಟು ಕ್ಷೇತ್ರಗಳಲ್ಲಿ ಅದು ದುರ್ಬಲ ಪ್ರದರ್ಶನ ನೀಡಲಿದೆ ಎಂದು ಭಾವಿಲಾಗಿದೆ.

ಕರ್ನಾಟಕ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಎಂಎಲ್ಸಿ ಪ್ರಕಾಶ್ ರಾಥೋಡ್, ಪಕ್ಷದ ಮುಖಂಡರಾದ ಮನ್ಸೂರ್ ಅಲಿ ಖಾನ್ ಮತ್ತು ಸುನೀಲ್ ಹನಮಣ್ಣವರ್ ಅವರು ಜೊತೆಗಿರುವ ಫೋಟೋವನ್ನು ಗೋವಾ ಕಾಂಗ್ರೆಸ್ ಘಟಕ ಮತ್ತಪ ದಿನೇಶ್ ಗುಂಡೂರಾವ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಸರ್ದೇಸಾಯಿ ಅವರು ಯುವ ಕಾಂಗ್ರೆಸ್‌ನ ಮಾಜಿ ನಾಯಕರಾಗಿದ್ದು, ರಾಜ್ಯ ಪಕ್ಷದ ನಾಯಕರೊಂದಿಗಿನ ವೈಯಕ್ತಿಕ ಭಿನ್ನಾಭಿಪ್ರಾಯದಿಂದ ದೂರವಾಗುವ ಮೊದಲು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಮೈತ್ರಿಯಿಂದಾಗಿ ಜಾತ್ಯಾತೀತ ಮತಗಳು ಕ್ರೂಢೀಕರಣಗೊಳ್ಳಲಿವೆ ಎಂದು ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿದ ಹಿನ್ನೆಲೆಯಲ್ಲಿ ನಾಯಕರು ಮೈತ್ರಿಗೆ ಮುಂದಾಗಿದ್ದಾರೆ.

ನಾವು ಅರ್ತಮೆಟಿಕ್ ಬಗ್ಗೆ ಚರ್ಚಿಸಿಲ್ಲ.  ಚುನಾವಣಾ ಪೂರ್ವ ಮೈತ್ರಿಗೆ ನಾವು ಒಪ್ಪಿಗೆ ನೀಡಿದ್ದೇವೆ, ಇದು ಚುನಾವಣೋತ್ತರ ಸನ್ನಿವೇಶದಲ್ಲಿ ಸಹಾಯ ಮಾಡುತ್ತದೆ. ಕಾಂಗ್ರೆಸ್ ಬಹುಮತ ಪಡೆಯಲು ಈ ಮೈತ್ರಿ ಸಹಕಾರಿಯಾಗಲಿದೆ. ಕಾಂಗ್ರೆಸ್ ಮತ್ತು ಗೋವಾ ಫಾರ್ವರ್ಡ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚಿಸುತ್ತವೆ, ಅಂದರೆ ಜಾತ್ಯತೀತ ಮತಗಳು ವಿಭಜನೆಯಾಗುವುದಿಲ್ಲ ಎಂದು ವಿಜಯ್ ಸರ್ದೇಸಾಯಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ಮೈತ್ರಿಯು ಭ್ರಷ್ಟ ಮತ್ತು ಅಸಮರ್ಥ ಬಿಜೆಪಿ ಸರ್ಕಾರವನ್ನು ಜಯಿಸಲು ಸಹಾಯ ಮಾಡುತ್ತದೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಈ ಒಪ್ಪಂದ ಸಹಕಾರಿಯಾಗಲಿದೆ,  2017ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳನ್ನು ಪಡೆದುಕೊಂಡಿತ್ತು. ಜಿಎಫ್‌ಪಿ ಮೂರು ಸ್ಥಾನಗಳನ್ನು ಪಡೆದುಕೊಂಡಿತ್ತು ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಫಲಿತಾಂಶದ ನಂತರ , ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಕಾಂಗ್ರೆಸ್ ತನ್ನ ಮಾತನ್ನು ಉಳಿಸಿಕೊಂಡಿಲ್ಲ  ಬಿಜೆಪಿಯೊಂದಿಗೆ ಹೋಗಿದೆ ಎಂದು ಜಿಎಫ್‌ಪಿ ಆರೋಪಿಸಿದೆ.  ಈ ಬಾರಿ ಚುನಾವಣೆಗೆ ಇನ್ನೆರಡು ತಿಂಗಳಷ್ಟೇ ಬಾಕಿಯಿದ್ದು, ಚುನಾವಣಾ ಪೂರ್ವ ಮೈತ್ರಿಯ ಬಗ್ಗೆ ಕಾಂಗ್ರೆಸ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ ಎಂದುಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com