ಕೋವಿಡ್ ಮತ್ತು ಪ್ರವಾಹ ನಿರ್ವಹಣೆಗೆ ನಿಯೋಜಿಸಿದ್ದ ಸಚಿವರಿಗೆ ಈಗ ಪರಿಷತ್ ಚುನಾವಣೆ ಪ್ರಚಾರದ ಜವಾಬ್ದಾರಿ!

ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾದ ಸಚಿವರು ಈಗ  ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಭೈರತಿ ಬಸವರಾಜು
ಭೈರತಿ ಬಸವರಾಜು

ಬೆಂಗಳೂರು: ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾದ ಸಚಿವರು ಈಗ  ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ನಿರತರಾಗಿದ್ದಾರೆ.

ತಮಗೆ ವಹಿಸಿರುವ ಜಿಲ್ಲೆಗಳ ಜವಾಬ್ದಾರಿ ಜೊತೆಗೆ ಪ್ರಚಾರ ಕಾರ್ಯದಲ್ಲಿ ಓಡಾಡುತ್ತಿದ್ಗಾರೆ. ಇತ್ತೀಚೆಗೆ ನಡೆದ ಹಾನಗಲ್ ಉಪ ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ .

ದಾವಣೆಗೆರೆಯ ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಚಿವ ಭೈರತಿ ಬಸವರಾಜು ಅವರನ್ನು ನಿಯೋಜಿಸಲಾಗಿದೆ, ತಮ್ಮ ಸಚಿವಾಲಯದ ಕೆಲಸ ತಮ್ಮ ಕ್ಷೇತ್ರ ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಮೂರು ಕೆಲಸಗಳು ಪ್ರಮುಖವಾಗಿವೆ, ಯಾವುದನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ, ಪಕ್ಷದ ಪ್ರಚಾರ ಸಂಬಂಧ ಸಿಎಂ ಬೊಮ್ಮಾಯಿ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೌಖಿಕ ಆದೇಶ ನೀಡಿದ್ದಾರೆ.  ಸುಮಾರು 15 ಕ್ಷೇತ್ರಗಳಲ್ಲಿ ಕಡ್ಡಾಯವಾಗಿ ಗೆಲ್ಲಬೇಕಾಗಿದೆ, ಏಕೆಂದರೆ ಮಸೂದೆಗಳನ್ನು ಪಾಸು ಮಾಡಲು ಕೌನ್ಸಿಲ್ ನಲ್ಲಿ ಬಹುಮತ ಅತ್ಯಗತ್ಯ ಎಂದು ಹಿರಿಯ ಬಿಜೆಪಿ ನಾಕರೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com