ಕೊಟ್ಟ ಮಾತಿನಂತೆ ಲೋಕಸಭೆ ಸ್ಥಾನಕ್ಕೆ 2014ರಲ್ಲಿ ರಾಜೀನಾಮೆ ನೀಡುವ ಆಶಯ ಪ್ರಕಟಿಸಿದ್ದ ದೇವೇಗೌಡರು: ಮನವಿ ತಿರಸ್ಕರಿಸಿದ್ದ ಮೋದಿ
2014ರಲ್ಲಿ ಬಿಜೆಪಿ 276 ಸೀಟುಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಾವು ಲೋಕಸಭೆಯಿಂದ ನಿವೃತ್ತಿ ಹೊಂದುವುದಾಗಿ ದೇವೇಗೌಡರು ಸವಾಲು ಹಾಕಿದ್ದರು.
Published: 06th December 2021 12:02 AM | Last Updated: 06th December 2021 12:49 PM | A+A A-

ಮೋದಿ ಮತ್ತು ದೇವೇಗೌಡರು
ಮಂಡ್ಯ: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ತಮಗಿರುವ ಗೌರವವನ್ನು ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಬಿಜೆಪಿ 276 ಸೀಟುಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತಾವು ಲೋಕಸಭೆಯಿಂದ ನಿವೃತ್ತಿ ಹೊಂದುವುದಾಗಿ ಸವಾಲು ಹಾಕಿದ್ದರು.
ಇದನ್ನೂ ಓದಿ: ಪ್ರಧಾನಿ ಆಗಮನ ಅನಿಶ್ಚಿತ: ವಿವಿಧ ಯೋಜನೆಗಳ ಉದ್ಘಾಟನಾ ಕಾರ್ಯಕ್ರಮ ಮುಂದೂಡಿದ 'ಬೇಸ್'
ಅದರಂತೆ ಬಿಜೆಪಿ ಗೆದ್ದಾಗ ದೇವೇಗೌಡರು ತಮ್ಮ ಮಾತಿಗೆ ಬದ್ಧರಾಗಿ ನಿವೃತ್ತಿ ಹೊಂಡುವ ಆಶಯ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ನರೇಂದ್ರ ಮೋದಿ, ದೇವೇಗೌಡರನ್ನು ಖುದ್ದಾಗಿ ಆಮಂತ್ರಿಸಿದ್ದರು.
ಇದನ್ನೂ ಓದಿ: ಸೋಮವಾರ ನವದೆಹಲಿಯಲ್ಲಿ ನರೇಂದ್ರ ಮೋದಿ- ಪುತಿನ್ ಮಹತ್ವದ ಮಾತುಕತೆ: ಭದ್ರತೆ, ವ್ಯಾಪಾರ ಕ್ಷೇತ್ರದ ಯೋಜನೆಗಳಿಗೆ ಅಂಕಿತ
ಎಲ್ಲಾ ಸಂಭ್ರಮ ಮುಗಿದ ನಂತರ ತಾವು ಮೋದಿಯನ್ನು ಭೇಟಿಯಾಗಲು ಅಪಾಯಿಂಟ್ ಮೆಂಟ್ ಪಡೆದೆ. ಭೇಟಿ ದಿನದಂದು ನನ್ನನ್ನು ಬರಮಾಡಿಕೊಳ್ಳಲು ಮೋದಿಯವರೇ ಬಂದಿದ್ದರು ಎಂದು ದೇವೇಗೌಡರು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿರುವ ಉತ್ತರಾಖಂಡ್ ರಾಜ್ಯಕ್ಕೆ 18 ಸಾವಿರ ಕೋಟಿ ರೂ. ಮೊತ್ತದ ಯೋಜನೆ ಘೋಷಿಸಿದ ಪ್ರಧಾನಿ ಮೋದಿ
ಆ ಸಂದರ್ಭದಲ್ಲಿ ನಿವೃತ್ತಿ ಹೊಂದದಂತೆ ಮೋದಿ ತಮ್ಮ ಮನವೊಲಿಸಿದರು ಎಂದು ದೇವೇಗೌಡರು ಮೆಲುಕು ಹಾಕಿದ್ದಾರೆ.
ಇದನ್ನೂ ಓದಿ: ಕಳೆದ ವರ್ಷ ಎಟಿಎಂ ನಿಂದ ಹಣ ಹಿಂತೆಗೆತಕ್ಕಿಂತಲೂ ಮೊಬೈಲ್ ಪೇಮೆಂಟ್ ಗಳೇ ಹೆಚ್ಚು!